×
Home About Us Advertise With s Contact Us

ಮಾ. 29 ರಂದು ಬೋಳ್ತೇರ್ ತುಳು ಮಿನದನ 2014

Belthangady NEWSಬೆಳ್ತಂಗಡಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವಾಣಿ ಪದವಿ ಪೂರ್ವ ವಿದ್ಯಾಲಯ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಜೂನಿಯರ್ ಛೇಂಬರ್ ಉಜಿರೆ ಇವುಗಳ ಆಶ್ರಯದಲ್ಲಿ ಮಾ. 29 ರಂದು ತುಳುನಾಡಿನ ನಾಡು-ನುಡಿ-ಸಂಸ್ಕೃತಿ, ಸಾಹಿತ್ಯ, ಆಚಾರ-ವಿಚಾರಗಳನ್ನೊಳಗೊಂಡ ಬೋಳ್ತೇರ್(ಬೆಳ್ತಂಗಡಿ) ತುಳು ಮಿನದನ 2014-15 ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ಕಾರ್ಯಕ್ರಮದ ಸಂಚಾಲಕ ಡಾ| ದಿವ ಕೊಕ್ಕಡ ತಿಳಿಸಿದರು.

ಅವರು ಮಂಗಳವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ವಿವಿರ ನೀಡಿದರು. ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಬೆಳಗ್ಗೆ 10-15ಕ್ಕೆ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಲಿದ್ದು, ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪದ್ಮಗೌಡ ಬೆಳಾಲು, ಅಧ್ಯಕ್ಷ ಪಿ. ಕುಶಾಲಪ್ಪ ಗೌಡ, ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು, ಜಿ.ಪಂ. ಸದಸ್ಯ ಶೈಲೇಶ್ ಕುಮಾರ್, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಬೆಳ್ತಂಗಡಿ ಯೋಜನಾಧಿಕಾರಿ ರೂಪಾ ಜೈನ್ ಉಪಸ್ಥಿತರಿರುವರು.

೧11-15ಕ್ಕೆ ನಡೆಯುವ ತುಳು ಸಾಹಿತ್ಯೊದ ಬುಳೆಚ್ಚಿಲ್ ವಿಚಾರ ಕೂಟದಲ್ಲಿ ಸುಳ್ಯ ನೆಹರು ಸ್ಮಾರಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಪೂವಪ್ಪ ಕಣಿಯೂರು, ಪತ್ರಕರ್ತ ಲಕ್ಷ್ಮೀ ಮಚ್ಚಿನ, ೧೨ಗಂಟೆಗೆ ನಡೆಯುವ ತುಳು ನಾಡು-ನುಡಿ-ಸಂಸ್ಕೃತಿ ಸಮಸ್ಯೆ ಮತ್ತು ಸವಾಲು ಚಾವಡಿ ಚರ್ಚೆಯಲ್ಲಿ ಅನಂತರಾಮ ಬಂಗಾಡಿ, ಕೃಷ್ಣಪ್ಪ ಪೂಜಾರಿ, ಡಾ| ಕಿಶೋರ್ ಕುಮಾರ್ ಮಂಗಳೂರು, ಡಾ| ಎಸ್.ಆರ್. ವಿಘ್ನರಾಜ ಧರ್ಮಸ್ಥಳ, ಡಾ| ದಯಾಕರ್ ಉಜಿರೆ, ಅನುರಾಧ ಕೆ. ರಾವ್ ಶಿಶಿಲ, ಪುಷ್ಪಾವತಿ ಉಪ್ಪಿನಂಗಡಿ, ಸತೀಶ್ ನಾಯ್ಕ್ ವೇಣೂರು, ಮಧ್ಯಾಹ್ನ ೨ ಗಂಟೆಗೆ ಜಿತು ನಿಡ್ಲೆ ಅಧ್ಯಕ್ಷತೆಯ ಕವಿತೆ ಕೂಟದಲ್ಲಿ ಸದಾನಂದ ಮುಂಡಾಜೆ, ಮಹಾಬಲ ಗೌಡ ಬೆಳ್ತಂಗಡಿ, ಮಾಲಿನಿ ಅಂಚನ್ ಉಜಿರೆ, ಪತ್ರಕರ್ತ ಅಚ್ಚು ಮುಂಡಾಜೆ, ದೀಪಿಕಾ ಟಿ. ಕೊಯ್ಯೂರು, ಪ್ರಶಾಂತ್ ದಿಡುಪೆ, ಡಾ| ಎಂ.ಪಿ. ಶ್ರೀನಾಥ್, ೩ ಗಂಟೆಗೆ ಸದಾಶಿವ ಶೆಟ್ಟಿ ಲಾಯಿಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಥಾ ಕೂಟದಲ್ಲಿ ಜನಾರ್ದನ ಸುರ್ಯ, ಧೀರಜ್ ಬೆಳ್ಳಾರೆ, ಮೋಹನ್ ಗೌಡ ಭಾಗವಹಿಸಲಿದ್ದಾರೆ. ಯುವಜನತೆಯಲ್ಲಿ ತುಳುನಾಡಿನ ಸಂಸ್ಕೃತಿ, ಸಾಹಿತ್ಯದ ಅರಿವನ್ನು ಮಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಹಳೆಕೋಟೆ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಯದುಪತಿ ಗೌಡ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ| ಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ವೈಕುಂಠ ಪ್ರಭು ಉಪಸ್ಥಿತರಿದ್ದರು.

 

Recent News

Back To Top
error: Content is protected !!