ಮಂಗಳೂರು : ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ನವೆಂಬರ್ 19 ರಂದು ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಸುಪಾಸಿನ ಎಲ್ಲಾ ಜಿ.ಎಸ್.ಬಿ.ಭಜನಾ ಮಂಡಳಿಗಳ ಸಭೆ ಜರಗಿತು. ಶ್ರೀಯುತರಾದ ರಾಧಾಕೃಷ್ಣ ಭಕ್ತ, ಜಯರಾಜ್ ಪೈ, ಟಿ. ಗಣಪತಿ ಪೈ, ವೇದವ್ಯಾಸ ಕಾಮತ್, ಹಾಗೂ ಜಗನ್ನಾಥ ಕಾಮತ್, ಇವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಶ್ರೀ ವೇದವ್ಯಾಸ ಕಾಮತ್ ಇವರು ಗುರುವಂದನಾ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ನಗರ ಭಜನೆ ಆಯೋಜನೆ: ನಮ್ಮ ಜಿ.ಎಸ್.ಬಿ. ಸಮಾಜದ ಮೇಲೆ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಅಪಾರ ಪ್ರೀತಿ ಇದ್ದು, ನಮ್ಮ ಸಮಾಜದ ಏಳಿಗೆಗೆ ಸ್ವಾಮೀಜಿಯವರ ಆಶೀರ್ವಾದವೇ ಕಾರಣ. ಇಂತಹ ಯತಿವರ್ಯರಿಗೆ ನಮ್ಮ ಸಮಾಜದ ವತಿಯಿಂದ ಕಿರುಕಾಣಿಕೆ ಸಮರ್ಪಣಾ ರೂಪದಲ್ಲಿ ಹಾಗೂ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನಲ್ಲಿ 4 ದಿನಗಳ ನಗರ ಭಜನೆಯನ್ನು ಮಾಡುವುದಾಗಿ ನಿರ್ಧರಿಸಲಾಯಿತು. ಶ್ರೀ ವೀರವೆಂಕಟೇಶ ಭಜನಾ ಮಂಡಳಿಯ ನೇತೃತ್ವದಲ್ಲಿ ಹಾಗೂ ಇತರ ಎಲ್ಲಾ ಭಜನಾ ಮಂಡಳಿಗಳ ಸಹಯೋಗದಿಂದ ವಿಶೇಷವಾಗಿ ಮಹಿಳಾ ಭಜನಾ ಮಂಡಳಿಗಳ ಸಹಯೋಗದಿಂದ ನಗರ ಭಜನೆ ನಡೆಯಲಿದೆ. ಶ್ರೀಯುತರಾದ ತಿಮ್ಮಪ್ಪ ಹೆಗ್ಡೆ, ನಾಗೇಶ್ ಕಾಮತ್, ಪ್ರಶಾಂತ್ ಪೈ ಇವರು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ನವೆಂಬರ್ 23 ರಿಂದ ನವೆಂಬರ್ 26 ರ ವರೆಗೆ ನಗರ ಭಜನೆ ಈ ಕೆಳಗಿನ ಸ್ಥಳಗಳಲ್ಲಿ ನಡೆಯಲಿದೆ
ತಾ 23.11.2016: ಸಂಜೆ 7 ಗಂಟೆಗೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮಹಾಮಾಯಾ ದೇವಸ್ಥಾನ, ಗದ್ದೆಕೇರಿ, ಡೊಂಗರಕೇರಿ, ಚಾಮರಗಲ್ಲಿ, ರಥಬೀದಿಯಾಗಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ.
ತಾ 24.11.2016: ಸಂಜೆ 7 ಗಂಟೆಗೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ವಿ.ಟಿ.ರಸ್ತೆ, ಟ್ಯಾಂಕ್ ಕಾಲೋನಿ, ಕೆ.ಎಸ್.ರಾವ್ ರಸ್ತೆ, ಜಿ.ಟಿ.ರಸ್ತೆ, ಉಮಾ ಮಹೇಶ್ವರಿ ದೇವಸ್ಥಾನದ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ.
ತಾ 25.11.2016: ಸಂಜೆ 7 ಗಂಟೆಗೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ನಂದಾ ದೀಪ, ಜೋಡು ಮಠ, ಹೂವಿನ ಮಾರುಕಟ್ಟೆ ದಾರಿಯಾಗಿ, ಪುತ್ತು ಪ್ರಭು ಲೇನ್, ರಥಬೀದಿಯಾಗಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ.
ತಾ 26.11.2016: ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ವತಿಯಿಂದ ಕೊಂಚಾಡಿ ಪರಿಸರದಲ್ಲಿ ನಗರ ಭಜನೆ ಸಂಜೆ 6:30 ರಿಂದ ನಡೆಯಲಿರುವುದು.
ನಗರ ಭಜನೆ ಬರುವ ಹಾದಿಯಲ್ಲಿ ಸಮಾಜ ಬಾಂಧವರು ದೀಪ ಇಟ್ಟು ಸ್ವಾಗತಿಸಬೇಕಾಗಿ ವಿನಂತಿ. ವಸತಿ ಸಮುಚ್ಛಯ ( ಅಪಾರ್ಟ್ಮೆಂಟ್)ಗಳಲ್ಲಿ ತಳ ಅಂತಸ್ತಿನಲ್ಲಿ (ಗ್ರೌಂಡ್ ಫ್ಲೋರ್) ಎಲ್ಲಾ ಮನೆಯವರು ಸೇರಿ ಒಂದು ದೀಪವನ್ನು ಮಾತ್ರ ಇಡಬೇಕಾಗಿ ವಿನಂತಿ. ನಗರ ಭಜನೆಯ ನಂತರ ದೇವಾಲಯದಲ್ಲಿ ಫಲಾಹಾರದ ವ್ಯವಸ್ಥೆ ಮಾಡಲಾಗುವುದು. ಈ ನಗರ ಭಜನೆಯಲ್ಲಿ ಆಸಕ್ತಿ ಇರುವ ಎಲ್ಲಾ ಸಮಾಜ ಬಾಂಧವರು ಶ್ರೀ ವೆಂಕಟರಮಣ ದೇವಾಸ್ಥಾನ, ರಥಬೀದಿ, ಮಂಗಳೂರು, ಇಲ್ಲಿ ಸಂಜೆ 7 ಗಂಟೆಗೆ ಸೇರಿ ನಗರ ಭಜನೆಯಲ್ಲಿ ಭಾಗವಹಿಸಬಹುದು.
ಇತರ ಊರುಗಳಲ್ಲಿ ಗುರುವಂದನಾ ಸಭೆ:
ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಈಗಾಗಲೇ ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಸಭೆ ನಡೆದಿರುತ್ತದೆ. ನವೆಂಬರ್ 22 ರಂದು ಮಂಗಳವಾರ ಸಂಜೆ 5:30ಕ್ಕೆ ಮುಲ್ಕಿ, ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಕಾಸರಗೋಡು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ, ಆಸುಪಾಸಿನ ಊರಿನ ದೇವಾಲಯ, ಮಂದಿರ, ಜಿ.ಎಸ್.ಬಿ. ಸಂಘ ಸಂಸ್ಥೆ ಹಾಗೂ ಭಜನಾ ಮಂಡಳಿಗಳ ಸಭೆ ಆಯೋಜಿಸಲಾಗಿದೆ. ಸಮಾಜದ ಎಲ್ಲಾ ದೇವಾಲಯ, ಮಂದಿರ, ಸಂಘ ಸಂಸ್ಥೆ ಹಾಗೂ ಭಜನಾ ಮಂಡಳಿಗಳು ಪಕ್ಕದ ಊರಿನಲ್ಲಿ ನಡೆಯುವ ಸಭೆಗೆ ತಪ್ಪದೇ ಹಾಜರಾಗಬೇಕಾಗಿ ವಿನಂತಿಸಲಾಗಿದೆ. ಹಾಗೂ ಪ್ರತೀ ಊರಿನಲ್ಲಿ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ನಗರ ಭಜನೆಯನ್ನು ಏರ್ಪಡಿಸಬೇಕಾಗಿ ಆಯೋಜಕರಾದ ಶ್ರೀ ಸುಕೃತೀಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ವಿನಂತಿಸಲಾಗಿದೆ.
ನವೆಂಬರ್ 23 ರಂದು ಬುಧವಾರ ಸಂಜೆ 6 ಗಂಟೆಗೆ, ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ, ಮಂಗಳೂರು ಆಸುಪಾಸಿನ ದೇವಾಲಯ, ಮಂದಿರ, ಸಂಘ ಸಂಸ್ಥೆ ಹಾಗೂ ಸ್ವಯಂಸೇವಕರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಆಸುಪಾಸಿನ ಎಲ್ಲರೂ ಭಾಗಿಯಾಗಬೇಕಾಗಿ ವಿನಂತಿಸಲಾಗಿದೆ.
ನವೆಂಬರ್ 27ನೇ ತಾರೀಕು ಭಾನುವಾರ, ಎಲ್ಲಾ ಸಮಾಜ ಬಾಂಧವರು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ, ಶ್ರೀ ವೆಂಕಟರಮಣ ದೇವಾಸ್ಥಾನ, ರಥಬೀದಿ, ಮಂಗಳೂರು, ಇಲ್ಲಿ ಸೇರಿ ಉಪಹಾರದ ನಂತರ ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಸಂಘನಿಕೇತನದಲ್ಲಿ ನಡೆಯುವ ಸಕಲ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕಾಗಿ ಆಯೋಜಕರಾದ ಶ್ರೀ ಸುಕೃತೀಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ವಿನಂತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.