ಕಥೆ ಕೇಳಿ…
ಭಗವಾನ್ ಬುದ್ಧ ಶಿಷ್ಯನ ಜೊತೆಗೆ ಭಿಕ್ಷಾಟನೆಗೆ ಹೊರಟಿದ್ದ. ಭಿಕ್ಷೆ ಬೇಡ್ತಾ ಬೇಡ್ತಾ ನೋಡ್ತಾರೆ, ಮಹಡಿಗಳ ಮೇಲೆ ಮಹಡಿ ಕಟ್ಟಿರುವಂತಹ ಬೃಹದಾಕಾರವಾದಂತಹ ಮನೆ. ಇನ್ನೇನು ಆ ಮನೆಯೊಳಗೆ ಹೋಗ್ಬೇಕು ಅಂತ ಬುದ್ಧ ಯೋಚನೆ ಮಾಡ್ತಾನೆ. ಅಷ್ಟೊತ್ತಿಗೆ ಶಿಷ್ಯ ಕೈ ಹಿಡಿದು ತಡಿದು ನಿಲ್ಲಿಸ್ತಾನೆ. ಭಗವಾನ್, ಬೇರೆ ಯಾವುದಾದ್ರೂ ಮನೆಗೆ ಹೋಗೋಣ, ಈ ಮನೆಗೆ ಮಾತ್ರ ಬೇಡ ಅಂತ ಅಂದ. ಬುದ್ಧ ಕೇಳಿದ, ಯಾಕೆ ? ಬೇರೆ ಮನೆಗೆ ಹೋಗ್ತೀವಂತೆ, ಈ ಮನೆಗೆ ಯಾಕೆ ಬೇಡ ? ಶಿಷ್ಯ ಹೇಳ್ತಾನೆ, ಭಗವಂತ.. ಈ ಮನೆಯ ಯಜಮಾನ, ಅವನು… ಅವನಲ್ಲಿ ಭಕ್ತಿ ಇದೆ ನಿಜ, ಆದರೆ ಪರಮ ಕೋಪಿಷ್ಠ. ತನಗೆ ಕೋಪ ಬಂತು ಅಂತ ಅಂದ್ರೆ ಎದುರುಗಡೆ ಇರುವಂತಹ ವ್ಯಕ್ತಿ ಯಾರು ಅಂತ ಗೊತ್ತಿಲ್ಲದಿರುವ ಪರಿವೆಯೇ ಇಲ್ಲದಂತೆ ಪ್ರತಿಕ್ರಿಯಿಸಿಬಿಡ್ತಾನೆ. ಅದಕ್ಕೋಸ್ಕರ ಈ ಮನೆ ಬಿಟ್ಟು ಇನ್ಯಾವುದಾದರೂ ಮನೆಗೆ ಹೋಗೋಣ ಭಗವಂತ ಅಂತ ಅಂದ. ಬುದ್ಧ ಮನಸ್ಸಿನಲ್ಲಿಯೇ ನಕ್ಕ. ಬೇರೆ ಮನೆಗೆ ಹೋಗದೆ ಇದ್ದರೂ ಪರವಾಗಿಲ್ಲ, ಈ ಮನೆಗಂತೂ ಭಿಕ್ಷಾಟನೆಗೆ ಹೋಗಲೇಬೇಕು ಅಂತ ಯೋಚನೆ ಮಾಡಿ, ಮನೆಯ ಗೇಟನ್ನು ತೆರೆದ. ಭವತಿ ಭಿಕ್ಷಾಂದೇಹಿ, ಭವತಿ ಭಿಕ್ಷಾಂದೇಹಿ ಅಂತ ಅಂದ. ಮಹಡಿ ಮೇಲೆ ನಿಂತ್ಕೊಂಡು ನೋಡ್ತಾನೆ ಮನೆಯ ಯಜಮಾನ, ನನ್ನ ಮನೆ ಬಾಗಿಲಿಗೆ ಬುದ್ಧ ಬಂದು ಬಿಟ್ಟಿದ್ದಾನೆ. ಬಹಳ ಆನಂದ ಆಯ್ತು. ಸಡಗರದಿಂದ ಕೆಳಗೆ ಓಡಿ ಬಂದ, ಬುದ್ಧನನ್ನ ಉಪಚಾರ ಮಾಡಿದ, ಸತ್ಕಾರ ಮಾಡಿದ. ಬುದ್ಧನ ಕಾಲ ಬುಡದಲ್ಲಿ ಕೂತ್ಕೊಂಡು ಹೇಳ್ತಾನೆ, ಭಗವಾನ್ ನಿನಗೆ ಏನು ಬೇಕು, ನಿನಗೆ ಏನು ಬೇಕು ಕೇಳು, ನೀನು ಕೇಳಿದ್ದೆಲ್ಲವನ್ನೂ ಕೊಡುವಷ್ಟು ಶಕ್ತಿಯನ್ನ, ಸಾಮರ್ಥ್ಯವನ್ನು ಭಗವಂತ ನನಗೆ ಕೊಟ್ಟಿದ್ದಾನೆ. ನಿನಗೆ ಏನು ಬೇಕು ಕೇಳು ಭಗವಂತ ಅಂತ ಅಂದ. ತಕ್ಷಣ ಬುದ್ಧ ನಗ್ತಾ ಹೇಳ್ತ್ತಾನೆ. ಸರಿ ಸರಿ… ನೀನು ಕೊಡುವಿಯಂತೆ, ಆದ್ರೆ ನಾನು ಕೇಳೋದಿಲ್ಲ. ನಿನಗೆ ಏನು ಕೊಡಬೇಕು ಎಂತ ಅನಿಸುತ್ತೋ ಅದನ್ನು ಕೊಡು. ಆದರೆ ನಂದೊಂದು ಷರತ್ತಿದೆ. ಏನು ಅಂತಂದ್ರೆ ನೀನು ಏನು ಕೊಡ್ತಿಯೋ ಅದು ನಿನ್ನ ಸ್ವಂತದ್ದಾಗಿರಬೇಕು ಅಂತ ಅಂದ. ಶ್ರೀಮಂತನಿಗೆ ಆಶ್ಚರ್ಯ. ಅರೆ ! ಬುದ್ಧನಿಗ್ಯಾಕೆ ಸಂಶಯ, ಇಷ್ಟೊಂದು ಆಸ್ತಿ, ಸಂಪತ್ತಿನ ಒಡೆಯನಾಗಿರತಕ್ಕಂತಹ ನನಗೆ ಈ ಪ್ರಶ್ನೆ ಹೇಳ್ತಾನೆ, ಈ ರೀತಿ ಹೇಳ್ತಾ ಇದಾನೆ ಬುದ್ಧ ಅಂತ ಅದ್ಕೊಂಡು, ಇರಲಿ ಅಂತ ಒಳಗೆ ಹೋದ. ಒಂದಷ್ಟು ಚಿನ್ನದ ನಾಣ್ಯಗಳನ್ನು ತಂದ, ಬುದ್ಧನ ಪಾದಕ್ಕೆ ಸುರಿದ. ತಗೋ ಬುದ್ಧ ಇದು ನಂದೇ.. ಸ್ವಂತದ್ದು ಅಂತ ಅಂದ. ಆದ್ರೆ ಬುದ್ಧ ನಕ್ಕ. ಇಲ್ಲ ಇಲ್ಲ ಇಲ್ಲ ಇದನ್ನು ನಾನು ಸ್ವೀಕಾರ ಮಾಡೋದಕ್ಕೆ ಆಗೋದಿಲ್ಲ. ಯಾಕೆ ಅಂತಂದ್ರೆ ಇದು ನಿನ್ನ ಸ್ವಂತದ್ದಲ್ಲ. ಆಹ್ಞಾ.. ಏನು ? ನನ್ನ ಸ್ವಂತದ್ದಲ್ಲವೇ ? ಇಲ್ಲ ಇಲ್ಲ ನಿನ್ನ ಸ್ವಂತದ್ದಾಗೋದಕ್ಕೆ ಸಾಧ್ಯವಿಲ್ಲ. ಲಕ್ಷ್ಮಿ ಚಂಚಲೆ, ಧನ ಇವತ್ತು ನಿನ್ನ ಬಳಿ ಇದೆ. ನಾಳೆ ನಿನ್ನ ಬಳಿ ಇರುತ್ತೆ ಅಂತ ಏನ್ ಗ್ಯಾರಂಟಿ ಇಲ್ಲ. ಇದು ಖಂಡಿತಾ ನಿಂದಾಗೋದಕ್ಕೆ ಸಾಧ್ಯನೇ ಇಲ್ಲ ಅಂತ ಅಂದ. ಧನಿಕ ಮಾತನಾಡಲಿಲ್ಲ. ಬೇರೆ ಯದಾರಾದ್ರೂ ಆಗಿದ್ದಿದ್ದರೆ ಕೆನ್ನೆಗೆ ಒಂದೇಟು ಬಾರಿಸಿ ಬಿಡ್ತಾ ಇದ್ದೆ, ಅಂತದ್ಕೊಂಡು ಒಳಗೆ ಹೋದ, ಒಂದಷ್ಟು ಪಟ್ಟೆ ಪೀತಾಂಬರಗಳನ್ನು ತಂದ. ತಗೋ ಬುದ್ಧ ಇದನ್ನಾದ್ರೂ ಒಪ್ಪಿಸ್ಕೋ ಅಂತ ಅಂದ. ಬುದ್ಧ ನಕ್ಕ. ಇಲ್ಲ ಇಲ್ಲ ಇದೂ ನಿನ್ನ ಸ್ವಂತದ್ದಲ್ಲ ಅಂತ ಅಂದ. ಧನಿಕನಿಗೆ ಒಳಿಗಿಂದೊಳಗೆ ಕೋಪ ಬರಲಿಕ್ಕೆ ಶುರುವಾಯ್ತು. ಕೋಪ ತೋರಿಸ್ಕೊಳಲಿಲ್ಲ ಮತ್ತೆ ಒಳಗೆ ಹೋದ ಒಂದಷ್ಟು ಜಮೀನಿನ ಪತ್ರಗಳನ್ನು ತಗೊಂಡುಬಂದ, ಬುದ್ಧನ ಮುಂದೆ ಕೊಟ್ಟು ಹೇಳ್ತಾನೆ, ಬುದ್ಧ ಇದನ್ನ ಮಾತ್ರ ನಂದಲ್ಲ ಅಂತ ಅನ್ಬೇಡ, ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ, ಇಷ್ಟೆಲ್ಲಾ ಆಸ್ತಿಯನ್ನು ಸಂಪಾದನೆ ಮಾಡಿದಿನಿ, ಅದ್ರಲ್ಲಿ ಕೆಲವನ್ನು ನಿನಗೆ ಕೊಡ್ತಾ ಇದೀನಿ. ಬೇಕಾದ್ರೆ ಎಲ್ಲವನ್ನೂ ಕೊಡ್ತಾ ಇದೀನಿ.. ತಗೋ ಸ್ವೀಕಾರ ಮಾಡು ಅಂತ ಅಂದ. ಬುದ್ಧ ಅಷ್ಟೇ ನಿಷ್ಕಲ್ಮಶವಾಗಿ ನಕ್ಕ. ಹೇಳಿದ.. ಇಲ್ಲ ಇಲ್ಲ ಇದು ನಿನ್ನದಲ್ಲ. ಇದು ನಿನ್ನದಾಗೋಕೆ ಸಾಧ್ಯನೇ ಇಲ್ಲ ಅಂತ ಅಂದ. ಈಗ ಶ್ರೀಮಂತನಿಗೆ ಕೋಪ ತಡಿಲಿಕ್ಕೆ ಆಗಲಿಲ್ಲ. ಎದುರಿಗೆ ಯಾರಿದ್ದಾರೆ ಅಂತ ಮರೆತ. ಸಿಟ್ಟಿನಿಂದ ಮುಷ್ಟಿಗಟ್ಟಿದ. ಎಷ್ಟು ಸಾಧ್ಯ ಆಗುತ್ತೋ ಅಷ್ಟು ಬಲವನ್ನ ಹಾಕಿ ಒಂದು ಏಟನ್ನ ಬುದ್ಧನ ಕೆನ್ನೆಗೆ ರಪ್ಪನೆ ಬಾರಿಸಿಬಿಟ್ಟ, ಪಕ್ಕದಲ್ಲಿದ್ದಂತ ಶಿಷ್ಯ ಕಣ್ಮುಚ್ಚಿಕೊಂಡ. ಆ ಏಟಿನ ರಭಸಕ್ಕೆ ಬುದ್ಧನ ಸುಕೋಮಲವಾದಂತಹ ಕೆನ್ನೆಗಳು ಖಂಡಿತಾ ಕೆಂಪಗೆ ಆಗಿರತ್ತೆ. ಸುಕೋಮಲ ಮೈಯನ್ನ, ಚರ್ಮವನ್ನ ಹೊಂದಿದಂತಹ ಬುದ್ಧ ಖಂಡಿತಾ ಅವನ ಕಣ್ಣಲ್ಲಿ ನೀರಿರತ್ತೆ ಅಂತದ್ಕೊಂಡ. ದೃಶ್ಯ ನಾನು ನೋಡ್ಬಾದ್ರು ಅಂತ ಅಂದ್ಕೊಂಡ. ಆದ್ರೆ ಹೆಚ್ಚು ಹೊತ್ತು ಕಣ್ಮುಚ್ಚಿ ಕೂತ್ಕೊಳ್ಳಿಕ್ಕಾಗಲಿಲ್ಲ ಶಿಷ್ಯನಿಗೆ. ಕಣ್ತೆರೆದು ನೋಡ್ತಾನೆ ಬುದ್ಧನ ಕಣ್ಣಲ್ಲಿ ನೀರಿರ್ಲಿಲ್ಲ. ಅವನ ಮುಖದಲ್ಲಿ ಮಂದಹಾಸ ಇತ್ತು. ನಾನು ಏನು ಸಾಧಿಸಬೇಕು ಅಂತ ಇದ್ದೀನೋ ಅದನ್ನು ನಾನು ಸಾಧಿಸಿದೆ ಅನ್ನುವಂತಹ ಒಂದು ಸಂತೋಷ ಇತ್ತು. ಬುದ್ಧ ಶ್ರೀಮಂತನಿಗೆ ಹೇಳಿದ. ಈಗ ಕೊಟ್ಟೆ ನೋಡು ಇದು ನಿನ್ನ ಸ್ವಂತದ್ದೇ. ಇದನ್ನ ನಾನು ಸ್ವೀಕಾರ ಮಾಡಿದ್ದೇನೆ. ತೃಪ್ತಿಯಾಗಿದೆ ನನಗೆ ಅಂತ ಅಂದ. ಶ್ರೀಮಂತನಿಗೆ ಅರ್ಥ ಆಯ್ತು. ಬುದ್ಧನ ಕಾಲು ಹಿಡಿದ. ಅವನ ಶಿಷ್ಯನಾದ.
ಒಬ್ಬ ವ್ಯಕ್ತಿಯನ್ನ ಪರಿವರ್ತನೆ ಮಾಡೋದಿದ್ರೆ, ಅವನಲ್ಲಿರುವಂತಹ ಕೆಟ್ಟ ಗುಣಗಳನ್ನು ಹೊರಗೆ ತರೋದಿದ್ರೆ ನಾನು ನೋವನ್ನು ಅನುಭವಿಸ್ತೀನಿ. ನನಗೆ ಎಷ್ಟೇ ನೋವಾದ್ರೂ ಚಿಂತೆಯಿಲ್ಲ ಆ ವ್ಯಕ್ತಿ ಸರಿಯಾಗ್ಬೇಕು, ಅಂತ ಯೋಚನೆ ಮಾಡತಕ್ಕಂತಹ ಸಭ್ಯತೆ, ಸಂಸ್ಕೃತಿ ನಿಮಗೆ ಸಿಗೋದಿದ್ರೆ ಇಡೀ ಜಗತ್ತಿನಲ್ಲಿ ನನ್ನ ದೇಶದಲ್ಲಿ ಮಾತ್ರ, ಭಾರತದಲ್ಲಿ ಮಾತ್ರ, ಭಾರತದಲ್ಲಿ ಮಾತ್ರ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.