News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 8th February 2023


×
Home About Us Advertise With s Contact Us

ʼಮೇಕ್ ಇನ್ ಇಂಡಿಯಾʼದಡಿ ರೈಲ್ವೆಯ ಕೋಚ್‌ ಉತ್ಪಾದನೆಗೆ ಮೋದಿ ಶ್ಲಾಘನೆ

ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಕೋಚ್ ಉತ್ಪಾದನೆಯಲ್ಲಿನ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಮತ್ತು ಇದು 130 ಕೋಟಿ ಭಾರತೀಯರು ‘ಆತ್ಮನಿರ್ಭರ’ ಆಗುವ ಶಕ್ತಿ ಮತ್ತು ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರೈಲ್ವೇಯಕೋಚ್ ಉತ್ಪಾದನೆಯಲ್ಲಿ ಶೇಕಡಾ 91.6 ರಷ್ಟು ಹೆಚ್ಚಳವನ್ನುತೋರಿಸಿರುವ ಡೇಟಾವನ್ನು ರೈಲ್ವೇ ಸಚಿವಾಲಯದ ಟ್ವೀಟ್‌ ಮೂಲಕ ಹಂಚಿಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವಪ್ರಧಾನಿ, ಇದು ಅತ್ಯುತ್ತಮ ಪ್ರವೃತ್ತಿಯಾಗಿದೆ ಎಂದು ಹೇಳಿದ್ದಾರೆ.

“ಅತ್ಯುತ್ತಮ ಪ್ರವೃತ್ತಿ, 130 ಕೋಟಿ ಭಾರತೀಯರ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಮತ್ತು ಆತ್ಮನಿರ್ಭರ ಆಗುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ರೈಲ್ವೆ ಸಚಿವಾಲಯವು 2014-15 ಮತ್ತು 2021-22 ರ ನಡುವಿನ ಕೋಚ್ ಉತ್ಪಾದನೆಯ ಡೇಟಾವನ್ನು ಹಂಚಿಕೊಂಡಿದೆ.

“ಭಾರತೀಯ ರೈಲ್ವೇಸ್ ಕೋಚ್ ಉತ್ಪಾದನೆ: ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಸಾಕ್ಷ್ಯ. 2014-15ರಲ್ಲಿ 3,731, 2018-19ರಲ್ಲಿ 6,076,  2021-22ರಲ್ಲಿ 7,151 ಕೋಚ್‌ ಉತ್ಪಾದನೆಯಾಗಿದೆ.  91.6 ಶೇಕಡಾ ಹೆಚ್ಚಳವಾಗಿದೆ” ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top