ಬೆಳ್ತಂಗಡಿ : ಶೋಷಿತರಿಗೆ ನೆರವಾಗಲು ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕೇ ಹೊರತು ಶೋಷಣೆ ಮಾಡುವುದಕ್ಕಲ್ಲ ಎಂದು ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿಯಲ್ಲಿನ ಸುವರ್ಣಕಾಂಪ್ಲೇಕ್ಸ್ನಲ್ಲಿ ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಕಾರ್ಕಳ ಇದರ ಸಹಕಾರಿಯ ದಶಮಾನೋತ್ಸವ ಪ್ರಯುಕ್ತ ಪ್ರಥಮ ಶಾಖೆಯನ್ನು ಉದ್ಘಾಟಿಸಿ ಬಳಿಕ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲಾ ಕ್ಷೇತ್ರದಲ್ಲೂ ಶೋಷಿತರಿದ್ದಾರೆ. ಅವರನ್ನು ಆರ್ಥಿಕವಾಗಿ ಸಧೃಢರನ್ನಾಗಿ ಮಾಡಲು ನಾವು ನೆರವು ನೀಡಬೇಕು. ಅಂತವರಿಗೆ ಸ್ವತಂತ್ರ ಬದುಕು ಕಟ್ಟಲು ಈ ಸಂಸ್ಥೆ ಸಹಾಯ ಮಾಡುತ್ತಿದೆ. ಸಹಕಾರಿಕ್ಷೇತ್ರ ವಿಶಿಷ್ಟವಾದದ್ದು. ಗ್ರಾಹಕರೇ ನಮ್ಮ ಆಸ್ತಿಯೆಂದು ಪರಿಗಣಿಸಿದಾಗ ಸಂಸ್ಥೆ ಯಶಸ್ವಿಯಾಗುತ್ತದೆ. ಸಂಸ್ಥೆಯು ಗ್ರಾಹಕರಿಗೆ ಆರ್ಥಿಕವಾಗಿ ನೆರವಾಗುವುದು ಮಾತ್ರವಲ್ಲ ಸರಕಾರದ ಯೋಜನೆ, ಸೌಲಭ್ಯಗಳನ್ನು ಅವರಿಗೆ ಮುಟ್ಟಿಸಬೇಕು ಎಂದರು.
ನಿರಖುಠೇವಣಿ ವಿತರಿಸಿದ ಮಾತನಾಡಿದ ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಆರ್ಥಿಕ ಬೆಳವಣಿಗೆಗೆ ಬ್ಯಾಂಕುಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೆ.ವಸಂತ ಬಂಗೇರಅವರು ಹಿರಿಯ ನಾಗರಿಕರ ಠೇವಣಿ ಪತ್ರ ವಿತರಿಸಿ, ಈ ಸಹಕಾರಿ ಬ್ಯಾಂಕ್ಆರ್ಥಿಕ ಚಟುವಟಿಕೆಯ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯವನ್ನೂ ಮಾಡುತ್ತಿದೆ. ಈಗಾಗಲೇ ಪ್ರಥಮ ಶಾಖೆಯನ್ನು ಬೆಳ್ತಂಗಡಿಯಲ್ಲಿ ತೆರೆದಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ತೆರೆಯುವಂತಾಗಲಿ ಎಂದರು ಹಾರೈಸಿದರು.
ಪ್ರಥಮ ಷೇರು ಪತ್ರವನ್ನು ಸುರ್ಯ ಶ್ರೀ ಸದಾಶಿವ ರುದ್ರದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಜೈನ್ ಸುರ್ಯಗುತ್ತು, ಉಳಿತಾಯ ಖಾತೆಯ ಪುಸ್ತಕದ ವಿತರಣೆಯನ್ನು ಪಟ್ಟಣ ಪಂ.ಅಧ್ಯಕ್ಷೆ ನಳಿನಿ ವಿಶ್ವನಾಥ್, ಪಿಗ್ಮಿಯಂತ್ರವನ್ನು ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷರಂಜನ್ಜಿ.ಗೌಡ ವಿತರಿಸಿದರು ಶುಭ ಹಾರೈಸಿದರು. ಈ ಸಂಧರ್ಭ ಗುರುವಾಯನಕೆರೆಯ ಶುಭಂ ಹಾಗೂ ಧರ್ಮಸ್ಥಳದ ಪದ್ಮಶ್ರೀ ಅವರಿಗೆ ವೀಲ್ಹ್ಚಯರ್ನ್ನು ವಿತರಿಸಲಾಯಿತು.
ಇವರಿಗೆ ಎಂ.ಎನ್.ರಾಜೇಂದ್ರಕುಮಾರ್ ಅವರು ತಲಾ ರೂ.5000 ಸಹಾಯಧನ ನೀಡಿದರು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಮಂಗಳೂರಿನ ಲೆಕ್ಕ ಪರಿಶೋಧಕ ಮಂಜುನಾಥ್ ಅವರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ನೇಮಿರಾಜ ಅರಿಗ ಪ್ರಸ್ತಾವಿಸಿ, ಈ ಸಹಕಾರಿ ಸಂಘದಲ್ಲಿ ಹಿರಿಯ ನಾಗರಿಕರಿಗೆ ಶೇ.12 ಮತ್ತು ಇತರರಿಗೆ ಶೇ.12 ಬಡ್ಡಿದರವನ್ನು ನೀಡಲಾಗುತ್ತದೆ. ಶೇ.15ರಷ್ಟು ಡಿವಿಡೆಂಡ್ ನೀಡಲಾಗುತ್ತದೆ. ಕಾರ್ಕಳ ಕೇಂದ್ರ ಶಾಖೆಯಲ್ಲಿ 1000 ಅಟೋ ರಿಕ್ಷಾಗಳಿಗೆ ಸಾಲ ನೀಡಲಾಗಿದೆ. ಅಲ್ಲಿ ರೂ.25 ಕೋಟಿ ವ್ಯವಹಾರವಿದೆ. ಬೆಳ್ತಂಗಡಿ ಶಾಖೆಯಲ್ಲಿ ರೂ.1 ಕೋಟಿ ಠೇವಣಿಯಾಗಿದ್ದು 500 ಖಾತೆಯನ್ನು ತೆರೆಯಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಚಿಕ್ಕಮಗಳೂರು, ಹಾಸನ, ಧಾರವಾಡಗಳಲ್ಲಿ ಶಾಖೆಗಳನ್ನು ತೆರೆಯುವ ಚಿಂತನೆ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಗೌಸ್, ನಿದೇಶಕರುಗಳಾದ ನಿರಂಜನ ಅಜ್ರಿ, ಯನ್.ವಸಂತ ಭಟ್, ಪದ್ಮರಾಜ ಅತಿಕಾರಿ, ಮಹಾವೀರ ಜೈನ್, ರತ್ನವರ್ಮ ಜೈನ್, ಪುಷ್ಪರಾಜ ಜೈನ್, ಎಸ್. ಪಾರ್ಶ್ವನಾಥ ವರ್ಮ, ನಿರಂಜನಜೈನ್, ಶಮಂತ್ ಕುಮಾರ್, ಪ್ರಶಾಂತ ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಜಾತಾ ಉಪಸ್ಥಿತರಿದ್ದರು.
ಬೆಳಂಗಡಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಶಿಕಿರಣ್ ಜೈನ್ ಸ್ವಾಗತಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಹಾಗೂ ವಿಶುಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಪ್ರವೀಣ್ ಭಟ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.