News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ರೇಟಿಂಗ್ಸ್ ಸಕಾರಾತ್ಮಕ ಮಟ್ಟಕ್ಕೆ

moodyನವದೆಹಲಿ: ಭಾರತದ ಸಾಲ ಪಡೆಯುವ ಸಾಮರ್ಥ್ಯದ ರೇಟಿಂಗ್‌ನ್ನು ಜಾಗತಿಕ ಮಾನದಂಡ ಸಂಸ್ಥೆ ’ಮೂಡೀಸ್ ಇನ್‌ವೆಸ್ಟರ್‍ಸ್ ಸರ್ವಿಸ್’ ಗುರುವಾರ ಸ್ಥಿರ(ಸ್ಟೇಬಲ್)ದಿಂದ ಸಕಾರಾತ್ಮಕ (ಪಾಸಿಟಿವ್) ಮಟ್ಟಕ್ಕೆ ಬದಲಾಯಿಸಿದೆ.

ಭಾರತ ಆರ್ಥಿಕ ಬಲವರ್ಧನೆಗೆ ಕ್ರಮಕೈಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ‘ಮೂಡೀಸ್’, ಮುಂದಿನ ರೇಟಿಂಗ್ಸ್ ಬಡ್ತಿ  12-18 ತಿಂಗಳಲ್ಲಿ ನಡೆಯಲಿ ಎಂದು ಹೇಳಿದೆ.

‘ಸರ್ಕಾರವು ದೇಶದ ಆರ್ಥಿಕ ಬಲವರ್ಧನೆಗೆ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾಲದ ಮುನ್ನೋಟವನ್ನು ‘ಸ್ಥಿರ’ದಿಂದ ‘ಸಕಾರಾತ್ಮಕ’ ರೇಟಿಂಗ್ಗೆ ಬದಲಾಯಿಸಲು ಮೂಡಿ ನಿರ್ಧರಿಸಿದೆ’ ಎಂದು ಅಮೆರಿಕ ಮೂಲದ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ‘ಮೂಡೀಸ್’, ಭಾರತಕ್ಕೆ ‘ಬಿಎಎ3’ ರೇಟಿಂಗ್ ನೀಡಿತ್ತು. ಇದು ಹೂಡಿಕೆ ಮಟ್ಟಕ್ಕಿಂತಲೂ ಕಡಿಮೆ. ಮುಂದಿನ ೧೨-೧೮ ತಿಂಗಳಲ್ಲಿ ರೇಟಿಂಗ್ ಸುಧಾರಿಸುವ ಸಾಮರ್ಥ್ಯ ಭಾರತ ಸರ್ಕಾರಕ್ಕಿದೆ ಎಂದೂ ಅದು ಅಭಿಪ್ರಾಯಪಟ್ಟಿದೆ.

Tags: ,

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top