ವಿಟ್ಲ: ಮಾತೆಯರಿಗೆ ಗೌರವದ ಸ್ಥಾನ ನೀಡಿದ ದೇಶ ಭಾರತ. ಉಜ್ವಲ ಭವಿಶ್ಯಕ್ಕಾಗಿ ನಾವು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಿಗೂ ಆದರ್ಶರಾಗಿರ ಬೇಕು. ಭಾರತದ ಆದರ್ಶವಾದ ತ್ಯಾಗ ಸೇವೆಯನ್ನು ಸಮಾಜಕ್ಕೆ ನೀಡಲು ಕಟಿಬದ್ದರಾಗಬೇಕು. ಮಾತೃತ್ವದ ಪರಿಕಲ್ಪನೆಯನ್ನು ಅರಿತುಕೊಂಡು ಸ್ವಾಭಿಮಾನಿಯಾಗಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳ ಬೇಕು. ಛತ್ರಪತಿ ಶಿವಾಜಿ ಮಹಾರಾಜ್, ಸ್ವಾಮಿ ವಿವೇಕಾನಂದರು ನಮಗೆ ರೋಲ್ ಮೋಡೆಲ್ ಗಳಾಗ ಬೇಕು ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿಜಿ ಕರೆ ನೀಡಿದರು.
ಅವರು ಸೋಮವಾರ ಮೂರುಕಜೆಯ ಮೈತ್ರೇಯೀ ಗುರುಕುಲದ ಶೃದ್ಧಾ ಗಣದ ಮಕ್ಕಳ ಪ್ರವೇಶೋತ್ಸವದಲ್ಲಿ (ದೀಕ್ಷಾ ಸಮಾರಂಭ) ಭಾಗವಹಿಸಿ ಆಶಿರ್ವಚನ ನೀಡಿದರು. ಮೆಕಾಲೆ ಶಿಕ್ಷಣದ ಪರಿಣಾಮವಾಗಿ ಭಾರತೀಯತೆಯ ಶಿಕ್ಷಣದಿಂದ ನಾವಿಂದು ದೂರ ಸರಿದಿದ್ದೇವೆ ಎಂದು ಬೊಟ್ಟು ಮಾಡಿದರು. ಗುರುಕುಲದಲ್ಲಿ ಶಿಕ್ಷಣ ಪಡೆಯುವುದು ನಿಮ್ಮ ಜನ್ಮ ಜನ್ಮಾಂತರದ ಪುಣ್ಯದ ಫಲವೆಂದು ಶುಭ ಹಾರೈಸಿದರು.
ನೂತನವಾಗಿ ಗುರುಕುಲದ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿನಿಯರಿಗೆ ಪಂಚ ತಂತ್ರದ ಶ್ಲೋಕ ಮಕ್ಕಳಿಗೆ ಹೇಳಿಕೊಡುವ ಮೂಲಕ ಪ್ರಥಮಪಾಠ ಬೋದಿಸಿದ ಗುರುಕುಲ ಮಾರ್ಗರ್ಶನ ಮಂಡಳಿಯ ಹಿರಿಯರೂ, ಸಂಸ್ಕೃತ ವಿದ್ವಾಂಸರೂ, ನಿವೃತ್ತ ಪ್ರಾಂಶುಪಾಲರೂ ಆದ ಟಿ. ಎನ್. ಪ್ರಭಾಕರ್ ಮಾತನಾಡಿ ಕಾವ್ಯ ಮತ್ತು ಶಾಸ್ತ್ರ ಮನುಷ್ಯನ ಎರಡು ಕಣ್ಣುಗಳು. ನಮ್ಮ ಬುದ್ದಿ ಮನಸ್ಸು ಬೆಳೆಯಲು ಯೋಗ್ಯರ ಸಹವಾಸ ಅಗತ್ಯ. ವಿದ್ಯೆ ವಿನಯದಿಂದ ಜೀವನ ಸಾರ್ಥಕತೆ ಹೊಂದಬಹುದು. ಜೀವನದ ಕೊನೆ ಉಸಿರಿನವರೇಗೂ ನಾವು ಅಧ್ಯಯನ ಶೀಲರಾಗ ಬೇಕು ಎಂದರು.
ಗುರುಕುಲಗಳ ಸಂಯೋಜಕ ಹಾಗೂ ಎಸ್ ,ವ್ಯಾಸ ಯೋಗ ವಿ.ವಿಯ ಕುಲಪತಿಗಳೂ ಆದ ಡಾ| ರಾಮಚಂದ್ರ ಭಟ್ ಕೋಟೆಮನೆ ಪ್ರಾಸ್ತಾವಿಸಿ ಸ್ವಾಮಿ ವಿವೇಕಾನಂದರೆಂದಂತೆ ಮಾತೃಶಕ್ತಿ ಮರು ಸ್ಥಾಪಿತವಾದಾಗ ಸತ್ಯಯುಗ ಮರುಕಳಿಸ ಬಹುದು. ಇಂದು ಮಕ್ಕಳು ಬೇಕೋ ಬೇಡವೋ ಎನ್ನುವ ಘನಘೋರ ಸ್ಥಿತಿಯಲ್ಲೂ ನಾವು ಯೋಗಿಗಳಾಗಿ ಮಾತೃತ್ವವನ್ನು ಸ್ಥಾಪಿಸುವ ಯುಗ ಆರಂಭವಾಗ ಬೇಕು. ಗುರುಕುಲ ವಿದ್ಯಾರ್ಥಿನಿಯರು ನಂದಾದೀಪಗಳಾಗಿ, ಪ್ರತಿ ನಿಮಿಷವೂ ಭವ್ಯ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸುವ ವೃತ ದಾರಿಗಳ ಬೇಕು. ಅವರು ಈ ದೇಶದ ಸಾಂಸ್ಕೃತಿಕ ರಾಯಬಾರಿಗಳಾಗ ಬೇಕು ಎನ್ನುವುದು ಸಮಾಜದ ಅಪೇಕ್ಷೆಯಾಗಿದೆ ಎಂದರು.
ಈ ಸಂದರ್ಭ ಬ್ರಹ್ಮಕೂರ್ಚ ಹೋಮವನ್ನು ಪೂರೋಹಿತ ಮೋಹನ್ ಭಟ್ ಬಟ್ಯಮೂಲೆನೆರವೇರಿಸಿದರು. ನೂತನ ವಿದ್ಯಾರ್ಥಿನಿಯರು ಮಾರ್ಗದರ್ಶಕ ಮಂಡಳಿಯ ಹಿರಿಯರಿಂದ ಮಂತ್ರದೀಕ್ಷೆ ಪಡೆದರು. ಅಜೇಯ ವಿಶ್ವಸ್ಥ ಮಂಡಳಿಯ ಸದಸ್ಯ ವೆಂಕಟೇಶ್ ಅಮೈ ವೇದಿಕೆಯಲ್ಲಿದ್ದರು. ಆರೆಸ್ಸೆಸ್ ಅ.ಬಾ. ಕುಟುಂಬ ಪ್ರಭೋದನ್ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್. ಆರಸ್ಸೆಸ್ ಪ್ರಮುಖ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಅಜೇಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕಮಲಾ ಪ್ರ .ಭಟ್ ಕಲ್ಲಡ್ಕ, ಶ್ರೀರಾಮ ಭಟ್ ಪೆರ್ಲ, ದಕ್ಷಿಣ ಮದ್ಯ ಕ್ಷೇತ್ರೀಯ ಸೇವಾ ಪ್ರಮುಖ ಗೋಪಾಲ ಚೆಟ್ಟಿಯಾರ್,.ಅ.ಭಾ. ಸಾಹಿತ್ಯ ಪರಿಷತ್ತಿನ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಗುರುಕುಲದ ವಿದ್ಯಾರ್ಥಿನಿಯರ ವೇದ ಮಂತ್ರದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮಾತೃಶ್ರೀ ಶ್ರುತಿ ಸ್ವಾಗತಿಸಿದರು. ಗುರುಕುಲದ ಆಚಾರ್ಯ ಉಮೇಶ ಹೆಗ್ಡೆ ವಿದ್ಯಾರ್ಥಿನಿಯರ ಪಾಲಕರಿಗೆ ಸಂಕಲ್ಪ ಭೋದಿಸಿದರು. ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ವಂದಿಸಿದರು. ಕು| ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.