ಬೆಂಗಳೂರು : ಕೆ.ಎಸ್.ಆರ್.ಟಿ.ಸಿ. ಯು ತನ್ನ 13 ಬಸ್ನಿಲ್ದಾಣಗಳಲ್ಲಿ ಅಂತರ್ಜಾಲ ಮತ್ತು ವೈಫೈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಮೊದಲಿಗೆ ಈ ಸೌಲಭ್ಯಗಳನ್ನು ಮಂಗಳೂರು, ಕುಂದಾಪುರ, ಧರ್ಮಸ್ಥಳ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ ಹಾಸನ, ಮಂಡ್ಯ, ಹರಿಹರ, ದಾವಣಗೆರೆ, ಮತ್ತು ತುಮಕೂರು ಬಸ್ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಉಚಿತವಾಗಿ ಬಳಸಬಹುದಾಗಿದೆ.
ಅಂತರ್ಜಾಲ ಮತ್ತು ವೈಫೈಗಳನ್ನು ಉಚಿತವಾಗಿ ಬಳಸೋದು ಹೇಗೆ:
ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ಲೆಟ್ನಲ್ಲಿ ಲಭ್ಯವಿರುವ ವೈಫೈನಲ್ಲಿ ಫೈI-ON WI-FI’ ಆಯ್ಕೆ ಮಾಡಬೇಕು.
I-ON ನೆಟ್ ವರ್ಕ್ ಅಥವಾ ಗೂಗಲ್ ಪ್ಲೇ ಸ್ಟೋರ್ನಿಂದ ಉಚಿತ ‘I-ON WI-FI’ ಆ್ಯಪ್ ಡೌನ್ಲೋಡ್ ಮಾಡಬೇಕು.
ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿದಾಗ ಎಸ್ಎಂಎಸ್ ಮೂಲಕ ಪಾಸ್ವರ್ಡ್ ದೊರಕುತ್ತದೆ. ಈ ಪಾಸ್ವರ್ಡ್ ಅನ್ನು ಸಬ್ಮಿಟ್ ಎಂದು ನೀಡಿದಾಗ ಇಂಟರ್ನೆಟ್ ಸಂಪರ್ಕ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.