ಬೆಂಗಳೂರು : ಶ್ರೀ ಧರ್ಮಸ್ಥಳ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯು ತನ್ನ www.homemadeonline.in ಆನ್ಲೈನ್ ಪಾಲುದಾರ ಸಂಸ್ಥೆಯೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ಹೊಸದಾಗಿ ‘ಸಖಿ ಉತ್ಸವ್’ ಎಂಬ ಸಂಚಾರಿ ಮಾರಾಟ ಮಳಿಗೆಯನ್ನು ಆರಂಭಿಸುತ್ತಿದೆ. ಮೊಣಕಾಲ್ಮೂರು, ಶಿಗ್ಲಿ, ಇಳಕಲ್ಗಳಲ್ಲಿ ಸ್ವಸಹಾಯ ಮಹಿಳಾ ಗುಂಪುಗಳು ತಯಾರಿಸಿದ ಅತ್ಯುತ್ತಮ ಗುಣಮಟ್ಟದ ಸಾಂಪ್ರದಾಯಿಕವಾಗಿ ಕೈಯಿಂದಲೇ ನೇಯ್ಗೆ ಮಾಡಿದಂತಹ ಸೀರೆಗಳು, ಖಾದಿ ಬಟ್ಟೆಗಳು ಮತ್ತು ಗ್ರಾಮೀಣ ಮಹಿಳೆಯರು ತಯಾರಿಸುವ ಉತೃಷ್ಟ ಆಹಾರ ಉತ್ಪನ್ನಗಳನ್ನು ಗ್ರಾಹಕರ ಮನೆಬಾಗಿಲಿಗೆ ನರವಾಗಿ ಸಂಪರ್ಕಿಸುವಂತೆ ಮಾಡುವುದೇ ಸಂಚಾರೀ ಮಳಿಗೆ ಸಖಿ ಉತ್ಸವದ ಉದ್ದೇಶ.
ಮಾರುಕಟ್ಟೆಗೆ ನೇಕಾರರು : ಸೀರೆ ಎಂಬುದು ಹೊಲಿಗೆಯಿಲ್ಲದ ಜಗತ್ತಿನ ಅತ್ಯಂತ ಹಳೆಯ ಉಡುಪು. ಶತಮಾನಗಳಿಂದ ಸೀರೆ ಕಾಲ ಕಾಲಕ್ಕೆ ಬದಲಾಗುತ್ತಲೇ ಬಂದಿದ್ದು, ಇಂದು ಗ್ಲಾಮರ್ ಜಗತ್ತಿನಲ್ಲೂ ಮಿಂಚುತ್ತಿದೆ. ಇದೇ ಸೀರೆ ಇಂದು ನೇಕಾರರ ಹೊಟ್ಟೆಪಾಡಿನ ಪ್ರಮುಖ ಉದ್ಯೋಗದಾತ ಸಾಧನವೂ ಆಗಿದೆ. ಸಾಂಪ್ರದಾಯಿಕ ನೇಕಾರಿಕೆಯ ವೈಭವವನ್ನು ಉಳಿಸುವ ಸಲುವಾಗಿ ‘ಸಿರಿ’ ಸಂಸ್ಥೆ ಸ್ವಸಹಾಯ ಗುಂಪುಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಈ ಗುಂಪುಗಳು ಕೈಮಗ್ಗದಲ್ಲಿ ಸೀರೆಗಳನ್ನು ನೇಯುವುದರಲ್ಲಿ ತೊಡಗಿಸಿಕೊಂಡಂತಹವುಗಳು.
ಖಾದಿ ಎಂಬುದು ರಾಷ್ಟ್ರೀಯತೆ, ಸಮಾನತೆ ಮತ್ತು ಸ್ವಾವಲಂಬನೆಯ ಸಂಕೇತ:ಮಹಾತ್ಮಾ ಗಾಂಧೀಜಿ ಅವರು ಖಾದಿಯನ್ನು ರಾಷ್ಟ್ರೀಯತೆ, ಸಮಾನತೆ ಮತ್ತು ಸ್ವಾವಲಂಬನೆಯ ಸಂಕೇತವನ್ನಾಗಿ ಬಿಂಬಿಸಿದರು. ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡುವ ಧ್ಯೇಯವನ್ನು ‘ಸಿರಿ’ ಇಟ್ಟುಕೊಂಡಿದೆ. ಎನ್ನುತ್ತಾರೆ ಸಿರಿ ಗ್ರಾಮೋದ್ಯೋಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್’ಸಿರಿ’ ಸಂಸ್ಥೆಯಲ್ಲಿ ಖಾದಿಯ ಹಲವಾರು ಬಗೆಯ ಉತ್ಪನ್ನಗಳಿವೆ. ಸ್ವದೇಶ ಮತ್ತು ಜಾಗೃತಿ ಬ್ರಾಂಡ್ನಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಸಾಂಪ್ರದಾಯಿಕ ಉಡುಗೆ, ಕುರ್ತಾ, ಕುರ್ತಿ, ಷರ್ಟ್, ಫಾರ್ಮಲ್, ಟ್ರೆಂಡಿ ಆಫೀಸ್ ವಿಯರ್ಗಳು ಸಿರಿಯಲ್ಲಿ ಲಭ್ಯ ಇವೆ.
ಸಿದ್ಧ ಉಡುಪುಗಳು : ಸಿದ್ಧ ಉಡುಪುಗಳು ‘ಸಿರಿ’ ಸಂಸ್ಥೆಯ ಪ್ರಮುಖ ಉತ್ಪನ್ನಗಳು. ದಕ್ಷಿಣ ಕನ್ನಡ, ಹಾವೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ 10 ಉತ್ಪಾದನಾ ಘಟಕಗಳಲ್ಲಿ ೪೦೦ ಮಂದಿ ಮಹಿಳೆಯರು ಈ ಸಿದ್ಧ ಉಡುಪು ತಯಾರಿಕಾ ಕಾರ್ಯದಲ್ಲಿ ತೊಡಗಿದ್ದಾರೆ. ಫಾರ್ಮಲ್ ಷರ್ಟ್, ಕ್ಯಾಷುವಲ್ ಷರ್ಟ್, ಜುಬ್ಬಾ, ಮಹಿಳೆಯರು ಮತ್ತು ಮಕ್ಕಳ ಉಡುಪುಗಳನ್ನು ತಯಾರಿಸಿ ‘ಸಿರಿ’ ಬ್ರಾಂಡ್ನಲ್ಲಿ ಮಾರುಕಟ್ಟೆ ಮಾಡಲಾಗುತ್ತಿದೆ.
ಇದಲ್ಲದೆ ‘ಸಿರಿ’ ಸಂಸ್ಥೆ ಆಹಾರ ಉತ್ಪನ್ನಗಳನ್ನು, ಉಪ್ಪಿನಕಾಯಿ, ಮಕ್ಕಳ ಆಹಾರ, ಕುರುಕು ತಿಂಡಿ, ಜ್ಯೂಸ್ ಮೊದಲಾದವುಗಳನ್ನೂ ತಯಾರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧವಾದಂತಹ ಪರಿಶುದ್ಧ ಜೇನು, ತೆಂಗಿನ ಎಣ್ಣೆ, ಹಲವಾರು ಸುಗಂಧಭರಿತ ಅಗರಬತ್ತಿ, ಲ್ಯಾಪ್ಟಾಪ್ ಬ್ಯಾಗ್, ಶಾಲಾ ಬ್ಯಾಗ್ಗಳು ಮತ್ತು ಅಡಿಕೆ ಹಾಳೆ ತಟ್ಟೆಗಳನ್ನು ಸಹ ತಯಾರಿಸಲಾಗುತ್ತಿದೆ.
‘ಸಿರಿ’ ಗ್ರಾಮೀಣ ಮಹಿಳಾ ಸಬಲೀಕರಣಕ್ಕಾಗಿ ಆರಂಭವಾದ ಒಂದು ಯೋಜನೆ. ಇದೊಂದು ಲಾಭರಹಿತ ಕಂಪೆನಿಯಾಗಿದ್ದು, ಭಾರತೀಯ ಕಂಪೆನಿ ಕಾಯ್ದೆಯಂತೆ ನೋಂದಾಯಿತಗೊಂಡಿದೆ. ಕರಾವಳಿ ಕರ್ನಾಟಕದ 2 ಸಾವಿರ ಸ್ವಸಹಾಯ ಗುಂಪುಗಳ ಉತ್ಪಾದನಾ ಕಂಪೆನಿಯೇ ‘ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ’ ಸಂಸ್ಥೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಈ ಕಂಪೆನಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಇಂದಿಗೂ ಇದರ ಪೋಷಕರಾಗಿ ಮುಂದುವರಿದಿದ್ದಾರೆ. ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ ಅವರ ಸಮರ್ಥ ಮಾರ್ಗದರ್ಶನದಲ್ಲಿ ‘ಸಿರಿ’ ಸಂಸ್ಥೆ ತನ್ನ ಗುರಿ ಸಾಧನೆಯತ್ತ ಮುನ್ನಡೆಯುತ್ತಿದೆ.
ಇಂದು ಕಂಪೆನಿಯು ರಾಜ್ಯದ ಗ್ರಾಮೀಣ ಮತ್ತು ಅತ್ಯಂತ ಹಿಂದುಳಿದ 295 ಹಳ್ಳಿಗಳಲ್ಲಿ ಉತ್ಪಾದನಾ ಕೇಂದ್ರಗಳನ್ನು ಹೊಂದಿದೆ. ಈ ಕಂಪೆನಿ ಗ್ರಾಮೀಣ ಪ್ರದೇಶದ 5 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ನೇರ ಉದ್ಯೋಗ ಒದಗಿಸಿದೆ. www.homemadeonline.in ಎಂಬುದು ಮಹಿಳೆಯರು ಮತ್ತು ಸಣ್ಣ ಉದ್ದಿಮೆದಾರಿಗೆ ಬೆಂಬಲವಾಗಿ ನಿಂತಿರುವ ಹಾಗೂ ಮಾರುಕಟ್ಟೆ ವ್ಯವಸ್ಥೆ ಕರುಣಿಸುವ ಒಂದು ಒಂದು ಸಾಮಾಜಿಕ ಉದ್ಯಮ ವ್ಯವಸ್ಥೆ. ಮನೆಯಲ್ಲೇ ತಯಾರಿಸಿದ ಆಹಾರ ಉತ್ಪನ್ನಗಳು, ಪ್ರಾದೇಶಿಕ ಆಹಾರಗಳು, ಗಿಡಮೂಲಿಕೆ, ನೈಸರ್ಗಿಕ/ ಆಯುರ್ವೇದ / ಸಾವಯವ ಉತ್ಪನ್ನಗಳು, ಕರಕುಶಲ ವಸ್ತುಗಳನ್ನು ಮಾರುಕಟ್ಟೆ ಮಾಡಲು ಇರುವ ವೆಬ್ಸೈಟ್ ಇದು.
www.homemadeonline.in ಜನರು ಮರೆತಿರುವ ಆಹಾರಗಳನ್ನು ನಮಗೆ ಮತ್ತೆ ಪರಿಚಯಿಸಲು ಮತ್ತು ‘ಬೇರಿನತ್ತ ತೆರಳಲು’ ಇರುವ ಒಂದು ವೆಬ್ಸೈಟ್. ನಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಇದೊಂದು ಉತ್ತಮ ತಾಣ. ಈ ಎಲ್ಲ ಉತ್ಪನ್ನಗಳನ್ನು ನಿಮ್ಮ ಮನೆಯಿಂದಲೇ ತರಿಸಿಕೊಳ್ಳಲು ಕೋರಿಕೆ ಸಲ್ಲಿಸಬಹುದು. ಇವುಗಳನ್ನು ನಿಮ್ಮ ಮನೆ ಬಾಗಿಲಿಗೇ ಪೂರೈಸುವ ವ್ಯವಸ್ಥೆ ನಡೆಯುತ್ತದೆ. ಬೇಡಿಕೆ ಹೆಚ್ಚಿದಂತೆ ಪೂರೈಸುವ ವ್ಯವಸ್ಥೆಯೂ ಸುಗಮಗೊಳ್ಳಬೇಕಿದ್ದು, ಸಾಂಪ್ರದಾಯಿಕ, ಗುಣಮಟ್ಟದ ಆಹಾರವನ್ನು ತಯಾರಿಸಿಕೊಡುವ ಮಹಿಳೆಯರು ಮತ್ತು ಅತಿಸಣ್ಣ ಆಹಾರ ತಯಾರಿಕಾ ಘಟಕಗಳಿಂದ ತಯಾರಾದ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ಕೆಲಸವನ್ನೂ www.homemadeonline.in, ಇದು ಮಾಡುತ್ತಿದೆ. ನಮ್ಮಲ್ಲಿ ಇದೀಗ 300 ನೋಂದಾಯಿತ ವ್ಯಾಪಾರಿಗಳಿಂದ ತರಿಸಿಕೊಳ್ಳುತ್ತಿರುವ 2 ಸಾವಿರಕ್ಕೂ ಅಧಿಕ ವಿಶಿಷ್ಟ ಆಹಾರ ಉತ್ಪನ್ನಗಳು ಇವೆ
ಸಮುದಾಯಕ್ಕೆ ಬೆಂಬಲ, ಆರೋಗ್ಯಕ್ಕೆಉತ್ತೇಜನ, ಸ್ಥಳೀಯವಾಗಿ ಖರೀದಿಸಿ ಎಂಬುದೇ ಧ್ಯೇಯ ಹೋಮ್ ಮೇಡ್ ಆನ್ಲೈನ್ ಧ್ಯೇಯವಾಗಿದ್ದು, www.homemadeonline.in ಮಹಿಳೆಯರು ತಮ್ಮ ದಿನಸಿಗಳನ್ನು ಉಚಿತವಾಗಿ ಪಡೆಯುವಂತಹ ರೆಫರಲ್ ಬೆನೆಫಿಟ್ ಸ್ಕೀಂ ಅನ್ನೂ ಆರಂಭಿಸಿದೆ. ಆಹಾರ ಉತ್ಪನ್ನಗಳನ್ನು ತಯಾರಿಸುವ ಮಹಿಳೆಯರು ಮತ್ತು ಕಿರು ಉದ್ಯಮಗಳ ಮರುಕಟ್ಟೆ ಕಾರ್ಯಕ್ಕೆ ಉತ್ತೇಜನ ನೀಡುತ್ತಲೇ ಈ ವೆಬ್ಸೈಟ್ ಮೂಲಕ ‘ಸಖಿ-ಇತರರಿಗೆ ನೆರವಾಗುತ್ತಲೇ ಗಳಿಸು’ (ಸಖಿ-ಅರ್ನ್ ಹೆಲ್ಪಿಂಗ್ ಅದರ್ಸ್) ಎಂಬ ರೆಫರಲ್ ಸ್ಕೀಂ ಅನ್ನು ಆರಂಭಿಸಿದೆ. ಇನ್ನಷ್ಟುಮಾಹಿತಿಗೆ ಮತ್ತು ಈ ಯೋಜನೆಯ ಪ್ರಯೋಜನ ಪಡೆಯಲು ಇಂದೇ ಸಖಿಯಾಗಿ www.homemadeonline.in ಇಲ್ಲಿ ನೋಂದಾಯಿಸಿಕೊಳ್ಳಬಹುದು.
ನಮ್ಮ ನಡುವೆ ಸಾಕಷ್ಟು ಪ್ರತಿಭಾವಂತ ಉದ್ಯಮಿಗಳು, ಉತ್ಪಾದಕರು ಇದ್ದಾರೆ ಅವರಿಗೆ ಜನಸಮುದಾಯವನ್ನು ಹೇಗೆ ತಲುಪಬೇಕು ಎಂಬುದು ಗೊತ್ತಿಲ್ಲ. ನಮ್ಮ ಈ ಪ್ರಯತ್ನದಿಂದ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ವಾಣಿಜ್ಯೇತರ ಮತ್ತು ತಮ್ಮ ಮನಸ್ಸಿಗೆ ಇಷ್ಟವಾದ ಉತ್ಪನ್ನಗಳಿಗಾಗಿ ಹುಡುಕಾಟ ನಡೆಸುತ್ತಿರುವ ಜನರ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಾವಂತ ಉತ್ಪಾದಕರು, ಉದ್ಯಮಿಗಳಿಗೆ ಸಾಧ್ಯವಾಗಲಿದೆ ಎಂದು ಹೋಮ್ಮೇಡ್ ಆನ್ಲೈನ್ ಡಾಟ್ಇನ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಅಜಂತಾ ಚಂದನ್ ಹೇಳಿದ್ದಾರೆ.
‘ಸಿರಿ’ ಮತ್ತು www.homemadeonline.in ಸಂಸ್ಥೆಗಳು ಈ ಉತ್ಪನ್ನಗಳನ್ನು ನೇರವಾಗಿ ನೇಕಾರರಿಂದ ಮತ್ತು ಉತ್ಪಾದಕರಿಂದ ತರಿಸಿಕೊಂಡು ಸಂಚಾರಿ ವಾಹನ ‘ಸಖಿ ಉತ್ಸವ್’ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರಿಗೆ ಈ ಉತ್ಪನ್ನಗಳ ಸ್ಪರ್ಶ ಮತ್ತು ವಾಸನೆಯ ಅನುಭವವೂ ಆಗಿ ಅದನ್ನು ಖರೀದಿಸಬಹುದು ಮತ್ತು ಆನ್ಲೈನ್ನಲ್ಲಿ ಉತ್ಪನ್ನಗಳಿಗಾಗಿ ಆದೇಶ ನೀಡಬಹುದು. ಆ ಮೂಲಕ ಉಚಿತವಾಗಿ ಮನೆ ಬಾಗಿಲಿಗೇ ಬರುವ ಉತ್ಪನ್ನಗಳನ್ನು ತಮ್ಮದಾಗಿಸಿಕೊಳ್ಳಬಹುದು. ‘ಸಖಿ ಉತ್ಸವ್’ ಬೆಂಗಳೂರಿನ ಪ್ರಮುಖ ವಸತಿ ಸಮುಚ್ಚಯಗಳು ಮತ್ತು ಸಾಫ್ಟ್ವೇರ್ ಪಾರ್ಕ್ಗಳನ್ನು ನಿಂತಿರುತ್ತವೆ. ತಮ್ಮ ವ್ಯಾಪ್ತಿಯಲ್ಲಿ, ತಮ್ಮ ಕಚೇರಿ ಸಂಕೀರ್ಣಗಳ ಬಳಿಯಲ್ಲಿ ಇಂತಹ ಮಾರಾಟ ವಾಹನಗಳು ಇರಬೇಕು ಎಂದು ಬಯಸುವವರೂwww.homemadeonline.inಇಲ್ಲಿಗೆ ಬರೆಯಬಹುದು ಅಥವಾ 9972587965 ಸಂಪರ್ಕಿಸಬಹುದು ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ .
ಈ ಸುದ್ದಿಗೋಷ್ಟಿಯಲ್ಲಿ ಶ್ರೀ ಡಿ. ಸುರೇಂದ್ರ ಕುಮಾರ್, ಶ್ರೀಮತಿ ಶ್ರದ್ಧಾ ಅಮಿತ್, ಶ್ರೀ ಡಿ. ಶ್ರೇಯಸ್ ಕುಮಾರ್ಕನ್ನಡ ಚಲನಚಿತ್ರ ನಟಿ ಕು. ನೇಹಾ ಸಕ್ಸೇನಾ, ಶ್ರೀಮತಿ ಮನೋರಮಾ ಭಟ್, ನಿರ್ದೇಶಕರು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀಮತಿ ಅಜಂತಾ ಚಂದನ್, ಸಂಸ್ಥಾಪಕರು, ಹೋಂ ಮೇಡ್ ಆನ್ಲೈನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.