ದುಬೈ: 15ನೇ ಆವೃತ್ತಿಯ ಇಂಟರ್ನ್ಯಾಷನಲ್ ಅಪ್ಯಾರಲ್ & ಟೆಕ್ಸ್ಟೈಲ್ ಫೇರ್ (IATF) 2023 ದುಬೈನಲ್ಲಿ ಆರಂಭಗೊಂಡಿದೆ. ಭಾರತ ಸರ್ಕಾರದ ಜವಳಿ ಸಚಿವಾಲಯ ಮತ್ತು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಸೇಶನ್ನಿಂದ ಜಂಟಿಯಾಗಿ ಆಯೋಜಿಸಲಾದ ಇಂಡಿಯಾ ಪೆವಿಲಿಯನ್ 67 ಮಳಿಗೆಗಳನ್ನು ಇದರಲ್ಲಿ ಹಾಕಿದೆ. ಇತರ ಮಳಿಗೆಗಳು ಸೇರಿದಂತೆ ಭಾರತದ 90 ಮಳಿಗೆಗಳು ಇದರಲ್ಲಿ ಇರಲಿವೆ.
ಯುಎಇಯಲ್ಲಿ ಉಡುಪುಗಳು, ಫ್ಯಾಶನ್ ಬಟ್ಟೆಗಳು, ಪ್ರಿಂಟ್ಗಳು, ಬಟ್ಟೆ ಪರಿಕರಗಳು, ಗೃಹ ಜವಳಿಗಳು, ಪಾದರಕ್ಷೆಗಳು ಮತ್ತು ಹೆಚ್ಚಿನದನ್ನು ಸೋರ್ಸಿಂಗ್ ಮಾಡಲು ಈ ಫೇರ್ ಅನ್ನು ಪ್ರಧಾನ ವೇದಿಕೆ ಎಂದು ಕರೆಯಲಾಗುತ್ತದೆ. ಈ ವರ್ಷದ ಈವೆಂಟ್ 2023-2024 ರ ವಸಂತ ಬೇಸಿಗೆ ಸಂಗ್ರಹಗಳು ಮತ್ತು ಚಳಿಗಾಲದ ವಸ್ತುಗಳನ್ನು ಪ್ರದರ್ಶಿಸುತ್ತದೆ.
ಇಲ್ಲಿ ಭಾರತೀಯ ಮಳಿಗೆಗಳು ರಫ್ತುಗಾಗಿ ವಿವಿಧ ಭಾರತೀಯ ಜವಳಿಗಳನ್ನು ಪ್ರದರ್ಶಿಸುತ್ತದೆ. ಸುಮಾರು 23 ಕಂಪನಿಗಳು ತಮ್ಮ ಉಡುಪುಗಳನ್ನು ಪ್ರದರ್ಶಿಸಲು ತಾವಾಗಿಯೇ ಮುಂದೆ ಬಂದಿವೆ. ಇಂಡಿಯನ್ ಪೆವಿಲಿಯನ್ ಅನ್ನು ಭಾರತದ ಕಾನ್ಸುಲ್ ಜನರಲ್ ಡಾ ಅಮನ್ ಪುರಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಇಪಿಸಿ ಅಧ್ಯಕ್ಷ ಅಶೋಕ್ ಜಿ ರಜನಿ ಉಪಸ್ಥಿತರಿದ್ದರು.
ಈವೆಂಟ್ ವ್ಯಾಪಕ ಶ್ರೇಣಿಯ ಜವಳಿ ಗಿರಣಿಗಳು, ಗಾರ್ಮೆಂಟ್ಸ್ ತಯಾರಕರು, ಪರಿಕರಗಳು / ಟ್ರಿಮ್ ಪೂರೈಕೆದಾರರು, ಪ್ರಿಂಟ್ ಡಿಸೈನರ್ಗಳು ಮತ್ತು ಪ್ರಮುಖ ಪಾದರಕ್ಷೆ ತಯಾರಕರನ್ನು ಆಕರ್ಷಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.