ಕಲ್ಲಡ್ಕ: ಕೇಂದ್ರ ಸರ್ಕಾರ ಅಂಗೀಕರಿಸಿದ ಸಂವಿಧಾನ ದಿವಸವನ್ನು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ 26ರಂದು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸಿಲಾಯಿತು.
ಕಾರ್ಯಕ್ರಮವನ್ನು ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಸಂತಮಾಧವ, ಮುಖ್ಯೋಪಾಧ್ಯಾಯರಾದ ಶ್ರೀ ರಮೇಶ ಇವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಪ್ರಾರಂಬಿಸಲಾಯಿತು.
ವಿದ್ಯಾರ್ಥಿಗಳು ಸಮಾನತೆಯನ್ನು ಸಾರುವ ದೇಶಭಕ್ತಿಗೀತೆಯನ್ನು ಹಾಡಿ, ಕು. ಹರ್ಷಿತಾ ಇವಳು ನಮ್ಮ ಸಂವಿಧಾನದ ಉದ್ದೇಶ ಮತ್ತು ನಮ್ಮ ಹಕ್ಕು ಕರ್ತವ್ಯಗಳ ಪೂರ್ವಪೀಠಿಕೆಯನ್ನು ವಿವರಿಸಿ ಇಂತಹ ಸಂವಿಧಾನವನ್ನು ನಾವೆಲ್ಲರೂ ಗೌರವಿಸಿ ಅದರ ಸದಾಶಯದಂತೆ ನಡೆದುಕೊಂಡು ಉತ್ತಮ ಪ್ರಜೆಗಳಾಗಿ ರೂಪಿತಗೊಳ್ಳಬೇಕೆಂದು ತಿಳಿಸಿದರು.
ವಸಂತ ಮಾಧವ ಶ್ರೀಮಾನ್ರವರು ನಮ್ಮ ಸಂವಿಧಾನ ಬರುವುದಕ್ಕಿಂತ ಮೊದಲೇ ಈ ರಾಷ್ಟ್ರದಲ್ಲಿ ರಾಜಧರ್ಮ, ಪ್ರಜಾಧರ್ಮ ಆಧಾರದಲ್ಲಿ ಇತ್ತು. ಅಂಬೇಡ್ಕರ್ರ ಆಶಯದಂತೆ ಸಂಸ್ಕೃತ ಭಾಷೆಯನ್ನು ಎಲ್ಲರಿಗೂ ಸಿಗುವಂತೆ ಮಾಡಬೇಕು. ಈ ದೇಶದ ಬಗ್ಗೆ ಅಗೌರವದ ಮಾತುಗಳನ್ನು ಆಡದೇ, ಈ ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಸಹಕಾರಿಗಳಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಲ್ಲಾ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ್ ಸಂಘದ ವತಿಯಿಂದ ಈ ಕಾರ್ಯಮವನ್ನು ಆಯೋಜಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.