ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದು 30 ವರ್ಷಗಳನ್ನು ಪೂರೈಸಿದ್ದು ೨2014-15ನೇ ಸಾಲಿನಲ್ಲಿ ಸಂಘವು ರೂ. 1.20ಲಕ್ಷ ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘವು 2436 ಸದ್ಯರನ್ನು ಹೊಂದಿದ್ದು 108.48 ಲಕ್ಷ ರೂ. ಪಾಲುಬಂಡವಾಳವನ್ನು ಹೊಂದಿದ್ದು 14.80 ಕೋಟಿ ರೂ.ಠೇವಣಾತಿ ಇದೆ.
ಸಂಘವು ಗುರುವಾಯನಕೆರೆ, ಗಂಡಿಬಾಗಿಲು, ತೋಟತ್ತಾಡಿ , ಅರಸಿನಮಕ್ಕಿ, ಶಿಬಾಜೆ , ಮುಂಡಾಜೆ . ಮುಂಡ್ರುಪ್ಪಾಡಿ , ಕಾಯರ್ತಡ್ಕ , ಅಣಿಯೂರು ,ಕಕ್ಕಿಂಜೆ , ಇಂದಬೆಟ್ಟು , ಕಡಿರುದ್ಯಾವರ , ಸಾಗರ ,ನರಸಿಂಹರಾಜಪುರ , ಜಡ್ಕಲ್ ,ಹೊಸ್ಮಾರು ,ಕಾರ್ಕಳ , ಉಪ್ಪಿನಂಗಡಿ , ಮೂರ್ಜೆ , ಕಾವು , ವಿಟ್ಲ , ತೀರ್ಥಹಳ್ಳಿ ಹಾಗೂ ಪಡಂಗಡಿ ಯಲ್ಲಿ ಖರೀದಿ ಕೇಂದ್ರಗಳನ್ನು ಹೊಂದಿದ. ಸಂಘದಿಂದ ನಡೆಸಲ್ಪಡುವ ಉತ್ಪಾದನಾ ಘಟಕದಲ್ಲಿ ವಾಹನದ ಬಿಡಿ ಭಾಗ, ದ್ವಿಚಕ್ರ ವಾಹನಗಳ ಫೂಟ್ಮೇಟ್, ಪಂಪ್ಸೆಟ್ ಬಿಡಿ ಭಾಗ, ಕೈಗಾರಿಕಾ ವಸ್ತುಗಳ ಮಡ್ಗಾರ್ಡ್ ಪ್ಲಾಪ್, ಟಯರ್ ಪ್ಲಾಪ್ ಅಲ್ಲದೆ ಕೆಲವು ಕೈಗಾರಿಕೆಗೆ ಬೇಕಾದ ರಬ್ಬರು ಬಿಡಿಭಾಗಗಳ ಉತ್ಪಾದನೆ ಮಾಡುವ ಮೂಲಕ ಪ್ರಗತಿ ಸಾಧಿಸಲಾಗಿದೆ. ಅಲ್ಲದೆ ರಬ್ಬರು ಕೃಷಿಕರಿಗೆ ಬೇಕಾಗುವ ಚಿಲ್ಸ್ ತಯಾರಿಕೆ ಕೂಡಾ ಮಾಡಲಾಗುತ್ತಿದೆ. ವರದಿ ಸಾಲಿನಲ್ಲಿ ಒಟ್ಟು ರೂ.75.53ಲಕ್ಷ ರೂ.ಗಳ ಮಾರಾಟ ಉತ್ಪಾದನಾ ಘಟಕದಲ್ಲಿ ಸಾಧಿಸಲಾಗಿದ್ದು, ವರದಿ ಸಾಲಿನಲ್ಲಿಯೂ ಸಂಸ್ಕರಣ ಘಟಕವು ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಪತ್ರಿಕಾ ಹೇಳಿಕೆಯ ಅವರು ತಿಳಿಸಿದ್ದಾರೆ.
ಬೆಳೆಗಾರರ ಬಹು ದಿನದ ಕನಸಾಗಿದ್ದ ಸುಸಜ್ಜಿತ ರಬ್ಬರು ನರ್ಸರಿಯು ಉಜಿರೆಯಿಂದ 4 ಕಿ.ಮಿ ದೂರದಲ್ಲಿ ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಸಂಘವು ಸ್ವಂತ ಜಾಗ ಖರೀದಿಸಿ ನರ್ಸರಿ ಸ್ಥಾಪಿಸಿದ್ದು ವರದಿ ಸಾಲಿನಲ್ಲಿ ಒಟ್ಟು 22132 ತೊಟ್ಟೆ ಗಿಡಗಳನ್ನು ಹಾಗೂ 155 ಕಸಿ ಕಟ್ಟಿದ ಗಿಡಗಳನ್ನು ಮಾರಾಟ ಮಾಡಲಾಗಿದ್ದು, ಮುಂದಿನ ಸಾಲಿನಲ್ಲಿ 50,000 ತೊಟ್ಟೆಗಿಡ ಹಾಗೂ 1.೦೦ ಲಕ್ಷ ಕಸಿ ಕಟ್ಟಿದ ಗಿಡಗಳ ತಯಾರಿಗೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ತಳಿಗಳ ಸುಸಜ್ಜಿತ ಬಡ್ವುಡ್ ನರ್ಸರಿ ಸ್ಥಾಪಿಸಲಾಗಿದೆ. ಸುಮಾರು 1.5ಲಕ್ಷ ರಬ್ಬರ್ ಬೀಜ ಹಾಕಿ ಗಿಡಗಳನ್ನು ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ವಾರ್ಷಿಕ ಸುಮಾರು 2500 ಮಾನವ ದಿನಗಳಷ್ಟು ಕೆಲಸ ಸ್ಥಳೀಯರಿಗೆ ಲಭ್ಯವಾಗುತ್ತಿವೆ.
ಸದಸ್ಯರ ಉತ್ಪನ್ನಗಳಿಗೆ ಅತ್ಯಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ಸದಸ್ಯರನ್ನು ಅಂತರರಾಷ್ಟ್ರೀಯವಾಗಿ ಅತ್ಯುತ್ತಮ ದರ್ಜೆಯ ರಬ್ಬರಾದ RSS -Iನ ರಬ್ಬರ್ ತಯಾರಿಸಲು ಪ್ರೋತ್ಸಾಹಿಸಿ ಮಾರುಕಟ್ಟೆ ಒದಗಿಸಿರುತ್ತೇವೆ. ವರದಿ ಸಾಲಿನಲ್ಲಿ ಒಟ್ಟು 344 ಟನ್ RSS -Iನ ರಬ್ಬರ್ ಉತ್ಪಾದನೆಯಾಗಿದೆ. ಈ ದರ್ಜೆಯ ರಬ್ಬರಿಗೆ RSS 4 ನ ಧಾರಣೆಗಿಂತ ಕನಿಷ್ಟ ರೂ. 10/- ಅಧಿಕ ಧಾರಣೆಯು ಬೆಳೆಗಾರರಿಗೆ ಸಿಗುತ್ತಲಿದೆ. ಸದಸ್ಯರ ಉತ್ಪನ್ನಕ್ಕೆ ಅಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ರಬ್ಬರನ್ನು ಸಂಘದಲ್ಲಿ ದಾಸ್ತಾನು ಇಡುವ ಸೌಲಭ್ಯ ನೀಡುತ್ತಿದ್ದು, ವರದಿ ಸಾಲಿನಲ್ಲಿ ಸುಮಾರು 1090 ಟನ್ ರಬ್ಬರ್ ಸಂಘದಲ್ಲಿ ದಾಸ್ತಾನು ಇಡಲಾಗಿದ್ದು ಸುಮಾರು ೫೦೦ಕ್ಕೂ ಮೇಲ್ಪಟ್ಟು ಸದಸ್ಯರು ಇದರ ಪ್ರಯೋಜನ ಪಡಕೊಂಡಿರುತ್ತಾರೆ. ತನ್ನ ಸಂಪನ್ಮೂಲದಿಂದಲೇ ಸಂಘಕ್ಕೆ ನಿರಂತರವಾಗಿ ರಬ್ಬರು ಒದಗಿಸುತ್ತಿರುವ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸ್ಪ್ರೇ ಮತ್ತು ರೈನ್ಗಾರ್ಡ್ ವಸ್ತುಗಳನ್ನು ಒದಗಿಸಲಾಗಿದ್ದು, ಸದರಿ ಸಾಲಿನಲ್ಲಿ ಒಟ್ಟು 551ಕ್ಕೂ ಮೇಲ್ಪಟ್ಟು ಸದಸ್ಯರು ಇದರ ಪ್ರಯೋಜನ ಪಡಕೊಂಡಿರುತ್ತಿದ್ದು ಸುಮಾರು 20 ಲಕ್ಷ ರೂಗಳನ್ನು ಈ ಯೋಜನೆಗೆ ಖರ್ಚು ಮಾಡಲಾಗಿದೆ ಎಂದು ಭಿಡೆ ಪ್ರಕಟಣೆಯಲ್ಲಿ ವಿವರಿಸಿದ್ಸಾರೆ.
ರಬ್ಬರು ಧಾರಣೆಯು ತೀರಾ ಕುಸಿದಿದ್ದು ಬೆಳೆಗಾರರು ಕಂಗಾಲಾಗಿರುವುದನ್ನು ಮನಗಂಡು ಈ ಸಾಲಿನಲ್ಲಿ (2015-16) ದಿನಾಂಕ 1.೦4.೨2015 ರಿಂದ 30.09.2015ರ ಅವಧಿಯಲ್ಲಿ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ ರೂ 1ರಂತೆ ಗರಿಷ್ಟ ರೂ.5000ಮಿತಿಗೊಳಪಟ್ಟು ಪ್ರೋತ್ಸಾಹಧನ ಘೋಷಿಸಲಾಗಿದೆ. ರಬ್ಬರು ಧಾರಣೆ ಕುಸಿತದಿಂದ ಬೆಳೆಗಾರರು ಕಂಗೆಟ್ಟಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ಧಾರಣೆ ಸ್ಥಿರೀಕರಿಸುವರೇ ಪ್ರಯತ್ನ ಮಾಡುವುದು ಹಾಗೂ ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಸಮ್ಮೇಳನ ಸಂಘಟಿಸುವುದು. ಸಂಘದ ಕಾರ್ಖಾನೆಯಲ್ಲಿ ದನದ ಕೊಟ್ಟಿಗೆ ಮ್ಯಾಟ್ ಉತ್ಪಾದನೆಯನ್ನು ಆದಷ್ಟು ಶೀಘ್ರ ಕೈಗೊಳ್ಳುವುದು ಎಂದು ಭಿಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.