ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)ವು ನಾಗಾಲ್ಯಾಂಡ್ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ, ಯೋಜನೆಯಡಿಯಲ್ಲಿ 48,826 ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 19,300 ಈಗಾಗಲೇ ಪೂರ್ಣಗೊಂಡಿದೆ ಎಂದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಯೋಜನೆ ನೀಡಿದ ಫಲಿತಾಂಶ ನಾಗಾಲ್ಯಾಂಡ್ನ ದೂರದ ಬೆಟ್ಟಗಳಲ್ಲಿ ಪ್ರತಿಫಲಿಸುತ್ತಿದೆ. ಅಭಿವೃದ್ಧಿ ಯೋಜನೆಗಳು ಸಾಮಾನ್ಯವಾಗಿ ಸವಾಲುಗಳನ್ನು ಎದುರಿಸುವ ಆ ಬೆಟ್ಟಗಳಲ್ಲಿ ಪಕ್ಕಾ ಮನೆಗಳು ಮರೀಚಿಕೆಯೇ ಆಗಿತ್ತು. ಅಲ್ಲಿನ ಕುಟುಂಬಗಳು ಒಂದು ಕಾಲದಲ್ಲಿ ಮೂಲ ಆಶ್ರಯಕ್ಕಾಗಿ ಹೆಣಗಾಡುತ್ತಿದ್ದವು. ಆದರೆ ಈಗ ಪಿಎಂಎವೈ-ಜಿ ಅವರ ಬದುಕುಗಳನ್ನ ಪರಿವರ್ತಿಸುತ್ತಿದೆ, ಅವರ ತಲೆಯ ಮೇಲೆ ಸೂರು ಮಾತ್ರವಲ್ಲದೆ ಹೆಮ್ಮೆ, ಸುರಕ್ಷತೆಯ ಭಾವನೆಯನ್ನು ನೀಡಿದೆ.
ಈ ಮನೆಗಳನ್ನು ಗಟ್ಟಿಮುಟ್ಟಾದ ಕಲ್ಲಿನ ಕಾಲಮ್ಗಳು ಮತ್ತು ಎತ್ತರದ ರಚನೆಗಳ ಮೇಲೆ ನಿರ್ಮಿಸಲಾಗಿದೆ, ತೇವಾಂಶ ಮತ್ತು ಗೆದ್ದಲುಗಳನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ದೀರ್ಘಾವಧಿಯ ಬಾಳಿಕೆಯನ್ನು ಇದು ಖಾತ್ರಿಪಡಿಸುತ್ತದೆ.
PMAY-G ತನ್ನ ಕಾರ್ಯಾಚರಣೆಗಳಲ್ಲಿ ಸ್ಥಳೀಯ ಆರ್ಥಿಕತೆಯನ್ನು ಸಂಯೋಜಿಸುವ ಮೂಲಕ ಆರ್ಥಿಕ ಸಬಲೀಕರಣವನ್ನು ವೇಗವರ್ಧನೆ ಮಾಡಿದೆ. ನಾಗಾಲ್ಯಾಂಡ್ನಲ್ಲಿ, ಫಲಾನುಭವಿಗಳು ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಬಿದಿರು ಮತ್ತು ಹಗುರವಾದ ಕಾಂಕ್ರೀಟ್ನಂತಹ ಸ್ಥಳೀಯ ವಸ್ತುಗಳನ್ನು ಬಳಸಿದ್ದಾರೆ, ಕೌಶಲ್ಯಗಳನ್ನು ಬಳಸಿ ಯೋಜನೆಯಡಿ ಪಕ್ಕಾ ಮನೆ ನಿರ್ಮಿಸಿದ್ದಾರೆ. ಈ ಮೂಲ ಸ್ವಾವಲಂಬನೆಯನ್ನು ಪ್ರದರ್ಶಿಸಿದ್ದಾರೆ.
ಈ ಯೋಜನೆಯು ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಸಂಯೋಜಿಸಿದೆ, ನಾಗಾಲ್ಯಾಂಡ್ನಲ್ಲಿ, ಮನೆಗಳು ಆ ಪ್ರದೇಶದ ವಾಸ್ತುಶಿಲ್ಪದ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ, ಆಧುನಿಕ ಅಂಶಗಳನ್ನು ನೈಸರ್ಗಿಕ ಭೂದೃಶ್ಯದಲ್ಲಿ ಸಂಯೋಜಿಸಲಾಗಿದೆ. ಬಿದಿರಿನ ಚಾಪೆಗಳು ಗೋಡೆಗಳು ಮತ್ತು ಮೇಲ್ಛಾವಣಿಗಳನ್ನು ಅಲಂಕರಿಸಿವೆ, CGI ಹಾಳೆಗಳನ್ನು ಚಾವಣಿಗಾಗಿ ಬಳಸಲಾಗುತ್ತದೆ, ಸಂಪ್ರದಾಯದೊಂದಿಗೆ ಕ್ರಿಯಾತ್ಮಕತೆಯನ್ನು ಸಂಯೋಜಿಸಿ ಮನೆ ನಿರ್ಮಾಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.