ಬಂಟ್ವಾಳ; ಬಿ.ಸಿ.ರೋಡಿನಲ್ಲಿರುವ ತಾಲೂಕು ಕಛೇರಿ ಸ್ಥಳದಲ್ಲಿ 10ಕೋಟಿ ರೂ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಹಿನ್ನೆಲೆಯಲ್ಲಿ, ಸದ್ರಿ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕು ಕಛೇರಿ , ಸಬ್ರಿಜಿಸ್ಟ್ರಾರ್ ಕಛೇರಿ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಹಳೇ ತಾಲೂಕು ಕಚೇರಿಯಲ್ಲಿರುವ ದಾಖಲೆಗಳನ್ನು ಸರಿಯಾದ ಸಮಯಕ್ಕೆ ತಾತ್ಕಲಿಕ ಕಟ್ಟಡಕ್ಕೆ ವರ್ಗಾಯಿಸಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಈಗಾಗಲೇ ಸ್ಥಳಾಂತರಗೊಂಡ ಕಟ್ಟಡಕ್ಕೆ ಮುಖ್ಯವಾದ ಕೆಲವೊಂದು ಫೈಲ್ಗಳನ್ನು ಮಾತ್ರ ತಂದು ಇಡಲಾಗಿದೆ ಉಳಿದ ದಾಖಲೆಗಳನ್ನು ಅಲ್ಲೇ ಇಡಲಾಗಿದೆ ಅದಕ್ಕೆ ಸರಿಯಾದ ಭದ್ರತೆ ಇಲ್ಲದಿರುವುದರಿಂದ ಹಲವಾರು ಜನರಿಗೆ ಅನ್ಯಾಯವಾಗುವ ಬಗ್ಗೆ ಜನ ಸಂಶಯ ವ್ಯಕ್ತಪಡಿಸಿದ್ದಾರೆ. ಬಾಗಿಲುಗಳನ್ನು ತರೆದು ಇಡಲಾಗಿದ್ದು ಅದರಲ್ಲಿ ಕೂಲಿ ಕಾರ್ಮಿಕರು ವಿದ್ಯುತ್ ಮತ್ತು ಇತರ ಕೆಲಸಗಳನ್ನು ಮಾಡುತ್ತಿದಾರೆ. ಆ ಸಮಯದಲ್ಲಿ ದಾಖಲೆಗಳನ್ನು ಕಾಪಾಡಲು ಕಚೇರಿಯಲ್ಲಿ ಯಾವ ಸಿಬ್ಬಂದಿಗಳು ಇಲ್ಲ ಎನ್ನುತ್ತಿದ್ದಾರೆ.
ಇಲ್ಲಿನ ತಾಲೂಕು ಕಚೇರಿ ಎಂದರೆ ಅದು ಅವ್ಯವಹಾರಕ್ಕೆ ಇನ್ನೊಂದು ಹೆಸರು. ಇಲ್ಲಿನ ಅಧಿಕಾರಿಗಳು ಬೋಕರ್ಗಳ ಜೊತೆ ಶಾಮೀಲಾಗಿ ಸಾಕಷ್ಟು ಅಕ್ರಮ ಕೆಲಸಗಳನ್ನು ಮಾಡಿದ ದಾಖಲೆಗಳು ಕಣ್ಣ ಮುಂದೆ ಇವೆ. ಈಗ ಮಿನಿ ವಿಧಾನ ಸೌಧದ ಹೆಸರಿನಲ್ಲಿ ಮತ್ತಷ್ಟು ಅಕ್ರಮ ಕೆಲಸಗಳನ್ನು ಇವರು ಮಾಡಿಕೊಳ್ಳಲು ಅವಕಾಶ ನೀಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸುತ್ತಾರೆ.
ಈ ಹಿಂದೆ ಇಲ್ಲಿನ ನೌಕರರು ಕಚೇರಿಯ ನಕಲಿ ಮದ್ರೆಗಳನ್ನು ತಯಾರಿಸಿ ನಕಲಿ ದಾಖಲೆಗಳನ್ನು ಮಾಡಿದ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿತ್ತು. ಆದರೂ ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ತಾಲೂಕಿನ ಅದೆಷ್ಟೂ ಜನರ ಜಮೀನು ಯಾರದೋ ಹೆಸರಿಗೆ ರೆಕಾರ್ಡ ಆದದ್ದು ಇದೆ. ಅಂತಹ ಪ್ರಕರಣಗಳು ಕೊರ್ಟಿನಲ್ಲಿವೆ. ಅದಕ್ಕೆ ಇಲ್ಲಿನ ದಂಡಾಧಿಕಾರಿಯಿಂದ ಹಿಡಿದು ಎಲ್ಲಾ ನೌಕಕರು ಶಾಮೀಲಾಗುತ್ತಾರೆ. ಇಲ್ಲಿಗೆ ಬರುವ ಅಧಿಕಾರಿಗಳು ಕೂಡಾ ಎಲ್ಲಾ ತಿಮಿಂಗಲಗಳು ಎಂದು ಜನರು ಆರೋಪ ವ್ಯಕ್ತಪಡಿಸುತ್ತಾರೆ.
ನಪ್ರತಿನಿಧಿಗಳ ಮತ್ತು ಶ್ರಿಮಂತರ ಕೈಗೊಂಬೆಯಾಗಿ ಕೆಲಸ ಮಾಡುವ ಇಲ್ಲಿನ ಕಂದಾಯ ಇಲಾಖೆಯ ಅಧಿಕಾರಿಗಳು ಜನ ಸಾಮನ್ಯರ ಕೆಲಸ ಕಾರ್ಯಗಳನ್ನು ಮಾಡಲು ಹಣಕ್ಕಾಗಿ ಕೈಯೊಡ್ಡುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೆಲವೊಂದು ಕೋರ್ಟ್ ಕಚೇರಿಯಲ್ಲಿ ಪ್ರಕರಣ ದಾಖಲಾದ ಅತೀ ಮುಖ್ಯವಾದ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಇರುವುದರಿಂದ ಅದರ ರಕ್ಷಣೆ ಮಾಡಬೇಕಾಗಿದೆ. ಇಲ್ಲಿನ ಕಿಟಕಿ ಮುರಿಯಲಾಗಿದೆ, ಬಾಗಿಲು ತೆರೆಯಲಾಗಿದೆ ಫೈಲುಗಳು ಕಳ್ಳರ ಪಾಲಾಗದೆ ಫಲಾನುಭವಿಗಳ ಕೈ ಸೇರಿದರೆ ಸಾಕು ಎನ್ನುವ ಮಾತನ್ನು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.