ನವದೆಹಲಿ : ಡೋಪಿಂಗ್ ಆರೋಪಕ್ಕೆ ಸಿಲುಕಿರುವ 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಅವರ ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವ ಕನಸು ಭಗ್ನವಾಗಿದೆ.
ರಿಯೋ ಡಿ ಜನೈರೋದ ಕೋರ್ಟ್ ಆಫ್ ಆರ್ಬಿಟರೇಷನ್ ಫಾರ್ ಸ್ಫೋರ್ಟ್ (ಸಿಎಎಸ್) ನಿಂದ ಕ್ಲೀನ್ಚಿಟ್ ಪಡೆಯಲು ನರಸಿಂಗ್ ವಿಫಲರಾಗಿದ್ದಾರೆ. ಹೀಗಾಗಿ ಈ ಬಾರಿಯ ಒಲಿಂಪಿಕ್ಸ್ಗೆ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ನಾನು ತಪ್ಪೆಸಗಿಲ್ಲ. ನನ್ನನ್ನು ಕುತಂತ್ರದಿಂದ ಡೋಪಿಂಗ್ ಆರೋಪಕ್ಕೆ ಸಿಲುಕಿಸಲಾಗಿದೆ ಎಂಬ ನರಸಿಂಗ್ ಅವರ ವಾದವನ್ನು ಸಿಎಎಸ್ ತಳ್ಳಿಹಾಕಿದ್ದು ನರಸಿಂಗ್ ತಪ್ಪು ಮಾಡಿಲ್ಲ ಎನ್ನಲು ಯಾವುದೇ ಸಾಕ್ಷಿಗಳಿಲ್ಲ ಎಂದಿದೆ. ಅಲ್ಲದೆ ಅವರ ಮೇಲೆ ೪ ವರ್ಷಗಳ ನಿರ್ಬಂಧವನ್ನು ಹೇರಿದೆ.
ನರಸಿಂಗ್ ಇದುವರೆಗೆ ಪಡೆದುಕೊಂಡಿರುವ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.
ಸಿಎಎಸ್ನ ಈ ತೀರ್ಪಿಗೆ ರೆಸ್ಟಲಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.