ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಗಡಿ ರಸ್ತೆ ಸಂಸ್ಥೆ (BRO) ಚೀನಾದ ಗಡಿಯಲ್ಲಿರುವ ಉತ್ತರಾಖಂಡದ ಮನ ಎಂಬ ಹಳ್ಳಿಯಲ್ಲಿ ‘ಭಾರತದ ಮೊದಲ ಗ್ರಾಮ’ ಎಂಬ ಫಲಕವನ್ನು ಹಾಕಿದೆ. ಈ ಗ್ರಾಮವು ಚಮೋಲಿ ಜಿಲ್ಲೆಯಲ್ಲಿ ಭಾರತ-ಚೀನಾ ಗಡಿಯಲ್ಲಿದೆ.
“ಈಗ ಮನವನ್ನು ದೇಶದ ಕೊನೆಯದಲ್ಲ ಮೊದಲ ಗ್ರಾಮ ಎಂದು ಕರೆಯಲಾಗುತ್ತದೆ” ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ಕಳೆದ ವರ್ಷ ಚಮೋಲಿ ಜಿಲ್ಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಗಡಿ ಗ್ರಾಮಗಳು ಮೊದಲ ಗ್ರಾಮಗಳು ಮತ್ತು ಸಾಮಾನ್ಯವಾಗಿ ಕರೆಯಲ್ಪಡುವಂತೆ ಕೊನೆಯ ಗ್ರಾಮಗಳಲ್ಲ ಎಂದು ಹೇಳಿದ್ದರು. ಗಡಿ ಭಾಗಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಮರ್ಪಿತವಾಗಿದೆ” ಎಂದು ಸಿಎಂ ಧಾಮಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದ ಗಡಿ ಪ್ರದೇಶಗಳು ಹೆಚ್ಚು ವೈಭವ ಪಡೆಯುತ್ತಿವೆ. ಇದಕ್ಕಾಗಿ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಧಾಮಿ ಹೇಳಿದರು.
ಮನವು ಬದರಿನಾಥದ ಸಮೀಪದಲ್ಲಿದೆ ಮತ್ತು ಹಿಮಾಲಯ ದೇವಾಲಯಕ್ಕೆ ಹೋಗುವ ಭಕ್ತರು ಸುಂದರ ದೃಶ್ಯವೀಕ್ಷಣೆಗಾಗಿ ಹಳ್ಳಿಗೆ ತೆರಳುತ್ತಾರೆ.
Mana, a village located at the India-China border in Uttarakhand, was earlier known as the last Indian village, but will now be referred to as the "first Indian village". pic.twitter.com/O32HfYLKlE
— Anshul Saxena (@AskAnshul) April 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.