ಬೆಳ್ತಂಗಡಿ : ಹಿಂದೂಗಳ ಮೇಲಾಗುತ್ತಿರುವ ಆಘಾತಗಳನ್ನು ಎದುರಿಸಲು ಎಲ್ಲರೂ ಸಂಘಟಿತಭಾವದಿಂದ ಪ್ರಯತ್ನಿಸಬೇಕು. ಅಲ್ಲದೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದು ಅವಶ್ಯವಾಗಿದೆ ಎಂದು ಹಿಂದೂ ಐಕ್ಯ ವೇದಿಕೆ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ವೇ|ಮೂ| ರವೀಶ ತಂತ್ರಿ ಕುಂಟಾರು ಹೇಳಿದರು.
ಅವರು ಲಾಯಿಲಾದ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಹಿಂದೆ ಕೇರಳದಲ್ಲಿ ಕೈಗೆ ರಕ್ಷೆ ಕಟ್ಟಲು, ಹಣೆಗೆ ತಿಲಕ ಹಚ್ಚಲು ಹೆದರುತ್ತಿದ್ದ ಹಿಂದೂಗಳು ಈಗ ಸಾರ್ವಜನಿಕವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಆಚರಿಸುವಂತಾಗಿದೆ. ಇದು ಹಿಂದೂ ಸಂಘಟನೆಯ ಪರಿಣಾಮವಾಗಿದೆ. ಕರ್ನಾಟಕ ಸರಕಾರ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ.
ಹಿಂದೂಗಳ ಮುದ್ರಾಯೋಗವನ್ನು ನಿಷೇಧಿಸಲು ಹೊರಟಿದೆ. ಇದನ್ನು ವಿರೋಧಿಸಬೇಕು. ಹಿಂದೂ ಸಮಾಜವು ಧರ್ಮದ ಆಚರಣೆ ಮಾಡುವುದರಿಂದ ಬಲಿಷ್ಠ ಮತ್ತು ಸಂಪದ್ಬರಿತವಾಗುತ್ತದೆ. ಹಿಂದೂ ಧರ್ಮದ ಆಚರಣೆ, ಪರಂಪರೆ, ಸಂಪ್ರದಾಯಗಳನ್ನು ಆಚರಿಸುವದರಿಂದ ದೈವಿಚೈತನ್ಯ ಪ್ರಾಪ್ತವಾಗಿ ವ್ಯಕ್ತಿಯ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಪ್ರಗತಿಯೊಂದಿಗೆ ಸಮಾಜದ ಕಲ್ಯಾಣವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಧರ್ಮಶಿಕ್ಷಣ ಪಡೆದು ಧರ್ಮದ ಆಚರಣೆ ಮಾಡಬೇಕು ಎಂದರು. ಸನಾತನ ಸಂಸ್ಥೆಯ ಭವ್ಯ ಗೌಡ ಮಾತನಾಡಿ, ಸದ್ಯ ದೇಶದಲ್ಲಿ ಪೋರೋಗಾಮಿಗಳು, ಭಯೋತ್ಪಾದಕರು ಹಿಂದೂ ಸಮಾಜಕ್ಕೆ ಬಹಳಷ್ಟು ಹಾನಿ ಮಾಡುತ್ತಿದೆ.
ಅದನ್ನು ತಡೆಯಲು ಹಿಂದೂ ಸಮಾಜ ಜಾತಿ, ಮತ, ಪಂಥ, ಸಂಘಟನೆ ಬೇಧ ಮರೆತು ಹಿಂದೂ ಎಂದು ಒಂದಾಗಬೇಕಾಗಿದೆ. ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವವರಿಗೆ ಸನಾತನವು ಈ ವರೆಗೆ ತಯಾರಿಸಿದ ಸಂತರತ್ನವನ್ನು ಇತರರಿಗೆ ತಯಾರಿಸಲು ಸಾಧ್ಯವಿದೆಯೇನು? ಎಂದು ಪ್ರಶ್ನಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಮೋಹನ ಗೌಡ ಮಾತನಾಡಿ, ಹಿಂದೂ ಧಾರ್ಮಿಕ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮಿಯರ ಹೆಸರು ಹಾಕುವುದು ಹಿಂದೂ ಧರ್ಮದ ಮೇಲಿನ ಆಘಾತವಾಗಿದೆ. ಇಂದು ದೇವಸ್ಥಾನಗಳ ಸರಕಾರೀಕರಣದಿಂದ ದೇವಸ್ಥಾನಗಳ ಲೂಟಿ ಆಗುತ್ತಿದೆ. ಹಾಗಾಗಿ ಹಿಂದೂ ದೇವಸ್ಥಾನಗಳನ್ನು ಜಾತ್ಯಾತೀತ ಸರಕಾರದಿಂದ ಮುಕ್ತ ಮಾಡಿ ಹಿಂದೂಗಳೇ ನಡೆಸುವುದೇ ಪರಿಹಾರವಾಗಿದೆ ಎಂದರು.
ಡಾ| ಗೌರಿ ಆಚಾರ್ಯ ಕಾರ್ಕಳ ಸ್ವಾಗತಿಸಿದರು. ವಿವೇಕ್ ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಲಾಲದಿಂದ ಭಜನಾ ಮಂಡಳಿಯ ಭಕ್ತಾದಿಗಳು ಭಜನಾ ಮೆರವಣಿಗೆಯ ಮೂಲಕ ಧರ್ಮಸಭೆಯ ಸಭಾಗೃಹಕ್ಕೆ ಆಗಮಿಸಿದರು. ಸುಮಾರು ೨೦೦ ದ್ವಿಚಕ್ರ ವಾಹನಗಳ ಮೂಲಕ ಯುವಕರು ಬೈಕ್ ರ್ಯಾಲಿ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.