×
Home About Us Advertise With s Contact Us

ಶಶಿ ಕಪೂರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

shshiನವದೆಹಲಿ: ಭಾರತೀಯ ಚಿತ್ರರಂಗಕ್ಕೆ ಗಣನೀಯ ಸೇವೆ ಸಲ್ಲಿಸಿದ ನಟ-ನಿರ್ದೇಶಕ ಶಶಿ ಕಪೂರ್ ಅವರಿಗೆ 2014ರ ಸಾಲಿನ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ.

77 ವರ್ಷದ ಶಶಿ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. 3 ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಇವರಿಗೆ 2010ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ದೊರೆತಿದೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ 46ನೇ ವ್ಯಕ್ತಿ ಇವರಾಗಿದ್ದಾರೆ ಮತ್ತು ಕಪೂರ್ ಕುಟುಂಬ 3ನೇ ಕುಡಿಯಾಗಿದ್ದಾರೆ. ಈ ಹಿಂದೆ ಇವರ ತಂದೆ ಪೃಥ್ವಿರಾಜ್ ಕಪೂರ್ ಮತ್ತು ಸಹೋದರ ರಾಜ್ ಕಪೂರ್ ಇದೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 10 ಲಕ್ಷ ರೂಪಾಯಿ ನಗದು ಪ್ರತಿಯನ್ನು ಹೊಂದಿದೆ.

 

Recent News

Back To Top
error: Content is protected !!