×
Home About Us Advertise With s Contact Us

ಇಂದು ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸಲಿರುವ ಜೇಟ್ಲಿ

Jaitely

ನವದೆಹಲಿ: ಕೇಂದ್ರ ಬಜೆಟ್ ಹಿನ್ನಲೆಯಲ್ಲಿ ಸರ್ಕಾರ ಶುಕ್ರವಾರ ಸದನದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿಯ ಬಗೆಗಿನ ವಿವರಣೆಯನ್ನು ಆರ್ಥಿಕ ಬಜೆಟ್ ನೀಡಲಿದೆ.

ಈ ಬಾರಿಯ ಬಜೆಟ್‌ನಲ್ಲಿ ಸೇವಿಂಗ್ಸ್ ಕ್ಯಾಪ್, ವೈದ್ಯಕೀಯ ಆಯವ್ಯಯ ಮಟ್ಟ, ವಸತಿ ಸಾಲದಲ್ಲಿನ ರಿಯಾಯಿತಿ ಮುಂತಾದುವುಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

ಕಡಿಮೆ ಆದಾಯ ತೆರಿಗೆ 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ 3 ಲಕ್ಷದವರೆಗೆ ಮಾತ್ರ ಆದಾಯ ಹೊಂದಿರುವವರು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲಿದ್ದಾರೆ.

ನ್ಯಾಯಸಮ್ಮತವಲ್ಲದ ಕೆಲ ವೈಯಕ್ತಿಕ ತೆರಿಗೆ ಕಾನೂನುಗಳನ್ನು ಬದಲಾಯಿಸುವ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಈಗಾಗಲೇ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

 

Recent News

Back To Top
error: Content is protected !!