×
Home About Us Advertise With s Contact Us

ತಪ್ಪು ಅಂಪೈರಿಂಗ್ ನಡೆದಿದೆ : ಬಾಂಗ್ಲಾ

banglaಮೆಲ್ಬೋರ್ನ್: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ವಿಶ್ವಕಪ್‌ನ ಎರಡನೇ ಕ್ವಾಟರ್‌ಫೈನಲ್ ಪಂದ್ಯಾವಳಿಯಲ್ಲಿ ಕೆಟ್ಟ ಅಂಪೈರಿಂಗ್ ಆಗಿದೆ ಎಂದು ಆರೋಪಿಸಿರುವ ಐಸಿಸಿ ಅಧ್ಯಕ್ಷ ಮುಸ್ತಫ ಕಮಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶತಕ ಬಾರಿಸಿದ ರೋಹಿತ್ ಶರ್ಮಾರಿಗೆ ಲೈಫ್‌ಲೈನ್ ನೀಡಿದ್ದ ವಿವಾದಾತ್ಮಕ ನೋ ಬಾಲ್ ನಿರ್ಧಾರಕ್ಕೆ ಬಾಂಗ್ಲಾದೇಶದ ಕಮಲ್ ತೀವ್ರ ಆಕೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

‘ಪಂದ್ಯಾವಳಿಯಲ್ಲಿ ಅಂಪೈರಿಂಗ್ ತುಂಬಾ ಕಳಪೆಯಾಗಿತ್ತು. ಅಂಪೈರಿಂಗ್‌ನಲ್ಲಿ ಯಾವುದೇ ಗುಣಮಟ್ಟವಿರಲಿಲ್ಲ. ಏನೋ ತಲೆಯಲ್ಲಿಟ್ಟುಕೊಂಡು ಮೈದಾನಕ್ಕಿಳಿದಿದ್ದಾರೆ ಎಂಬಂತೆ ಅಂಪೈರ್‌ಗಳ ವರ್ತನೆ ಭಾಸವಾಗುತ್ತಿತ್ತು’ ಎಂದಿದ್ದಾರೆ.

ಎಲ್ಲವೂ ಚಿತ್ರೀಕರಣಗೊಂಡಿದೆ. ಹೀಗಾಗಿ ಐಸಿಸಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಮಲ್ ಆಗ್ರಹಿಸಿದ್ದಾರೆ. ಬಾಂಗ್ಲಾ ಆಟಗಾರರು ಕೂಡ ಅಂಪೈರ್‌ಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್ 90ರನ್ ಪೇರಿಸಿದ್ದ ಸಂದರ್ಭ 40ನೇ ಓವರ್‌ನಲ್ಲಿ ಫೀಲ್ಡರ್ ಕೈಗೆ ಕ್ಯಾಚ್ ಇತ್ತಿತ್ತರು. ಆದರೆ ಇದು ನೋ ಬಾಲ್ ಎಂದು ಅಂಪೈರ್ ತೀರ್ಪು ನೀಡಿದ್ದರು. ಇದು ಬಾಂಗ್ಲಾ ಆಟಗಾರರನ್ನು ತೀವ್ರವಾಗಿ ಕೆರಳಿಸಿದೆ.

 

Recent News

Pungava 01-10-2018
23 hours ago  
Back To Top
error: Content is protected !!