ಸುಬ್ರಹ್ಮಣ್ಯ : ಪ್ರತೀ ವ್ಯಕ್ತಿಯಲ್ಲೂ ಕೌಶಲ್ಯ ಇರುತ್ತದೆ.ಇದನ್ನು ಬೆಳೆಸುವ ಕೆಲಸ ನಡೆಯಬೇಕಾಗಿದೆ.ಸಮಾಜದ ಪ್ರೋತ್ಸಾಹವೂ ಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯ ಮೇಲ್ವಿಚಾರಕ ಶ್ರೀನಿವಾಸ್ ಹೇಳಿದರು.
ಅವರು ಗ್ರಾಮಾಭಿವೃಧ್ಧಿ ಯೋಜನೆಯ ಗುತ್ತಿಗಾರು ವಲಯದ ದುರ್ಗಾಪರಮೇಶ್ವರಿ ಜ್ಞಾನವಿಕಾಸಕೇಂದ್ರದ ಮೆಟ್ಟಿನಡ್ಕ-ನಾಲ್ಕೂರು ಸದಸ್ಯರಿಗೆ ನಡೆದ ಕೌಶಲ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಅನೇಕರಲ್ಲಿ ವಿವಿಧ ರೀತಿಯ ವಿಶಿಷ್ಟ ಕಲೆಗಳು, ಅಭಿರುಚಿಗಳು,ಕಲಾತ್ಮಕತೆ ಇರುತ್ತದೆ.ಇದು ಹೊರಜಗತ್ತಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಸದಸ್ಯರಿಗೆ ತಟ್ಟಿ ಹೆಣೆಯುವುದು, ಬುಟ್ಟಿ ಹೆಣೆಯುವುದು,ಹೂಗುಚ್ಚ ತಯಾರಿ, ರಂಗೋಲಿ ಸ್ಫರ್ಧೆ,ಶೋಬಾನೆ ಹಾಡು,ನೇಜಿಕತೆ ಮೊದಲಾದ ಸ್ಫರ್ಧೆಗಳನ್ನು ಆಯೋಜಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷೆ ಅನಿತಾ ಮೆಟ್ಟಿನಡ್ಕ,ಉಪಾಧ್ಯಕ್ಷೆ ಭಾರತಿ,ನಾಲ್ಕೂರು ಗ್ರಾಮದ ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.