ಬಂಟ್ವಾಳ : ರೈತರಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ವಿಟ್ಲ ಹೋಬಳಿಯನ್ನು ಕೇಂದ್ರೀಕರಿಸಿ ಹಣ್ಣು ಬೆಳೆಗಾರರ ಲಿಮಿಟೆಡ್ ಕಂಪೆನಿ ಸ್ಥಾಪಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜೀವ ನಾಕ್ ತಿಳಿಸಿದ್ದಾರೆ.
ಪಾಣೆಮಂಗಳೂರು, ಟೋಲ್ಗೇಟ್ ಬಳಿ `ನವರಂಗ್’ ಎಂಬಲ್ಲಿ ಭಾನುವಾರ ಬಂಟ್ವಾಳ ಹಲಸು ಪ್ರೇಮಿ ಕೂಟ ಆಯೋಜಿಸಲಾದ ತಾಲೂಕಿನ ಪ್ರಥಮ ಹಲಸಿನ ಸಂತೆ ವಿಶಿಷ್ಟಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಲಸು, ಬಾಳೆ ಹಾಗೂ ಅನನಾಸು ಹಣ್ಣುಗಳನ್ನು ಬೆಳೆಸುವ ರೈತರನ್ನು ಸೇರಿಸಿ ಸ್ಥಾಪಿಸಲಾದ ಕಂಪೆನಿಯು, ಸುಮಾರು ೧೦೦೦ ಮಂದಿ ಹಣ್ಣು ಬೆಳೆಗಾರನ್ನು ಹೊಂದಿದೆ. ರೈತರಿಗೆ ಮಾತ್ರ ಷೇರುದಾರರು, ನಿರ್ದೇಶಕರಾಗಲು ಅವಕಾಶ ಕಲ್ಪಿಸಲಾಗಿದೆ. ಕಂಪನಿ ಬಗ್ಗೆ ಬಹುತೇಕ ಕೆಲಸ-ಕಾರ್ಯಗಳು ಮುಗಿಸಲಾಗಿದ್ದು, ಶೀಘ್ರದಲ್ಲಿ ಸ್ಥಾಪಿಸಲಾಗುವುದೆಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹಲಸಿನಿಂದ ತಯಾರಿಸಲಾದ ಹಲ್ವಾ, ಜಾಕ್ ಫ್ರುಟ್ ರವಾ ಫ್ರೈ, ಗಟ್ಟಿ, ಕಡುಬು, ಜಾಕ್ ಕಬಾಬ್, ಒಣ ಸೊಳೆ, ಸ್ಕ್ಯಾಶ್, ವೈನ್, ಜ್ಯಾಮ್, ದೋಸೆ, ಬೋಂಡಾ, ಮಿಲ್ಕ್ ಶೇಕ್, ಜಾಕ್ಲೇಟ್, ಐಸ್ಕ್ರೀಂಗಳನ್ನು ಹಲಸಿನ ಸಂತೆಯನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಹಲಸಿನ ಮೌಲ್ಯ ವರ್ಧಿತ ಔಷದೋತ್ಪನ್ನಗಳು, ಗೃಹ ಉತ್ಪನ್ನಗಳು, ತರಕಾರಿ ಬೀಜಗಳ ಜತೆಗೆ ಬಟ್ಟೆಬರೆ, ಬಿದಿರಕ್ಕಿ, ವೆಜ್ ಕಟ್ಟಿಂಗ್ ಮಿಶನ್ ಹಾಗೂ ಪುಸ್ತಕ ಮಳಿಗೆಯ ವ್ಯವಸ್ಥೆ ಕಲ್ಪಿಸಲಾಯಿತು. ಪುತ್ತೂರು, ನಿನ್ನಿಕಲ್ಲು ನರ್ಸರಿ, ಅಡ್ಯನಡ್ಕ ವಾರಣಾಸಿ ಅಧ್ಯಯನ ಕೇಂದ್ರಯಿಂದ ಹಲಸಿನ ನಾನಾ ತಳಿಗಳನ್ನು ಪ್ರದರ್ಶನ ಮಾಡಲಾಯಿತು.
ಉದ್ಘಾಟನೆ: ಕೃಷಿ ತಜ್ಞ ಡಾ.ಕೆ.ಎಸ್.ಕಾಮತ್ ಅವರು ಹಲಸಿನ ಸಂತೆಯನ್ನು ಉದ್ಘಾಟಿಸಿದರು. ನಿವೃತ್ತ ಅರಣ್ಯಾಧಿಕಾರಿ ಜಿ. ವೇಗಸ್, ಎಚ್.ಸುಂದರ ರಾವ್, ಮೌನೀಶ್ ಮಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಪಡ್ರೆ ಅವರು ಹಲಸು ಬಳಸಿ, ಉಳಿಸಿ ಹಾಗೂ ಬೆಳೆಸಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.