ದುಬೈ: ದುಬೈಯ ಭಾರತೀಯ ಮೂಲದ ಸಾಮಾಜಿಕ ಕಾರ್ಯಕರ್ತ ವೆಂಕಟರಾಮಮ್ ಕೃಷ್ಣಮೂರ್ತಿ ಕೇವಲ 24 ತಾಸುಗಳಲ್ಲಿ ಚಾರಿಟಿಗಾಗಿ ದೊಡ್ಡ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅವರು ವಿಶ್ವದಾದ್ಯಂತ 1 ಲಕ್ಷ ನಿರಾಶ್ರಿತ ಮಕ್ಕಳಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಕಳೆದ ತಿಂಗಳು ಶಾಲೆಗಳು, ಸಂಸ್ಥೆಗಳು ಮತ್ತು ಜನರಿಂದ 10,975 ಕೆ.ಜಿ. ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ.
ಈ ದೇಣಿಗೆ 50,000 ನೋಟ್ ಪುಸ್ತಕ, 3 ಲಕ್ಷ ಪೆನ್ಸಿಲ್ಗಳು, 200 ಸ್ಕೂಲ್ ಬ್ಯಾಗ್ಗಳು, ಕ್ರಯಾನ್ಸ್, ಪೆನ್ಸಿಲ್ ಶಾರ್ಪ್ನರ್ಗಳು, ಕತ್ತರಿಗಳನ್ನು ಒಳಗೊಂಡಿವೆ. ದುಬೈಯ ಅಲ್ ದಿಯಾಫಾ ಶಾಲೆಯಲ್ಲಿ ಈ ಯೋಜನೆಗಾಗಿ ಸುಮಾರು 4 ಸಾವಿರ ಕಾರ್ಯಕರ್ತರು ಕೈಜೋಡಿಸಿದ್ದಾರೆ.
ಎಮಿರೇಟ್ಸ್ ರೆಡ್ ಕ್ರೆಸೆಂಟ್ ಸಂಸ್ಥೆ ನಿರಾಶ್ರಿತ ಮಕ್ಕಳಿಗೆ ಇದನ್ನು ವಿತರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.