
“آپ کو بذریعۂ ہذا اس عدالت کے روبرو مقررہ تاریخ کو حاضر ہونے کا حکم دیا جاتا ہے۔” ಇದೇನಿದು ಉರ್ದು ವಾಕ್ಯ ಎಂದು ಆಶ್ಚರ್ಯಪಡುತ್ತಿದ್ದೀರಾ? ಹತ್ತೊಂಬತ್ತನೇ ಶತಮಾನದಲ್ಲಿ ಭಾರತೀಯರಿಗೆ ಯಾವುದೇ ಮೊಕದ್ದಮೆಗೆ ಸಂಬಂಧಿಸಿದಂತೆ ಜಾರಿಗೊಳಿಸಲಾಗುತ್ತಿದ್ದ ಸಮನ್ಸ್ (ನೋಟಿಸ್) ಈ ರೀತಿಯಾಗಿರುತ್ತಿತ್ತು. ಅಂದರೆ ಉರ್ದು ಭಾಷೆಯಲ್ಲಿ ಇರುತ್ತಿತ್ತು.
ಆ ಕಾಲದಲ್ಲಿ ಇದೇ ಭಾಷೆಯನ್ನು ನ್ಯಾಯಾಲಯಗಳ ಆದೇಶಗಳಲ್ಲಿ ಬಳಸಲಾಗುತ್ತಿತ್ತು. ಅಂದರೆ ಸಾಮಾನ್ಯ ಗ್ರಾಮೀಣ ವ್ಯಕ್ತಿಗೆ ಅಥವಾ ಉರ್ದೂ ಬರೆಯಲು-ಓದಲು ಬಾರದ ವ್ಯಕ್ತಿಗೆ ಈ ಸಂದೇಶದ ಅರ್ಥವೇ ತಿಳಿಯುತ್ತಿರಲಿಲ್ಲ.
ನ್ಯಾಯಾಲಯವು ತನಗೆ ಯಾಕೆ ಸಮನ್ಸ್ ನೀಡಿದೆ ಎಂದು ತಿಳಿಯಲು ಒಬ್ಬ ವ್ಯಕ್ತಿ ಮೌಲ್ವಿ ಅಥವಾ ಉರ್ದು ತಿಳಿದದವನ ಬಳಿ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಅವರು ಹಣ ತೆಗೆದುಕೊಂಡು ಅರ್ಥ ಹೇಳುತ್ತಿದ್ದರು. “ನಿಮಗೆ ಈ ಮೂಲಕ ಸಮನ್ಸ್ ನೀಡಲಾಗಿದೆ, ಕೆಳಗಿನ ದಿನಾಂಕದಂದು ಈ ನ್ಯಾಯಾಲಯದ ಸಮಕ್ಷಮದಲ್ಲಿ ಹಾಜರಾಗಿ” ಅಥವಾ ಇಂಗ್ಲಿಷ್ನಲ್ಲಿ – “You are hereby summoned to appear before this Court on the date specified below.” ಎಂಬುದು ಆ ವಾಕ್ಯದ ಅರ್ಥವಾಗಿದೆ.
ಈ ರೀತಿ ನ್ಯಾಯಾಲಯ ಮತ್ತು ನಾಗರಿಕನ ನಡುವೆ ಭಾಷೆಯ ಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ನ್ಯಾಯವು ಸಾಮಾನ್ಯ ಮನುಷ್ಯನಿಗೆ ದುಬಾರಿ ವ್ಯವಹಾರವಾಗಿ ಬದಲಾಯಿತು. ಆದರೆ ಇದು ಯಾಕೆ ಸಂಭವಿಸಿತು? ಮತ್ತು ಇಂದು ನಮಗೆ ನ್ಯಾಯಾಲಯದ ಸಮನ್ಸ್ಗಳು ಹಿಂದಿಯಲ್ಲಿ ಯಾಕೆ ಸಿಗುತ್ತವೆ?
ವಾಸ್ತವವಾಗಿ, ಬ್ರಿಟಿಷ್ ಆಳ್ವಿಕೆಯಲ್ಲಿ ಭಾಷೆಯನ್ನು “ವಿಭಜಿಸು ಮತ್ತು ಆಳು” (Divide and Rule) ನೀತಿಯ ಒಂದು ಉಪಕರಣವನ್ನಾಗಿ ಬಳಸಲಾಯಿತು. ನಮ್ಮ ಪೂರ್ವಜರಲ್ಲಿ ಹಲವರು ಈ ಅನ್ಯಾಯದ ವಿರುದ್ಧ ಹೋರಾಡಿದರು, ಅವರಲ್ಲಿ ಒಬ್ಬರು ಭರತೇಂದು ಹರಿಶ್ಚಂದ್ರ.
ಆಂಗ್ಲರ ಆಳ್ವಿಕೆಯಲ್ಲಿ ಉರ್ದು ಮೆರೆಯುತ್ತಿತ್ತು: ಆಡಳಿತವು ಭಾಷೆಯನ್ನು ನಿರ್ಧರಿಸುತ್ತಿತ್ತು
ಇಂದು ಹಿಂದಿ ಎಲ್ಲೆಡೆಯೂ ಲಭ್ಯವಾಗಿದೆ– ರಸ್ತೆಯ ಬೋರ್ಡ್ಗಳಲ್ಲಿ, ಶಾಲೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲೂ ಸಹ. ನಾವು ಪ್ರಶ್ನೆ ಮಾಡದೆ ಇದನ್ನು ಸಹಜವೆಂದು ಒಪ್ಪಿಕೊಂಡಿದ್ದೇವೆ. ಆದರೆ 1830ರ ದಶಕದಲ್ಲಿ ಸ್ಥಿತಿ ಸಂಪೂರ್ಣ ವಿರುದ್ಧವಾಗಿತ್ತು. ಆಗ ಹಿಂದಿಗೆ ಯಾವುದೇ ಸರ್ಕಾರಿ ಮಾನ್ಯತೆ ಇರಲಿಲ್ಲ.
ಶತಮಾನಗಳ ಕಾಲ ಮೊಘಲ್ ಆಳ್ವಿಕೆಯಲ್ಲಿ ಪಾರ್ಸಿ ಭಾಷೆಯು ನ್ಯಾಯಾಲಯಗಳು ಮತ್ತು ಆಡಳಿತದ ಮುಖ್ಯ ಭಾಷೆಯಾಗಿತ್ತು. ನಂತರ ಆಂಗ್ಲರ ಆಳ್ವಿಕೆಯಲ್ಲಿ, ಅವರು ಪಾರ್ಸಿಯನ್ನು ತೆಗೆದುಹಾಕಿ ಉರ್ದುವನ್ನು ಹೇರಿದರು.
1837ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಉತ್ತರ ಭಾರತದ ನ್ಯಾಯಾಲಯಗಳು ಮತ್ತು ಆಡಳಿತದಲ್ಲಿ ಪಾರ್ಸಿಯ ಬದಲು ಉರ್ದುವನ್ನು ಅಳವಡಿಸಿತು. ಉರ್ದು ಪಾರ್ಸಿ-ಅರಬಿ ಲಿಪಿಯಲ್ಲಿ ಬರೆಯಲ್ಪಡುತ್ತಿತ್ತು. ಆದಾಗಲೇ ಕೆಲವು ಮುಂಶಿಗಳು ಮತ್ತು ಕ್ಲಾರ್ಕ್ಗಳ ಮೂಲಕ ಬಳಕೆಯಲ್ಲಿತ್ತು. ಇದರಿಂದ ಆಡಳಿತದ ನಿರಂತರತೆ ಉಳಿಯುತ್ತಿತ್ತು ಮತ್ತು ಆಂಗ್ಲರಿಗೂ ಪ್ರಯೋಜನವಾಗುತ್ತಿತ್ತು. ಆದರೆ ಸಾಮಾನ್ಯ ಜನತೆಯು ಈ ಲಿಪಿಯನ್ನು ಕಲಿತಿರಲಿಲ್ಲ, ಆದ್ದರಿಂದ ಅವರು ಮುಂಶಿಗಳ ಮೇಲೆ ಅವಲಂಬಿತರಾದರು – ಅವರು ಅನುವಾದಕ್ಕೆ ಹಣ ವಸೂಲಿ ಮಾಡುತ್ತಿದ್ದರು.
ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿ – ಬಹುಸಂಖ್ಯಾತ ಜನರ ಮಾತಿನ ಭಾಷೆಯಾಗಿದ್ದರೂ – ಸರ್ಕಾರ, ಶಿಕ್ಷಣ ಮತ್ತು ನ್ಯಾಯದಿಂದ ಹೊರಗಿಡಲ್ಪಟ್ಟಿತು. ಭಾಷೆಯು ಅಭಿವ್ಯಕ್ತಿಯ ಮಾಧ್ಯಮವಾಗಿ ಉಳಿಯದೆ, ಆಂಗ್ಲರ ಕೈಯಲ್ಲಿನ ನಿಯಂತ್ರಣದ ಉಪಕರಣವಾಯಿತು.
ಭರತೇಂದು ಹರಿಶ್ಚಂದ್ರರ ಭಾಷಾ ಕ್ರಾಂತಿ ಹೇಗೆ ಆರಂಭವಾಯಿತು?
ಈ ಹಿನ್ನೆಲೆಯಲ್ಲಿ 1850ರಲ್ಲಿ ವಾರಣಾಸಿಯಲ್ಲಿ ಜನಿಸಿದ ಭರತೇಂದು ಹರಿಶ್ಚಂದ್ರರು ಧೈರ್ಯಶಾಲಿ ಮತ್ತು ಅಸಾಧಾರಣ ನಿರ್ಧಾರ ತೆಗೆದುಕೊಂಡರು. ಅವರು ಸಂಸ್ಕೃತ, ಉರ್ದು, ಪಾರ್ಸಿ ಮತ್ತು ಇಂಗ್ಲಿಷ್ ನಾಲ್ಕು ಭಾಷೆಗಳಲ್ಲೂ ಪ್ರವೀಣರಾಗಿದ್ದರು. ಅವರು ಆಡಳಿತದ ಭಾಷೆಯೊಂದಿಗೆ ಸೇರಿಕೊಳ್ಳಬಹುದಾಗಿತ್ತು, ಆದರೆ ಅವರು ಜನರಾಡುವ ದೇವನಾಗರಿ ಲಿಪಿಯ ಹಿಂದಿಯನ್ನು ಆಯ್ದುಕೊಂಡರು.ಅವರ ನಂಬಿಕೆ “ನಿಜ ಭಾಷಾ ಉನ್ನತಿ ಅಹೈ, ಸಬ್ ಉನ್ನತಿ ಕೋ ಮೂಲ್” ಎನ್ನುವ ಅವರ ಸಾಲುಗಳಲ್ಲಿ ಪ್ರತಿಫಲಿಸುತ್ತದೆ, ಅದು ನಂತರ ಘೋಷಣೆಯಾಯಿತು –
ಅವರು ಹಿಂದಿಯಲ್ಲಿ ನಾಟಕಗಳನ್ನು ಬರೆದರು, ಪತ್ರಿಕೆಗಳನ್ನು ಹೊರಡಿಸಿದರು ಮತ್ತು ಜನಜಾಗೃತಿ ಮೂಡಿಸಿದರು. ಅವರ ಪ್ರಸಿದ್ಧ ರಚನೆಗಳಾದ ಅಂಧೇರ ನಗರಿ ಮತ್ತು ಭಾರತ ದುರ್ದಶಾ ಸಮಾಜದ ಭ್ರಷ್ಟಾಚಾರ, ಆರ್ಥಿಕ ಶೋಷಣೆ ಮತ್ತು ಅನ್ಯಾಯದ ಆಡಳಿದ ವಿರುದ್ಧ ತೀಕ್ಷ್ಣ ವ್ಯಂಗ್ಯಗಳಾಗಿವೆ.
ಭರತೇಂದು ಹೇಳುತ್ತಿದ್ದರು –
“ನಮಗೆ ಆ ಶುದ್ಧ, ಸರಳ, ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಭಾಷೆ ಬೇಕು, ಅದು ಬಹುಸಂಖ್ಯಾತ ಜನರಿಗೆ ಪರಿಚಿತ ಲಿಪಿಯಲ್ಲಿ ಬರೆಯಲ್ಪಡಬೇಕು. ವಿಜ್ಞಾನದ ಪುಸ್ತಕಗಳಲ್ಲಿ ತಾಂತ್ರಿಕ ಪದಗಳು ಅಗತ್ಯವಿದ್ದರೆ ಬಳಸಬಹುದು, ಆದರೆ ಸಂಭಾಷಣೆಯಲ್ಲಿ, ಕುಟುಂಬದ ಪುಸ್ತಕಗಳಲ್ಲಿ, ಮಕ್ಕಳ ಪಾಠ್ಯಪುಸ್ತಕಗಳಲ್ಲಿ, ನ್ಯಾಯಾಲಯದ ಕಾಗದಗಳಲ್ಲಿ, ಪತ್ರಿಕೆಗಳಲ್ಲಿ ಮತ್ತು ವ್ಯಾಖ್ಯಾನಗಳಲ್ಲಿ ಆ ಸರಳ ಮತ್ತು ಮಾತಿನ ಭಾಷೆಯೇ ಬೇಕು, ಅದನ್ನು ನಿಜವಾಗಿ ನಮ್ಮ ಮಾತೃಭಾಷೆ ಎಂದು ಕರೆಯಬಹುದು.”
ಹಿಂದಿ ನ್ಯಾಯಾಲಯಕ್ಕೆ ತಲುಪಿದ ದಿನ
ಭರತೇಂದು ಹರಿಶ್ಚಂದ್ರರು ಚೆನ್ನಾಗಿ ಅರಿತಿದ್ದರು – ಸಾಹಿತ್ಯದಿಂದ ಮಾತ್ರ ಭಾಷಾ ಅನ್ಯಾಯವನ್ನು ಮುರಿಯಲಾಗದು. 1882ರಲ್ಲಿ ಅವರು ತಮ್ಮ ಆಂದೋಲನವನ್ನು ಆಡಳಿತ ಮಟ್ಟಕ್ಕೆ ತೆಗೆದುಕೊಂಡು ಹೋದರು, ಹಂಟರ್ ಆಯೋಗ (Hunter Commission) ಮುಂದೆ ಸಾಕ್ಷಿ ನೀಡಿದರು.
ಅಲ್ಲಿ ಅವರು ಉರ್ದುವಿನಲ್ಲಿ ಬರುವ ಸಮನ್ಗಳು ಸಾಮಾನ್ಯ ಜನರಿಗೆ ಏನು ಅರ್ಥ ನೀಡುತ್ತವೆ ಎಂದು ಪ್ರಶ್ನಿಸಿದರು. ನ್ಯಾಯವ್ಯವಸ್ಥೆಯು ಜನರ ಭಾಷೆಯಲ್ಲಿ ಮಾತನಾಡದಿದ್ದರೆ, ಅದು ಸಾಮಾನ್ಯ ಮನುಷ್ಯನನ್ನು ನ್ಯಾಯದಿಂದ ಹೊರಗಿಡುತ್ತದೆ ಎಂದು ಹೇಳಿದರು.
ಆಯೋಗದ ಮುಂದೆ ಅವರು ಪುನರುಚ್ಚರಿಸಿದರು –
“ನಮಗೆ ಆ ಶುದ್ಧ, ಸರಳ, ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಭಾಷೆ ಬೇಕು, ಅದು ಬಹುಸಂಖ್ಯಾತರಿಗೆ ಪರಿಚಿತ ಲಿಪಿಯಲ್ಲಿ ಬರೆಯಲ್ಪಡಬೇಕು.”
ಅವರು ಸ್ಪಷ್ಟವಾಗಿ ಹೇಳಿದರು – ಈ ಭಾಷೆಯನ್ನು ಎಲ್ಲೆಡೆ ಬಳಸಬೇಕು: ಸಂಭಾಷಣೆಯಲ್ಲಿ, ಕುಟುಂಬದ ಶಿಕ್ಷಣದ ಪುಸ್ತಕಗಳಲ್ಲಿ, ಮಕ್ಕಳ ಪಾಠ್ಯಪುಸ್ತಕಗಳಲ್ಲಿ, ನ್ಯಾಯಾಲಯದ ಕಾಗದಗಳಲ್ಲಿ, ಪತ್ರಿಕೆಗಳಲ್ಲಿ ಮತ್ತು ಸಾರ್ವಜನಿಕ ವ್ಯಾಖ್ಯಾನಗಳಲ್ಲಿ. ನಮಗೆ ಆ ಸರಳ ಮತ್ತು ಮಾತಿನ ಭಾಷೆ ಬೇಕು, ಅದನ್ನು ನಿಜವಾದ ಅರ್ಥದಲ್ಲಿ ಮಾತೃಭಾಷೆ ಎಂದು ಕರೆಯಬಹುದು.
ಅವರ ತರ್ಕ ಸರಳವಾಗಿತ್ತು – ಜನತೆಯ ಕ್ಷೇಮಕ್ಕಾಗಿ ನ್ಯಾಯಾಲಯಗಳು, ಆಡಳಿತ ಮತ್ತು ಶಿಕ್ಷಣದಲ್ಲಿ ಜನಭಾಷೆ (ಹಿಂದಿ)ಯ ಬಳಕೆ ಅಗತ್ಯವಾಗಿದೆ.
ಮರಣ ಮತ್ತು ಪರಂಪರೆ
ಜನವರಿ 6, 1885ರಂದು ಕೇವಲ 34 ವರ್ಷ ವಯಸ್ಸಿನಲ್ಲಿ ಭರತೇಂದು ಹರಿಶ್ಚಂದ್ರರ ನಿಧನವಾಯಿತು – ಅವರ ಕನಸು ಸಂಪೂರ್ಣವಾಗಿ ನನಸಾಗುವ ಮೊದಲೇ.
ಅವರು ಇದನ್ನು ನೋಡಲು ಜೀವಂತವಾಗಿರಲಿಲ್ಲ – ಒಂದು ದಿನ ಹಿಂದಿ ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳ ಭಾಷೆಯಾಗುತ್ತದೆ ಎಂದು. ಇಂದು ಭಾರತದ ಒಬ್ಬ ನಾಗರಿಕನಿಗೆ ನ್ಯಾಯಾಲಯದಿಂದ ಬರುವ ಸಮನ್ ಅನ್ಯ ಲಿಪಿಯಲ್ಲಿ ಅಲ್ಲ, ಬದಲಿಗೆ ಆತನ ಮಾತೃಭಾಷೆಯಲ್ಲಿ ಅಥವಾ ಸ್ಥಳಿಯ ಭಾಷೆಯಲ್ಲಿ ಬರುತ್ತದೆ.
ಇದು ಭಾಷಾ ಸ್ವಾತಂತ್ರ್ಯದ ಒಂದು ಮಹತ್ವದ ಇತಿಹಾಸವಾಗಿದೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



