ನವದೆಹಲಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಏಪ್ರಿಲ್ನಲ್ಲಿ 1.64 ಮಿಲಿಯನ್ ಹೊಸ ಸದಸ್ಯರನ್ನು ಸೇರಿಸಿದೆ ಎಂದು ಬುಧವಾರ ಬಿಡುಗಡೆಯಾದ ವೇತನದಾರರ ಅಂಕಿಅಂಶಗಳು ತಿಳಿಸಿವೆ.
ದತ್ತಾಂಶವನ್ನು ಬಿಡುಗಡೆ ಮಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಹೊಸ ಸೇರ್ಪಡೆಗಳಲ್ಲಿ 784,000 ಮಂದಿ 25 ವರ್ಷದೊಳಗಿನ ಯುವ ಉದ್ಯೋಗಿಗಳು ಇದ್ದಾರೆ ಎಂದು ಹೇಳಿದೆ.
ESIC ಯ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಸುಮಾರು 18,490 ಹೊಸ ಸಂಸ್ಥೆಗಳನ್ನು ಸೇರಿಸಿಕೊಳ್ಳುವುದರ ಮೂಲಕ ಹೆಚ್ಚಿನ ಕಾರ್ಮಿಕರಿಗೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದಿದೆ.
ವೇತನದಾರರ ದತ್ತಾಂಶದ ಲಿಂಗ ವಿಶ್ಲೇಷಣೆಯು ಏಪ್ರಿಲ್ನಲ್ಲಿ 338,000 ಮಹಿಳೆಯರ ನೋಂದಣಿ ನಡೆದಿದೆ ಎಂದಿದೆ. 53 ಟ್ರಾನ್ಸ್ಜೆಂಡರ್ ಉದ್ಯೋಗಿಗಳು ಸಹ ಇಎಸ್ಐ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
“ಎಪ್ರಿಲ್ ಮಾಸಿಕದಲ್ಲಿ ಒಟ್ಟು 1.64 ಮಿಲಿಯನ್ ಉದ್ಯೋಗಿಗಳನ್ನು ಸೇರ್ಪಡಗೊಳಿಸಲಾಗಿದ್ದು, ಇದು ರಾಷ್ಟ್ರದ ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಒಟ್ಟು ನೋಂದಣಿಗಳಲ್ಲಿ ಸುಮಾರು 47.60% ನಷ್ಟು ಮಂದಿ ಅಂದರೆ 784,000 ಉದ್ಯೋಗಿಗಳು 25 ವರ್ಷ ವಯಸ್ಸಿನ ಗುಂಪಿಗೆ ಸೇರಿದ್ದಾರೆ” ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಮಾರ್ಚ್ನಲ್ಲಿ, EPFO 1.44 ಮಿಲಿಯನ್ ನಿವ್ವಳ ಸದಸ್ಯರನ್ನು ಸೇರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.