ಬೆಳಿಗ್ಗೆ ಚೌಟರು ಉಡುಪಿಯಲ್ಲಿದ್ದರು. ನೂರಾರು ಕಾಲೇಜು ಹುಡುಗರು ಚೌಟರನ್ನ ಮುತ್ತಿಕೊಂಡಿದ್ದರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲಿಕ್ಕಾಗಿ! ಇವತ್ತು ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನ ಭೇಟಿಯಾಗಿ ಆಶಿರ್ವಾದ ಪಡೆದು ಬಂದ ಪೊಟೋಗಳು ಈಗಷ್ಟೇ ವೈರಲ್ ಆಗುತ್ತಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟರ ಸ್ಪರ್ಧೆ ರಾಜ್ಯದಲ್ಲೇ ದೊಡ್ಡದೊಂದು ಟ್ರೆಂಡ್ ಸೃಷ್ಠಿಸಿದೆ. ಮೊನ್ನೆ ಎಲ್ಲೋ ಮಾತಿನ ನಡುವೆ ಚೌಟರು “ನನಗೆ ಗೊತ್ತಿರುವುದು ಎರಡೇ ಪರಿವಾರ, ಆ ಪರಿವಾರದಲ್ಲಿ ಹಿಂದಿನಿಂದಲೂ ನಮ್ಮ ಕುಟುಂಬವೇ ಇತ್ತು ಅದು ಸಂಘ ಪರಿವಾರ, ಇನ್ನೊಂದು ಪರಿವಾರ ಮೋದಿ ಪರಿವಾರ” ಎಂದಿದ್ದರು. ಚೌಟರೂ ಕೂಡ ಅವಿವಾಹಿತ, ಸಮಾಜಕ್ಕಾಗಿ ಬದುಕುವುದರಲ್ಲೇ ಅವರು ಹಿತವನ್ನ ಕಂಡವರು. ಕ್ಯಾಪ್ಟನ್ ಬ್ರಿಜೇಶ್ ಚೌಟ ಎನ್ನುವ ಹೆಸರಲ್ಲೇ ಒಂದು ಧಮ್ ಇದೆ. ಸೈನ್ಯದಲ್ಲಿಯೂ ನಾಯಕನಾಗಿದ್ದ ಚೌಟರು ವಿದ್ಯಾರ್ಥಿ ದೆಸೆಯಲ್ಲಿಯೂ ನಾಯಕನಾಗಿಯೇ ಬೆಳೆದವರು. ಮೋದಿ ಪರಿವಾರ ಸೇರಲಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರು ರಾಜ್ಯಕ್ಕೆ ಹೆಮ್ಮೆ ತರುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಚೌಟರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮ ಪತ್ರ ಸಲ್ಲಿಸುವಾಗ ಠೇವಣಿ ಇಡುತ್ತಾರೆ ಗೊತ್ತಲ್ಲಾ? ಆ ದುಡ್ಡು ಬಂದು ಸೇರಿದ್ದು ಎಲ್ಲಿಂದ ಎನ್ನುವುದು ಗೊತ್ತಾ?
ಸೆರಗಲ್ಲಿ ಕಟ್ಟಿಕೊಂಡ ದುಡ್ಡು ಕೊಟ್ಟವರು!
ಬ್ರಿಜೇಶ್ ಚೌಟರ ಚುನಾವಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಭಾವನಾತ್ಮಕ ಚುನಾವಣೆಯಾಗಿ ಕಾಣಿಸುತ್ತಿದೆ. ದೇಶದಲ್ಲಿ ಕಂಬಳ ನಿಷೇಧವಾದಾಗ ಚೌಟರು ಮಂಗಳೂರು ನಗರದಲ್ಲೇ ಕಂಬಳ ನಡೆಸಿ ತೊಡೆ ತಟ್ಟಿದ್ದ ಯೋಧ, ಕಂಬಳಕ್ಕೂ ಕರಾವಳಿಗೂ ಇರುವ ನಂಟಿನ ಬಗ್ಗೆ ಹೇಳಬೇಕಿಲ್ಲ ತಾನೆ? ಆ ಕಂಬಳ ಪ್ರೇಮಿಗಳು ಇಂದು ಪಕ್ಷ ಬೇಧ ಮರೆತು ಬ್ರಿಜೇಶಣ್ಣ ಗೆಲ್ಲಬೇಕು ಎನ್ನುತ್ತಿದ್ದಾರೆ! ಕ್ಯಾಪ್ಟನ್ ಬ್ರಿಜೇಶ್ ಚೌಟರು ಚುನಾವಣೆಗೆ ಡೆಪಾಸಿಟ್ ಇಡುವ ಹಣ ಅವರದ್ದಲ್ಲ! ಐದು ಜನ ಮೀನು ಮಾರುವ ತಾಯಂದಿರು ತಮ್ಮ ಸೆರಗಲ್ಲಿ ಕಟ್ಟಿಕೊಂಡು ಬಂದ ಹಣವದು! ಮೊಗವೀರ ಕುಲದೇವಿ ಕುಲಮಹಾಸ್ತ್ರೀಯೇ ಆ ತಾಯಂದಿರ ರೂಪದಲ್ಲಿ ಬಂದಳೇನೋ ಎನ್ನುವ ಭಾವ ಚೌಟರಲ್ಲಿತ್ತು. ಬೀದಿ ಬದಿಯಲ್ಲಿನ ನಾಯಿಗಳಿಗೆ ಆಹಾರ ಹಾಕಿ ರಕ್ಷಣೆ ಮಾಡುವ ರಜನಿ ಶೆಟ್ಟಿ ತನ್ನಲ್ಲಿ ಇದ್ದ ಒಂದಷ್ಟು ಕಾಸು ಚೌಟರಿಗೆ ಕೊಟ್ಟು ಕೈ ಮುಗಿಯುತ್ತಾರೆ! ಪಂಪ್ವೇಲ್ ಬಳಿಯ ಅಪ್ಪೆ ಕಲ್ಲುರ್ಟಿ ಹೂವಿನ ಅಂಗಡಿಯ ತಾಯಿ ತಾನು ಹೂ ಮಾರಿದ ಹಣವನ್ನ ಬ್ರಿಜೇಶ್ ಚೌಟರ ಕಿಸೆಗೆ ತುರುಕುತ್ತಾರೆ! ಯಾವ ಯಾವುದೋ ಊರಿನ ತಾಯಂದಿರ ಮನಸಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಮ್ಮ ಮನೆಮಗ ಎನ್ನುವ ಭಾವ ಬಂದಿದೆ, ಕಾಲೇಜು ಹುಡುಗಿಯರಿಗೆ ಕ್ಯಾಪ್ಟನ್ ನಮಗೆ ರಕ್ಷಣೆ ನೀಡುವ ಅಣ್ಣನಾಗುತ್ತಾನೆ ಎನ್ನುವ ವಿಶ್ವಾಸ ಬಂದಿದೆ, ಹಿಂದೂ ಕಾರ್ಯಕರ್ತರಿಗೆ ನಮ್ಮ ನಾಯಕ ಯಾವ ರಾತ್ರಿಗೂ ಎದ್ದು ಬಂದು ನಮ್ಮ ಮಗ್ಗುಲಲ್ಲಿ ನಿಲ್ಲಬಲ್ಲ ಎನ್ನುವ ಭರವಸೆ ಸಿಕ್ಕಿದೆ, ಪ್ರಜ್ಞಾವಂತ ನಾಗರೀಕರಿಗೆ ಬ್ರಿಜೇಶ್ ಚೌಟ ಮಂಗಳೂರಿಗೆ ಸಿಕ್ಕ ಕನಸುಗಾರ ಎನ್ನುವ ವಿಶ್ವಾಸವಿದೆ. ಓರ್ವ ಯುವ ನಾಯಕ ಮತದಾರರ ಮನೆ-ಮನ ತಲುಪುವ ಪರಿ ಎಂದರೆ ಇದೇ ತಾನೆ?
ಹೌದು ಚೌಟರು ಗೆಲ್ಲಬೇಕು, ಆತ ಕೇವಲ ಬಿಜೆಪಿ, ಮೋದಿ ಪರಿವಾರ, ಸಂಘ ಪರಿವಾರ ಎನ್ನುವ ಕಾರಣಕ್ಕಲ್ಲ, ತೌಳವಸೀಮೆಯ, ಸಮರ್ಥ ನಾಯಕನಾಗಿ ಚೌಟರು ಕೆಲಸ ಮಾಡಲಿದ್ದಾರೆ, ಆ ಭರವಸೆ ನನ್ನಲ್ಲಿದೆ. ಈ ಚುನಾವಣೆ ದೇಶದ ಸುಭದ್ರತೆಯ ಚುನಾವಣೆ, ದೇಶಕಾಯುವ ಯೋಧ ದಕ್ಷಿಣ ಕನ್ನಡಕ್ಕೆ ನಾಯಕನಾಗಿ ಸಿಗುತ್ತಾನೆ ಎಂದರೆ ಅದಕ್ಕಿಂತ ಖುಶಿಯ ಸಂಗತಿ ಇನ್ನೊಂದಿದೆಯಾ?
ವಸಂತ್ ಗಿಳಿಯಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.