×
Home About Us Advertise With s Contact Us

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಸಂದರ್ಶಕರ ಕೊಠಡಿ ಉದ್ಘಾಟನೆ

ಬಂಟ್ವಾಳ : ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಾಗರಿಕರಿಂದ ಮತ್ತಷ್ಟು ಹೆಚ್ಚಿನ ಸಹಕಾರ ದೊರೆತು ಪೊಲೀಸ್ ಇಲಾಖೆ ಬಗ್ಗೆ ಗೌರವ ಮತ್ತು ಅಭಿಮಾನ ಮೂಡಿ ಬರುತ್ತದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮೃತಪಾಲ್ ಹೇಳಿದ್ದಾರೆ.

20btl-police

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿದ ಸಂದರ್ಶಕರ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೇಖರಪ್ಪ ಎಂ., ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್, ತರಬೇತಿ ಪೊಲೀಸ್ ಅಧೀಕ್ಷಕಿ ಸುಮನಾ ಮತ್ತಿತರರು ಶುಭ ಹಾರೈಸಿದರು.

ಸ್ಥಳೀಯ ಪ್ರಮುಖರಾದ ಬೇಬಿ ಮೈರಾನ್‌ಪಾದೆ, ಜಿ. ಆನಂದ, ಅಬ್ಬಾಸ್ ಅಲಿ, ಜಿನರಾಜ ಆರಿಗ, ಸುಲೈಮಾನ್, ರಮ್ಲಾತ್, ಶಾಹುಲ್ ಹಮೀದ್, ಹಾರೂನ್ ರಶೀದ್, ಬಶೀರ್ ಕರಿಯಂಗಳ ಮತ್ತಿತರರು ಮಾತನಾಡಿದರು. ಇದೇ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಪರಸ್ಪರ ಸಂವಾದ ನಡೆಸಿದರು.

ಬಂಟ್ವಾಳ ಇನ್ಸ್‌ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ಗ್ರಾಮಾಂತರ ಮತ್ತು ನಗರ ಠಾಣಾಧಿಕಾರಿ ರಕ್ಷಿತ್‌ಕುಮಾರ್ ಮತ್ತು ನಂದಕುಮಾರ್ ಮತ್ತಿತರರು ಇದ್ದರು.

 

Recent News

Back To Top
error: Content is protected !!