×
Home About Us Advertise With s Contact Us

ಬಂಟ್ವಾಳದಲ್ಲಿ ಡಿ.ಕೆ.ರವಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

ಬಂಟ್ವಾಳ: ದಕ್ಷ, ಪ್ರಾಮಾಣಿಕ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿಯವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಕಾರ್ಯಕ್ರಮವು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಜರುಗಿತು.

KAR_Shraddhanjali
ಡಿ.ಕೆ.ರವಿಯವರ ಸಾವು ಇಡೀ ರಾಜ್ಯಕ್ಕೆ ದಿಗ್ಭ್ರಮೆಯನ್ನು ಉಂಟು ಮಾಡಿದ್ದು, ರಾಜ್ಯ ಸರಕಾರ ಮಾತ್ರ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದು, ಇದರಿಂದ ರಾಜ್ಯ ಸರಕಾರದ ಮೇಲೆ ಜನರಿಗೆ ಅನುಮಾನ ಮೂಡುವಂತಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ರವಿರಾಜ್ ಬಿ.ಸಿ.ರೋಡ್ ಇವರು ಬುಧವಾರ ಹೇಳಿದರು.

ರವಿಯವರ ಬಾಲ್ಯ ದಿನಗಳಿಂದ ಹಿಡಿದು ಇತ್ತೀಚಿನ ವರೆಗೆ ಅವರು ನಡೆದು ಬಂದ ದಾರಿ, ಅಧಿಕಾರದಲ್ಲಿ ಇರುವಾಗ ಭ್ರಷ್ಟಾಚಾರದ ವಿರುದ್ಧ ನೀಡುವ ದಿಟ್ಟ ಕ್ರಮ, ಜನಸಾಮಾನ್ಯರ ಜೊತೆ ಅವರು ನಡೆದುಕೊಂದ ಒಳ್ಳೆಯ ರೀತಿ, ಈ ಬಗ್ಗೆ ಜನರೇ ಪ್ರತ್ಯಕ್ಷ ಸಾಕ್ಷಿಯಾಗಿ ಹೇಳಿಕೆ ನೀಡುತ್ತಿರುವಾಗ ಅವರ ಸಾವು ಆತ್ಮಹತ್ಯೆಯಲ್ಲ. ಅದು ಒಂದು ವ್ಯವಸ್ಥಿತ ಷಡ್ಯಂತ್ರದಿಂದ ನಡೆದ ಕೊಲೆ ಎಂಬ ಅನುಮಾನ ಮೂಡುತ್ತಿದೆ. ರಾಜ್ಯ ಸರಕಾರ ಕೊನೆಗೂ ಜನರ ಒತ್ತಾಸೆಗೆ ಮಣಿದು, ಸಿ.ಬಿ.ಐ. ಗೆ ಈ ಪ್ರಕರಣವನ್ನು ನೀಡಿದ್ದು, ಸಿ.ಬಿ.ಐ ಶೀಘ್ರದಲ್ಲಿ ಈ ಪ್ರಕರಣವನ್ನು ಭೇದಿಸಿ, ರವಿಯವರ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ಬಿ.ಸಿ.ರೋಡ್ ಜನಜಾಗೃತಿ ಸಮಿತಿ ಅಧ್ಯಕ್ಷ ಜಗನ್ನಾಥ, ಬಂಟ್ವಾಳ ಪುರಸಭೆಯ ಮಾಜಿ ಸದಸ್ಯ ಶ್ರೀನಿವಾಸ ಮಲ್ಲಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾದ ಚಂದ್ರಶೇಖರ ಕಲಾಯಿ, ಸಂತೋಷ ಬೊಂಡಾಲ ಜಗದೀಶ ಕಾಮಾಜೆ, ಶಶಿ ಕಾಮಜೆ, ಶರಣ್, ರತೀಶ್, ಶೈಲೇಶ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು .

 

Recent News

Pungava 01-10-2018
23 hours ago  
Back To Top
error: Content is protected !!