ಬಾಬಾ ಸಾಹೇಬ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಡಾ.ಭೀಮ್ರಾವ್ ಅಂಬೇಡ್ಕರ್ ಅವರು ಎ.14, 1891ರಲ್ಲಿ ಜನಿಸಿದರು. ಅವರು ಆಧುನಿಕ ಬೌದ್ಧ ಚಳವಳಿಯ ಸ್ಫೂರ್ತಿದಾಯಕರು. ದಲಿತರು, ಮಹಿಳೆಯರು ಮತ್ತು ಕಾರ್ಮಿಕ ವರ್ಣಭೇದ ನೀತಿಯ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದ ಭಾರತೀಯ ನ್ಯಾಯವಾದಿ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವ ಮತ್ತು ಭಾರತೀಯ ಸಂವಿಧಾನದ ಪ್ರಮುಖ ವಾಸ್ತುಶಿಲ್ಪಿ ಆಗಿದ್ದಾರೆ.
ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವರು ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ, ಮತ್ತು ವಕೀಲರಾಗಿದ್ದರು. ನಂತರ ಅವರು ಅಸ್ಪೃಶ್ಯರ ರಾಜಕೀಯ ಹಕ್ಕುಗಳು ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಮರ್ಥಿಸುವ ಕುರಿತು ಪತ್ರಿಕೆಗಳಲ್ಲಿ ಪ್ರಕಟಿಸುವ ಹೋರಾಟಗಾರರಾದರು. ಭಾರತ ದೇಶದ ಸ್ಥಾಪನೆಗಾಗಿ ಒಂದು ಅರ್ಥಗರ್ಭಿತ ಕೊಡುಗೆಯನ್ನು ನೀಡುವ ಮೂಲಕ ಭಾರತದ ಸ್ವಾತಂತ್ರ್ಯದ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿದರು.
ಅಂಬೇಡ್ಕರ್ ವಿದೇಶದಲ್ಲಿ ಅರ್ಥಶಾಸ್ತ್ರ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಅವರು ಭಾರತದ ಹಣಕಾಸು ಆಯೋಗ ಸ್ಥಾಪಿಸಲು ಅರ್ಹತೆ ಹೊಂದಿದವರಾದ್ದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೆನಪಿಗಾಗಿ ಪ್ರತಿ ವರ್ಷ ಎಪ್ರಿಲ್ 14ರಂದು ಭೀಮ್ ಜಯಂತಿ ಹಬ್ಬ ಆಚರಿಸಲಾಗುತ್ತದೆ. ಈ ದಿನ ಭಾರತದ ರಾಷ್ಟ್ರಪತಿ, ಪ್ರಧಾನಿ, ಪ್ರಮುಖ ಪಕ್ಷಗಳ ನಾಯಕರು ದೆಹಲಿ ಸಂಸತ್ತಿನಲ್ಲಿ ಬಾಬಾಸಾಹೇಬ್ ಪ್ರತಿಮೆಗೆ ಗೌರವಾರ್ಪಣೆ ಮಾಡುವುದು ಸಂಪ್ರದಾಯ. ವಿಶೇಷವಾಗಿ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಹೋರಾಡಿದ ಹಿಂದುಳಿದ ವರ್ಗಗಳ ಸಮುದಾಯದ ಜನರಿಂದ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್ ಜಯಂತಿಯನ್ನು ಭಾರತದ ಜನರಿಗೆ ಕೊಡುಗೆಯನ್ನು ನೀಡಿದ ನೆನಪಿಗಾಗಿ ಆಚರಿಸಲಾಗುತ್ತದೆ.
ಅಂಬೇಡ್ಕರ್ ಭಾರತದ ಜನತೆಯ ಸಾಕ್ಷರತೆಗೆ ಹಾಗೂ ಭಾರತದ ಬಡ ಜನರ ಆರ್ಥಿಕ ಸ್ಥಾನಮಾನ ವೃದ್ಧಿಸುವ ಗುರಿಯೊಂದಿಗೆ 1923ರಲ್ಲಿ ‘ಬಹಿಷ್ಕೃತ ಹಿತಕರಿಣಿ ಸಭಾ’ ವನ್ನು ಸ್ಥಾಪಿಸಿದರು. ಜನರಿಗೆ ಸಾಮಾಜಿಕ ಚಳವಳಿಯಲ್ಲಿ “ಶಿಕ್ಷಣ-ಚಳವಳಿ-ಆಯೋಜನೆ” ಎಂಬ ಘೋಷಣೆ ಬಳಸಿಕೊಂಡು ಭಾರತದಲ್ಲಿ ಜಾತೀಯತೆ ನಿರ್ಮೂಲನೆಗೆ ಹಾಗೂ ಭಾರತೀಯ ಸಮಾಜ ಮರುನಿರ್ಮಾಣಕ್ಕಾಗಿ ಸಮಾನತೆಯ ನಿಯಮ ಅನುಸರಿಸಿದರು. ಇದು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಬುಡಕಟ್ಟು ಸಮುದಾಯದವರಿಗೆ ಶಾಲಾ-ಕಾಲೇಜುಗಳಲ್ಲಿ, ಉದ್ಯೋಗದಲ್ಲಿ, ನಾಗರಿಕ ಸೇವಾ ಸಂಸ್ಥೆಗಳಲ್ಲಿ ಮೀಸಲಾತಿ ದೊರೆಯುವಂತೆ ಮಾಡಿತು.
ಅವರ ಜಾತಿ ವಿರೋಧಿ, ಪಾದ್ರಿ ವಿರೋಧಿ ಚಳುವಳಿ ಮತ್ತು ದೇವಸ್ಥಾನಕ್ಕೆ ಪ್ರವೇಶ ಚಳುವಳಿಗಳಂತಹ ಸಾಮಾಜಿಕ ಚಳವಳಿಗಳು ಭಾರತೀಯ ಇತಿಹಾಸದಲ್ಲಿ ಪ್ರಮುಖ ದಾಖಲೆಯಾಗಿವೆ. ಆಗಸ್ಟ್ 29, 1947ರಂದು, ಅವರನ್ನು ಭಾರತದ ಹೊಸ ಸಂವಿಧಾನವನ್ನು ರಚಿಸಲು ಅಸೆಂಬ್ಲಿಯು ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಅವರು ಡಿಸೆಂಬರ್ 1956ರಲ್ಲಿ ಮರಣ ಹೊಂದಿದರು. 1990ರಲ್ಲಿ ಅವರಿಗೆ ಮರಣೋತ್ತರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ನೀಡಿ ಗೌರವಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.