×
Home About Us Advertise With s Contact Us

ಬೀದಿ ದನಗಳಿಗಾಗಿ ‘ಗೋ ಅಭಯಾರಣ್ಯ’ ಸ್ಥಾಪಿಸಲಿದೆ ಹರಿಯಾಣ

Cow

ಚಂಡೀಗಢ : ಬೀದಿಯಲ್ಲಿ ದನಗಳಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣ ಸರ್ಕಾರವು 40 ಗೋ ಅಭಯಾರಣ್ಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಅಲ್ಲಿನ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಾಕು ಪ್ರಾಣಿ ಮತ್ತು ಡೈರಿ ಸಚಿವ ಒ.ಪಿ. ಧಂಕರ್ ಅವರು 2012 ರ ಸಮೀಕ್ಷೆಯ ಪ್ರಕಾರ 18.08 ಲಕ್ಷ ದನಗಳು ಹರಿಯಾಣದಲ್ಲಿದ್ದು ಇದರಲ್ಲಿ 85,000 ದನಗಳು ಗ್ರಾಮೀಣ ಭಾಗದಲ್ಲಿ, 32,000 ದನಗಳು ನಗರ ಪ್ರದೇಶಗಳಲ್ಲಿ ಬೀದಿಯಲ್ಲಿ ತಿರುಗುತ್ತಿವೆ.

ಇವುಗಳಿಗೆ ಆಶ್ರಯ ನೀಡುವ ಸಲುವಾಗಿ 40 ಗೋ ಅಭಯಾರಣ್ಯಗಳನ್ನು ಸ್ಥಾಪಿಸಲಿದ್ದೇವೆ ಎಂದಿದ್ದಾರೆ.

ಕುಡಿಯುವ ನೀರಿನ ಸೌಲಭ್ಯ, ಶೆಡ್, ಬೌಂಡರಿ ವಾಲ್, ಪ್ರಾಣಿ ಚಿಕಿತ್ಸಾಲಯ, ಮೇವು ಸಂಗ್ರಹಣಾ ತಾಣ, ಟ್ಯೂಬ್ ವಾಲ್, ಪವರ್ ಬ್ಯಾಕಪ್ ಮುಂತಾದ ಸೌಲಭ್ಯಗಳು ಈ ಗೋ ಅಭಯಾರಣ್ಯಗಳಲ್ಲಿ ಇರಲಿದೆ ಎಂದಿದ್ದಾರೆ.

ಹರಿಯಾಣದ ವಿವಿಧ ಭಾಗಗಳಲ್ಲಿ 50 ರಿಂದ 100 ಎಕರೆ ಪ್ರದೇಶಗಳಲ್ಲಿ ಹಂತಹಂತವಾಗಿ ಒಟ್ಟು 40 ಗೋ ಅಭಯಾರಣ್ಯಗಳು ಸ್ಥಾಪನೆಯಾಗಲಿವೆ.

ತಲಾ ಒಂದು ಗೋ ಗೋ ಅಭಯಾರಣ್ಯಕ್ಕೆ 4.30 ಕೋಟಿ ರೂ. ವ್ಯಯವಾಗಬಹುದು ಎಂದು ಅಂದಾಜಿಸಲಾಗಿದೆ.

ಹರಿಯಾಣದಲ್ಲಿ ಪ್ರಸ್ತುತ 408 ಗೋಶಾಲೆಗಳಿದ್ದು, ಅವುಗಳು 3,06,490 ಗೋವುಗಳಿಗೆ ಆಶ್ರಯ ನೀಡಿವೆ. ಇದಲ್ಲಿ 398 ಗೋಶಾಲೆಗಳು ನೋಂದಾವಣೆಗೊಂಡರೆ, 16 ಗೋಶಾಲೆಗಳು ನೋಂದಾವಣೆಯಾಗಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

 

Recent News

Back To Top
error: Content is protected !!