ಬದಿಯಡ್ಕ : ರಾಜ್ಯದಲ್ಲಿ ನಡೆಯುತ್ತಿರುಬ ಪಂಚಾಯತು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಬಿಜೆಪಿಯ ಬೆಳವಣಿಗೆಗೆ ಪ್ರತ್ಯಕ್ಷ ಉದಾಹರಣೆ ಎಂದು ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ವಿ.ಮುರಳೀಧರನ್ ನುಡಿದರು.
ಅವರು ಬದಿಯಡ್ಕ ಗುರುಸದನ ಸಭಾಂಗಣದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಹಿಂದೆ ಕಾಸರಗೋಡು ಹಾಗೂ ತಿರುವನಂತಪುರದ ಕೆಲೆವೆಡೆಗಳಲ್ಲಿ ಮಾತ್ರ ತ್ರಿಕೋನ ಸ್ಪರ್ದೆ ಏರ್ಪಟ್ಟಿತ್ತು. ಉಳಿದೆಡೆ ಬಿಜೆಪಿ ಬಲಿಷ್ಠವಾಗಿರಲಿಲ್ಲ. ಆದರೆ ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹತ್ತು ಪಾಲು ಹೆಚ್ಚಿಸಿದೆ.ಇದರಿಂದಾಗಿಯೇ ಮುಂದಿನ ವಾರ ನಡೆಯುವ ಪಂಚಾಯತು ಚುನಾವಣೆಯಲ್ಲಿ ತಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಚುನಾವಣೆಯಲ್ಲಿ ಪಕ್ಷದ 2500ಕ್ಕಿಂತಲೂ ಹೆಚ್ಚು ಸದಸ್ಯರು ಆಯ್ಕೆಯಾಗಲಿದ್ದು 25ರಷ್ಟು ಪಂಚಾಯತುಗಳ ಆಡಳಿತವನ್ನು ಹಿಡಿಯಲಿದೆ. ರಾಜ್ಯದ ಎಡ ಬಲ ರಂಗಗಳ ದುರಾಡಳಿತದಿಂದ ಬೇಸೆತ್ತ ಜನರು ಬಿಜೆಪಿಯತ್ತ ಬರುತ್ತಿದ್ದಾರೆ. ಇಂದು ಬಿಜೆಪಿಯ ಜತೆ ಸೇರಲು ವಿವಿಧ ಸಂಘಟನೆಗಳು ಮುಂದೆ ಬರುತ್ತಿವೆ ಎಂದವರು ಹೇಳಿದರು.
ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತು ಅಭ್ಯರ್ಥಿಗಳಾದ ನ್ಯಾಯವಾದಿ ಕೆ ಶ್ರೀಕಾಂತ್, ಪ್ರಮಿಳಾ ಸಿ.ನಾಯಕ್, ಸ್ನೇಹಲತಾ, ಅಲ್ಲದೆ ಬದಿಯಡ್ಕ, ಕುಂಬ್ಡಾಜೆ, ಬೆಳ್ಳೂರು, ಕಾರಡ್ಕ, ಚೆಂಗಳ ಪಂಚಾತುಗಳ ಬ್ಳಾಕ್ ಅಭ್ಯರ್ಥಿಗಳು, ಪಂಚಾಯತು ಅಭ್ಯರ್ಥಿಗಳು. ವಿವಿಧ ಪಂಚಾಯತು, ಮಂಡಲ, ಜಿಲ್ಲಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು. ಹರೀಶ್ ನಾರಂಪಡಿ ಸ್ವಾಗತಿಸಿ ರಾಜೇಶ್ ಶೆಟ್ಟಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.