×
Home About Us Advertise With s Contact Us

ಪ್ರಧಾನಿಯನ್ನು ಭೇಟಿಯಾದ ಚೀನಾ ನಿಯೋಗ

modiನವದೆಹಲಿ: ಚೀನಾದ ಸ್ಟೇಟ್ ಕೌನ್ಸಿಲರ್ ಮತ್ತು ಭಾರತ-ಚೀನಾ ಗಡಿ ಮಾತುಕತೆಯ ವಿಶೇಷ ಪ್ರತಿನಿಧಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಭೇಟಿಯ ವೇಳೆ ಉಭಯ ನಾಯಕರುಗಳ ನಡುವೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತುಕತೆ ನಡೆಯಿತು ಎನ್ನಲಾಗಿದೆ. ಗಡಿ ಮಾತುಕತೆಗಾಗಿ ಚೀನಾ ನಿಯೋಗ ಭಾನುವಾರ ಭಾರತಕ್ಕೆ ಆಗಮಿಸಿತ್ತು.

ಸೋಮವಾರ ನಡೆದ ಗಡಿ ಮಾತುಕತೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಚೀನಾ, ಭಾರತ ಮಾತುಕತೆಯ ವಿಶೇಷ ಪ್ರತಿನಿಧಿಯೂ ಆದ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಚೀನಾದಲ್ಲಿನ ಮಾಜಿ ಭಾರತೀಯ ರಾಯಭಾರಿ ಭಾಗವಹಿಸಿದ್ದರು.

ಮೋದಿ ಭೇಟಿಯ ಬಳಿಕ ಇಂದು ಚೀನಾದ ನಿಯೋಗ ತನ್ನ ದೇಶಕ್ಕೆ ವಾಪಾಸ್ಸಾಗಲಿದೆ.

 

Recent News

Back To Top
error: Content is protected !!