ಕೈವ್: ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಕೈವ್ನಲ್ಲಿ ಹುತಾತ್ಮ ಮಕ್ಕಳ ಎಕ್ಸಿಬಿಷನ್ನಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮೋದಿ, “ಸಂಘರ್ಷವು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ” ಎಂದು ಹೇಳಿದರು.
ಉಕ್ರೇನ್ ಕಳೆದ 2.5 ವರ್ಷಗಳಿಂದ ರಷ್ಯಾದೊಂದಿಗೆ ಸುದೀರ್ಘವಾದ ಸಂಘರ್ಷದಲ್ಲಿ ತೊಡಗಿಕೊಂಡಿದೆ. ಉಕ್ರೇನ್ನ ಹಲವಾರು ನಗರಗಳು ತೀವ್ರವಾದ ಕದನಗಳಿಗೆ ಸಾಕ್ಷಿಯಾಗುತ್ತಿವೆ. ನಡೆಯುತ್ತಿರುವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ನೆನಪಿಗಾಗಿ ಮಾರ್ಟಿಯಾರಲಜಿಸ್ಟ್ ಪ್ರದರ್ಶನವನ್ನು ನಿರ್ಮಿಸಲಾಗಿದೆ.
ಇಲ್ಲಿ ಮೋದಿ ಮರಣ ಹೊಂದಿದ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. “ನನ್ನ ಹೃದಯವು ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಗಳಿಗೆ ಮಿಡಿಯುತ್ತಿದೆ ಮತ್ತು ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಪ್ರಧಾನಮಂತ್ರಿ ಹೇಳಿದರು.
ಉಕ್ರೇನ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಮೋದಿ ಪೋಲೆಂಡ್ನಿಂದ ಇಂದು ಮುಂಜಾನೆ ಕೈವ್ಗೆ ಆಗಮಿಸಿದರು.
President @ZelenskyyUa and I paid homage at the Martyrologist Exposition in Kyiv.
Conflict is particularly devastating for young children. My heart goes out to the families of children who lost their lives, and I pray that they find the strength to endure their grief. pic.twitter.com/VQH1tun5ok
— Narendra Modi (@narendramodi) August 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.