ನವದೆಹಲಿ: ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಚೀನಾ ಈಗ 142.57 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಹೀಗಾಗಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
ಹೊಸ UNFPA ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ 25 ರಷ್ಟು 0-14 ವರ್ಷ ವಯಸ್ಸಿನವರು, ಶೇಕಡಾ 18 ರಷ್ಟು 10 ರಿಂದ 19 ವಯಸ್ಸಿನವರು, ಶೇಕಡಾ 26 ರಷ್ಟು 10 ರಿಂದ 24 ವರ್ಷ ವಯಸ್ಸಿನವರು, ಶೇಕಡಾ 68ರಷ್ಟು 15 ರಿಂದ 64 ವರ್ಷ ವಯಸ್ಸಿನವರು, ಶೇ 7ರಷ್ಟು 65 ವರ್ಷಕ್ಕಿಂತ ಮೇಲ್ಪಟ್ಟವರು.
ವಿವಿಧ ಏಜೆನ್ಸಿಗಳ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆಯು ಸುಮಾರು ಮೂರು ದಶಕಗಳವರೆಗೆ ಏರುತ್ತಲೇ ಇರುತ್ತದೆ ಮತ್ತು ಅದು 165 ಕೋಟಿಗೆ ತಲುಪುತ್ತದೆ ಮತ್ತು ನಂತರ ಕ್ಷೀಣಿಸಲು ಪ್ರಾರಂಭಿಸುತ್ತದೆ. ಭಾರತದ ಜನಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕೇರಳ ಮತ್ತು ಪಂಜಾಬ್ಗಳು ವಯಸ್ಸಾದ ಜನಸಂಖ್ಯೆಯನ್ನು ಹೊಂದಿದ್ದರೆ, ಬಿಹಾರ ಮತ್ತು ಉತ್ತರ ಪ್ರದೇಶ ಯುವ ಜನಸಂಖ್ಯೆಯನ್ನು ಹೊಂದಿವೆ ಎಂದು ತಜ್ಞರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಯಭಾರತದ ಪ್ರತಿನಿಧಿ ಮತ್ತು ಭೂತಾನ್ನ ದೇಶದ ನಿರ್ದೇಶಕರಾದ ಆಂಡ್ರಿಯಾ ವೊಜ್ನರ್ ಅವರು, “ಭಾರತದ 1.4 ಶತಕೋಟಿ ಜನರನ್ನು 1.4 ಶತಕೋಟಿ ಅವಕಾಶಗಳಾಗಿ ನೋಡಬೇಕು” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.