ಬೆಳ್ತಂಗಡಿ : ರಮಣೀಯ ಪ್ರಕೃತಿಯ ಮಡಿಲ್ಲಿರುವ ಬೆಳಾಲು ಗ್ರಾಮದ ಶ್ರೀ ಮಾಯಾ ಮಹಾದೇವ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲೋಶತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಳ್ಳಲಿದ್ದು. ಮಾ. 27 ರ ತನಕ ನಡೆಯಲಿವೆ.
ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದಗಳೊಂದಿಗೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಡಿ. ಹರ್ಷೇಂದ್ರಕುಮಾರ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಯು. ವಿಜಯರಾಘವ ಪಡ್ವೆಟ್ನಾಯರವರ ಮಾರ್ಗದರ್ಶನಗಳೊಂದಿಗೆ, ಬ್ರಹ್ಮಶ್ರೀ ವೇ| ಮೂ| ನೀಲೇಶ್ವರ ಆಲಂಬಾಡಿ ವಾಸುದೇವ ತಂತ್ರಿಗಳ ಹಿರಿತನದಲ್ಲಿ, ಬ್ರಹ್ಮಶ್ರೀ ವೇ| ಮೂ| ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.
ಇಂದು ಬೆಳಿಗ್ಗೆ ಗಂಟೆ 10 ರಿಂದ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆಯಲಿದೆ. ಬೆಳ್ತಂಗಡಿಯ ಉದ್ಯಮಿ ರಮಾನಂದ ಸಾಲ್ಯಾನ್ ಕಾರ್ಯಾಲಯದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಬೆಳಾಲು ಶ್ರೀ ಗುರು ರಾಜರಾಜೇಶ್ವರಿ ಕ್ಷೇತ್ರದ ಚಂದ್ರಹಾಸ ಡಿ. ಉಗ್ರಾಣ ಉದ್ಘಾಟಿಸಲಿದ್ದಾರೆ. ಉಜಿರೆಯ ಹಿರಿಯರಾದ ಸುಬ್ರಾಯ ಶೆಣೈ ಅವರು ಅನ್ನಛತ್ರ ಉದ್ಘಾಟಿಸಲಿದ್ದಾರೆ.
ಈ ಸಂದರ್ಭ ಬೆಳಾಲು ಗ್ರಾಮದ ಸಮಸ್ತ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ವಿಶ್ವ ಬ್ರಾಹ್ಮಣ ಯುವಕ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 4 ಗಂಟೆಗೆಕ್ಷೇತ್ರಕ್ಕೆ ತಂತ್ರಿಗಳ ಮತ್ತು ಇತರ ಋತ್ವಿಜರ ಆಗಮನವಾಗಲಿದ್ದು ಅವರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಸಂಜೆಗಂಟೆ 5 ಕ್ಕೆ ವೈದಿಕ ಕಾರ್ಯಕ್ರಮಗಳ ಅಂಗವಾಗಿ ಆಚಾರ್ಯವರಣ, ಸಾಮೂಹಿಕ ಪ್ರಾರ್ಥನೆ, ಸುದರ್ಶನ ಹೋಮ, ಆವಾಹನೆ, ಉಚ್ಛಾಟನೆ, ಪಶುದಾನ ಪುಣ್ಯಾಹ, ಅಂಕುರಾರೋಹಣ, ಪ್ರಾಸಾದ ಶುದ್ಧಿ, ರಾಕ್ಷೆಘನ್ ಹೋಮ, ವಾಸ್ತು ಹೋಮ, ವಾಸ್ತುಕಲಶ, ರಕ್ಷಾಕಲಶ, ವಾಸ್ತುಬಲಿ, ವಾಸ್ತುಕಲಶಾಭಿಷೇಕ, ರಾತ್ರಿ ಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 5-30 ರಿಂದ ಮಾಯಾ ಮತ್ತು ನಿಂತಿಕಲ್ಲು ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ವವಿಧ ವಿನೋದಾವಳಿಗಳು, ಸಂಜೆ 6-30 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಯಾ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಸಂಜೆ 8 ರಿಂದ ಬಲೆ ತೆಲಿಪಾಲೆ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೆಲಿಕೆದ ತೆನಾಲಿ ಶ್ರೀ ಸುನೀಲ್ ನೆಲ್ಲಿಗುಡ್ಡೆ ಮತ್ತು ಬಳಗ ಕಾರ್ಕಳ ಇವರಿಂದ ತೆಲಿಕೆದ ಬರ್ಸ ಪ್ರಸ್ತುತಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.