ಬೆಳ್ತಂಗಡಿ : ಶಿಕ್ಷಣವು ಸಮಾನತೆ, ಅವಕಾಶಗಳಿಗೆ ಕಾರಣವಾಗುತ್ತದೆ ಎಂಬುದನ್ನು ಉಜಿರೆಯ ಎಸ್ಡಿಎಂ ಕಾಲೇಜು ತೋರಿಸಿಕೊಟ್ಟಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅವರು ಭಾನುವಾರ ಸಂಜೆ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಎಸ್ಡಿಎಂ ಸ್ಥಾಪಿತವಾದ ನಂತರದ ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡರು. ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳ ಒಳಗೆ ಕುಳಿತು ಕಲಿಕೆಯನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಈ ಸಂಸ್ಥೆಯ ಬೆಳವಣಿಗೆಯ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಾ ನಿರ್ವಹಣೆಯ ವಿವಿಧ ಬಗೆಯ ಕಲಿಕೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಶಿಕ್ಷಣದ ಮೂಲಕ ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗಿದೆ. ಶಿಕ್ಷಣದಿಂದ ಸಮಾನ ಅವಕಾಶಗಳ ವಾತಾವರಣ ಸೃಷ್ಟಿಯಾಗುತ್ತದೆ. ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ.ಎಸ್ಡಿಎಂ ಸಂಸ್ಥೆಯು ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂಥ ಶೈಕ್ಷಣಿಕ ಸಂಸ್ಕಾರ ನೀಡಿದೆ ಎಂದು ಹೇಳಿದರು.
ಪ್ರಾದೇಶಿಕ ಬೆಳವಣಿಗೆಗೆ ಈ ಕಾಲೇಜು ಅಪೂರ್ವವಾದಕಾಣಿಕೆಯನ್ನು ನೀಡಿದೆ .ಶಿಕ್ಷಣದಿಂದ ಸಮಾನತೆ ಮಾತ್ರವಲ್ಲದೆ ಹಲವಾರು ಅವಕಾಶಗಳನ್ನು ತೆರೆದುಕೊಟ್ಟಿದೆ. ಎಸ್ಡಿಎಂ ಗುಣಮಟ್ಟದ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಯನ್ನು ಕಂಡಿದ್ದಾರೆ. ಇಲ್ಲಿನ ಕಾರ್ಯವೈಖರಿಯಿಂದಾಗಿ ಹಲವಾರು ವ್ಯಕ್ತಿಗಳು, ಸಂಸ್ಥೆಗಳು ಪ್ರೇರಣೆ ಪಡೆದಿದ್ದಾರೆ ಎಂದರು.
ನನಗೆ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಪ್ರೇರಣೆ ನೀಡಿದ ಈ ಕಾಲೇಜು ಮಾತೃ ಸಂಸ್ಥೆಯಾಗಿದೆ. ಈ ಕಾಲೇಜಿನ ಭದ್ರ ಬುನಾದಿಯನ್ನು ಪ್ರೋ.ಎಸ್. ಪ್ರಭಾಕರ್ಯಶೋವರ್ಮಅವರು ಪ್ರಗತಿಪರ ಚಿಂತನೆಗಳಿಂದ ಕಾಲೇಜಿನ್ನುಇನ್ನಷ್ಟುಎತ್ತರಕ್ಕೆಕೊಂಡೊಯ್ದಿದ್ದಾರೆ. ಇದರಲ್ಲಿಅಧ್ಯಾಪಕರಆದರ್ಶವೂ ಸೇರಿದೆಎಂದಅವರು ಸಮಾಜದ ಒಳ್ಳೆಯ ಉದ್ದೇಶಕ್ಕೆ ಈ ಸಂಸ್ಥೆಯೊಂದನ್ನು ಸಮಾಜಕ್ಕೆ ಸಮರ್ಪಿಸಿದ್ದೇನೆ ಎಂಬ ಭಾವನೆ ನನ್ನಲ್ಲಿದೆಎಂದುಡಾ| ಹೆಗ್ಗಡೆ ವಿವರಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಶಾಸಕ ಕೆ. ವಸಂತ ಬಂಗೇರ ಅವರು ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾ ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಹೊಸ ಆಯಾಮ ದೊರಕಿಸುವ ಶೈಕ್ಷಣಿಕ ಸಂಸ್ಕಾರ ಕಲ್ಪಿಸಿಕೊಟ್ಟು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಮಹತ್ವಪೂರ್ಣ ಕೊಡುಗೆಗಳನ್ನು ಎಸ್ಡಿಎಂ ಮಹಾವಿದ್ಯಾಲಯ ನೀಡಿದೆ. ಈ ಹಿಂದೆ ೧೯೬೬ರಲ್ಲಿ ಆರಂಭವಾದ ಎಸ್ಡಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಅಧ್ಯಯನದಲ್ಲಿ ತೊಡಗಿದ್ದ ದಿನಗಳನ್ನು ನೆನಪಿಸಿಕೊಂಡ ಅವರು ಇದೇ ಕಾಲೇಜಿನ ಶೈಕ್ಷಣಿಕ ಸಂಸ್ಕಾರ ಪಡೆದ ವಿದ್ಯಾರ್ಥಿಗಳು ವಿವಿಧ ದೇಶಗಳ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಆರಂಭದಲ್ಲಿ ಕೇವಲ ೧೬೫ ವಿದ್ಯಾರ್ಥಿಗಳಿದ್ದರು. ಕೇವಲ 12 ಉಪನ್ಯಾಸಕರಿದ್ದರು. ಈಗ 2882 ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. 185ಕ್ಕೂ ಹೆಚ್ಚು ಅಧ್ಯಾಪಕರು ಕಾರ್ಯೋನ್ಮುಖರಾಗಿದ್ದಾರೆ. ಯಕ್ಷಗಾನ, ಸಂಗೀತ ಕಲೆಗಳಿಗೆ ಸಂಬಂಧಿಸಿದಂತೆ ನುರಿತ ತಜ್ಞರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ರತ್ನವರ್ಮ ಕ್ರೀಡಾಂಗಣದಲ್ಲಿ ಅಭ್ಯಸಿಸಿದ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಈ ದೃಷ್ಟಿಯಿಂದ ಎಸ್ಡಿಎಂ ಶಿಕ್ಷಣ ಸಂಸ್ಥೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಿರಿಮೆ ಗಣನೀಯವಾದುದು ಎಂದು ಅವರು ಹೇಳಿದರು.
ಡಾ. ಹೆಗ್ಗಡೆ ದಂಪತಿಗಳನ್ನು ಗೌರವಿಸಲಾಯಿತು. ಹೇಮಾವತಿ ವಿ.ಹೆಗ್ಗಡೆ ಶುಭಾಶಯ ನುಡಿಗಳನ್ನಾಡಿದರು .ಎಸ್ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಕಾಲೇಜಿನ ಮೊದಲ ಪ್ರಾಚಾರ್ಯ ಪ್ರೊ.ಎಸ್.ಪ್ರಭಾಕರ್, ಕಾರ್ಯದರ್ಶಿಗಳಾದ ಡಾ.ಬಿ.ಯಶೋವರ್ಮ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ವ್ಯಂಗಚಿತ್ರಕಾರ ಲಕ್ಷ್ಮೀನಾರಾಯಣ ರಚಿಸಿದ ಡಾ| ಹೆಗ್ಗಡೆಯವರ ಭಾವ ಚಿತ್ರವನ್ನು ಹಾಗೂ ಅಂತರಾಷ್ಟ್ರೀಯ ಕಲಾವಿದ ವಿಲಾಸ್ ನಾಯಕ್ ಅವರು ಹಿರಿಯವಿದ್ಯಾರ್ಥಿಗಳ ಬೆರಳಚ್ಚಿನಿಂದ ರಚಿಸಿದ ಕಾಲೇಜು ಕಟ್ಟಡದ ಚಿತ್ರವನ್ನು ಡಾ| ಹೆಗ್ಗಡೆ ಅವರಿಗೆ ಸಮರ್ಪಿಸಿದರು.
ಎಸ್ಡಿಎಂ ಕಾಲೇಜ್ನ ಹಳೆಯ ವಿದ್ಯಾರ್ಥಿ ಪ್ರದೀಪ್ ನಾವುರ ಅನಿಸಿಕೆ ವ್ಯಕ್ತಪಡಿಸಿದರು. ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೋಹನನಾರಾಯಣ, ಶ್ರೀ ಜನಾರ್ಧನಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ವಿಜಯರಾಘವ ಪಡ್ವೆಟ್ನಾಯ ಮತ್ತಿತರರು ಉಪಸ್ಥಿತರಿದ್ದರು. ಸುಮಾ ಶಂಕರನಾರಾಯಣ ಪ್ರಾರ್ಥಿಸಿದರು. ಸುವರ್ಣ ಮಹೋತ್ಸವ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಸ್ವಾಗತಿಸಿದರು. ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಾಧವ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ಮಹೋತ್ಸವ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಧನಂಜಯರಾವ್ ವಂದಿಸಿದರು.
ನನ್ನ ಇಂದಿನ ಬೆಳವಣಿಗೆಗೆಯಲ್ಲಿ ನನ್ನಲ್ಲಿ ಉತ್ಸಾಹ, ಕಲ್ಪನೆಗಳನ್ನು ಮೂಡಿಸಿದ್ದು ಒಂದೆಡೆ ಶ್ರೀ ಮಂಜುನಾಥ ಸ್ವಾಮಿಯಾದರೆ, ಇನ್ನೊಂದೆಡೆ ಮಾತೃ ಸಂಸ್ಥೆಯಾದ ಎಸ್ಡಿಎಂ ಕಾಲೇಜು – ಡಾ| ಹೆಗ್ಗಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.