ಗಯಾ: ಇನ್ನು ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಆರಂಭಗೊಳ್ಳಲಿದೆ. ಈಗಾಗಲೇ ಮತದಾನಕ್ಕಾಗಿ ಮತಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ವಿಶೇಷವೆಂದರೆ ಗಯಾದ 7 ಮತಕೇಂದ್ರಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳೆಯರೇ ಹೊತ್ತುಕೊಳ್ಳಲಿದ್ದಾರೆ.
ಈ ಮತಕೇಂದ್ರದ ಉಸ್ತುವಾರಿಯಿಂದ ಹಿಡಿದು, ಎಲ್ಲಾ ಅಧಿಕಾರಿಗಳು, ವೆಬ್ ಕ್ಯಾಮ್ ಆಪರೇಟರ್ಗಳು ಎಲ್ಲರೂ ಮಹಿಳೆಯರೇ ಆಗಿರಲಿದ್ದಾರೆ. ಕೇಂದ್ರ ಪಡೆಯ ಮಹಿಳಾ ಸಿಬ್ಬಂದಿಗಳೇ ಇಲ್ಲಿ ಭದ್ರತೆಯನ್ನೂ ಒದಗಿಸಲಿದ್ದಾರೆ.
ಅ.16ರ ಚುನಾವಣೆಗೆ ಗಯಾದ 7 ಮತಕೇಂದ್ರಗಳ ಜವಾಬ್ದಾರಿಯನ್ನು ಸಂಪೂರ್ಣ ಮಹಿಳೆಯರೇ ಹೊತ್ತುಕೊಳ್ಳಲಿದ್ದಾರೆ. ಇದರ ನಾಲ್ಕು ಮತಕೇಂದ್ರ ಗಯಾ ಕಾಲೇಜ್ನಲ್ಲಿದ್ದರೆ, ಉಳಿದ ಮೂರು ಮತಕೇಂದ್ರ ಮಹವೀರ್ ಇಂಟರ್ ಕಾಲೇಜ್ನಲ್ಲಿ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುನಾವಣೆಯಲ್ಲಿ ಇದೇ ಮೊದಲಬಾರಿಗೆ 7 ಮತಕೇಂದ್ರಗಳು ಸಂಪೂರ್ಣ ಮಹಿಳಾಮಯವಾಗುತ್ತಿದೆ. ಚುನಾವಣಾ ಆಯೋಗದ ವಿಶೇಷ ಅನುಮತಿಯನ್ನು ಪಡೆದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.