×
Home About Us Advertise With s Contact Us

ನವಾಝ್‌ಗೆ ಪಾಕಿಸ್ಥಾನ ದಿನದ ಶುಭಾಶಯ ಹೇಳಿದ ಮೋದಿ

pak dayನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪಾಕಿಸ್ಥಾನ ಪ್ರಧಾನಿಗೆ ಪತ್ರ ಬರೆದು ಪಾಕಿಸ್ಥಾನ ದಿನಾಚರಣೆ ಶುಭಕಾಮನೆಗಳನ್ನು ತಿಳಿಸಿದೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

ಭಯ ಮುಕ್ತ ವಾತಾವರಣದಲ್ಲಿ ಮಾತುಕತೆಯ ಮೂಲಕ ಪಾಕಿಸ್ಥಾನದೊಂದಿಗಿನ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1940 ಲಾಹೋರ್ ರೆಸಲ್ಯೂಷನ್ ಮತ್ತು  1956, ಮಾ.23ರಂದು ಪಾಕಿಸ್ಥಾನ್ ಇಸ್ಲಾಮಿಕ್ ರಿಪಬ್ಲಿಕ್ ದೇಶವಾಗಿ ಸಂವಿಧಾನವನ್ನು ಸ್ವೀಕರಿಸಿದ ಅಂಗವಾಗಿ ಇಂದು ಪಾಕಿಸ್ಥಾನದಲ್ಲಿ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.

 

Recent News

Back To Top
error: Content is protected !!