ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಅಥಾರಿಟಿ ಹೋಲ್ಡಿಂಗ್ ಸೀಲ್ಡ್ ಪರ್ಟಿಕ್ಯುಲರ್ಸ್ (ಎಎಚ್ಎಸ್ಪಿ)ಗೆ ಸಂಬಂಧಿಸಿದ ಉದ್ಯಮ ಸ್ನೇಹಿ ಸುಧಾರಣೆಯನ್ನು ತರುವ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
AHSP ಯು ರಕ್ಷಣಾ ಉತ್ಪನ್ನಗಳ ಸಂಪೂರ್ಣ ಇತಿಹಾಸ ಮತ್ತು ತಾಂತ್ರಿಕ ಮಾಹಿತಿಯನ್ನು ಉತ್ಪಾದಿಸುವ, ನಿರ್ವಹಿಸುವ, ನವೀಕರಿಸುವ ಅಥವಾ ಬಳಕೆಯಲ್ಲಿಲ್ಲದವೆಂದು ಘೋಷಿಸುವ ಜವಾಬ್ದಾರಿಯನ್ನು ಹೊಂದಿದೆ.
ಇಲ್ಲಿಯವರೆಗೆ, ಡೈರೆಕ್ಟರೇಟ್ ಜನರಲ್ ಆಫ್ ಕ್ವಾಲಿಟಿ ಅಶ್ಯೂರೆನ್ಸ್ (DGQA) ವಿವಿಧ DPSU ಗಳು ಮತ್ತು ಖಾಸಗಿ ಕೈಗಾರಿಕೆಗಳಿಂದ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಹೆಚ್ಚಿನ ರಕ್ಷಣಾ ವಸ್ತುಗಳಿಗೆ AHSP ಜವಾಭ್ದಾರಿ ಹೊಂದಿತ್ತು.
“ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಅಡಿಯಲ್ಲಿ, ಬದಲಾಗುತ್ತಿರುವ ಸಮಯಕ್ಕೆ ಅನುಗುಣವಾಗಿ ತಮ್ಮ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಲ್ಲಿ ಸಮಯೋಚಿತ ಸುಧಾರಣೆಗಳನ್ನು ತರಲು ಉದ್ಯಮವು ಕೆಲವು ಅಡಚಣೆಗಳನ್ನು ಅನುಭವಿಸಿದೆ. ಆದ್ದರಿಂದ, ಎಎಚ್ಎಸ್ಪಿ ಕಾರ್ಯವಿಧಾನಗಳನ್ನು ಉದಾರೀಕರಣಗೊಳಿಸಲು ಮತ್ತು ಅದನ್ನು ಉದ್ಯಮ ಸ್ನೇಹಿಯನ್ನಾಗಿ ಮಾಡಲು ಸಚಿವಾಲಯವು ಈಗ ನಿರ್ಧರಿಸಿದೆ” ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.