ರಾಂಚಿ : ದೇಶದಲ್ಲೇ ಪಬ್ಲಿಕ್ ಫಂಡ್ ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಜಾರ್ಖಂಡ್ ಹೊರಹೊಮ್ಮಿದೆ.
ಎಲ್ಲಾ ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸಾ ಅವರು ಜಾರ್ಖಂಡ್ ಮಾಡಿದ ಈ ಸಾಧನೆಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.
ಜಾರ್ಖಂಡ್ನ 32 ಖಜಾನೆಗಳು ಈಗಾಗಲೇ ಕಂಪ್ಯೂಟರೀಕರಣಗೊಂಡಿದ್ದು, ಸೈಬರ್ ಟ್ರೆಝರಿಯು ಸ್ಥಾಪನೆಯಾಗಿದೆ.
ಜಾರ್ಖಂಡ್ ಮಾಡಿರುವ ಈ ಮಹತ್ವದ ಸಾಧನೆಯು ಅಶೋಕ್ ಅವರ ಶ್ಲಾಘನೆಗೆ ಗುರಿಯಾಗಿದೆ ಎಂದು ಡೆವಲಪ್ಮೆಂಟ್ ಕಮೀಷನರ್ ಅಮಿತ್ ಖಾರೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.