ಬೆಂಗಳೂರು : ನಿನ್ನೆ ಸಿದ್ದರಾಮಯ್ಯನವರು ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ವಿದ್ಯುತ್ ಕಡಿತಗೊಂಡಿದ್ದು, ಈ ಬಗ್ಗೆ ವಿಧಾನ ಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪರವರಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಬಜೆಟ್ ಮಂಡಿಸುವ ವೇಳೆ ವಿದ್ಯುತ್ ಕಡಿತಗೊಂಡಿದ್ದು, ಸರಕಾರಕ್ಕೆ ಇದು ತೀವ್ರ ಮುಜುಗುರವನ್ನು ಉಂಟುಮಾಡಿತ್ತು. ಈ ವಿಷಯದ ಕುರಿತು ವಿಧಾನ ಸಭಾ ಸ್ಪೀಕರ್ ಅಧಿಕಾರಿಗಳ ಬಳಿ ಈ ಘಟನೆಯಲ್ಲಿ ಯಾರದಾದರೂ ಕೈವಾಡವಿದೆಯೋ ಅಥವಾ ತಾಂತ್ರಿಕ ದೋಷವೋ ಎಂದು ಸ್ಪಷ್ಟನೆ ಕೇಳಿದ್ದರು.
ಅಧಿಕಾರಿಗಳು ಈ ಬಗ್ಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಯಾರ ಕೈವಾಡವೂ ಇಲ್ಲ. ಟ್ರಿಪ್ ಆದ ಕಾರಣದಿಂದಾಗಿ ವಿದ್ಯುತ್ ಕಡಿತವಾಗಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಕಡಿತಗೊಂಡ ಕಾರಣ ನಿನ್ನೆ ನಾಲ್ಕು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಅಧಿಕಾರಿಗಳ ಈ ಸ್ಪಷ್ಟನೆಯಿಂದ ಸಸ್ಪೆಂಡ್ ಆದ ಅಧಿಕಾರಿಗಳ ಸಸ್ಪೆಂಡ್ ಆದೇಶವು ರದ್ದುಗೊಳ್ಳಲಿದೆಯೇ ಎಂದು ಕಾದು ನೋಡ ಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.