ನವದೆಹಲಿ: ಭಾರತದ ಖ್ಯಾತ ಕ್ರಿಕೆಟ್ ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚು ಸಂಭಾವನೆಯನ್ನು ಜಾಹೀರಾತುಗಳಿಂದಲೇ ಪಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಅವರು ತಮ್ಮ ಬ್ಯಾಟ್ ಮೇಲಿನ, ಸಮವಸ್ತ್ರದ ಮೇಲಿನ ಜಾಹೀರಾತಿನಿಂದಲೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ .
ಭಾರತದ ಭರವಸೆ ಆಟಗಾರ ವಿರಾಟ್ ಕೊಹ್ಲಿ ಎಲ್ಲರಿಗಿಂತಲೂ ಹೆಚ್ಚು ಅಂದರೆ ಬರೋಬ್ಬರಿ 8 ಕೋಟಿಯನ್ನು ತಮ್ಮ ಬ್ಯಾಟ್ ಮೇಲೆ ಅಂಟಿಸಿರುವ ಎಂಆರ್ಎಫ್ ಜಾಹೀರಾತಿನಿಂದ ಪಡೆದುಕೊಳ್ಳುತ್ತಿದ್ದಾರೆ.
ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಅವರಿಗಿಂತ ಕಡಿಮೆ ಅಂದರೆ ಆರು ಕೋಟಿ ಪಡೆಯುತ್ತಿದ್ದಾರೆ. ಅವರ ಬ್ಯಾಟ್ ಮೇಲಿರುವುದು ಸ್ಪಾರ್ಟನ್ ಸ್ಟಿಕರ್. ಸುರೇಶ್ ರೈನಾ, ರೋಹಿತ್ ಶರ್ಮಾ ಅವರೂ 3 ಕೋಟಿಯನ್ನು ಬ್ಯಾಟ್ ಜಾಹೀರಾತಿನಿಂದ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಕ್ರಿಕೆಟ್ ಆಟಗಾರರು ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.