News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಿ20: 2023 ಅನ್ನು ‘ವಿಸಿಟ್ ಇಂಡಿಯಾ’ ವರ್ಷವಾಗಿ ಆಚರಿಸಲಿದೆ ಸರ್ಕಾರ

ನವದೆಹಲಿ: ಭಾರತದ ಜಿ20 ಅಧ್ಯಕ್ಷ ಸ್ಥಾನದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ಹೆಚ್ಚಿನ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು 2023 ಅನ್ನು ‘ವಿಸಿಟ್ ಇಂಡಿಯಾ’ ವರ್ಷ ಎಂದು ಘೋಷಿಸಲು ಯೋಜಿಸಿದೆ.

ಭಾರತದ ಜಿ 20 ಅಧ್ಯಕ್ಷತೆಯನ್ನು ದೇಶದ ಪ್ರವಾಸೋದ್ಯಮ ವಲಯಕ್ಕೆ ಮಹತ್ವದ ಕ್ಷಣ ಎಂದು ಬಣ್ಣಿಸಲಾಗಿದ್ದು, ಇದು ಸಾಂಕ್ರಾಮಿಕ ನಂತರ ಭಾರತದ ಪ್ರವಾಸೋದ್ಯಮದ ಚೇತರಿಕೆಗೆ ಪ್ರಚೋದನೆಯನ್ನು ನೀಡುತ್ತದೆ ಮತ್ತು ಭಾರತವನ್ನು ಏಷ್ಯಾದಲ್ಲಿ ಆದ್ಯತೆಯ ಪ್ರವಾಸಿ ತಾಣವಾಗಿ ಇರಿಸುತ್ತದೆ.

ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆಯನ್ನು ವೇಗಗೊಳಿಸಲು ಖಾಸಗಿ ವಲಯದ ಹೂಡಿಕೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಸಂಘಟಿತ ಪ್ರಯತ್ನಗಳನ್ನು ಪ್ರಾರಂಭಿಸುತ್ತದೆ ಎಂದು ಪ್ರವಾಸೋದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.

“ಭಾರತದ G20 ಪ್ರೆಸಿಡೆನ್ಸಿ ಜೊತೆಗೆ ಭಾರತದ @75 ಆಜಾದಿ ಕಾ ಅಮೃತ್ ಮಹೋತ್ಸವದೊಂದಿಗೆ ವಿಸಿಟ್ ಇಂಡಿಯಾ ಇಯರ್ 2023 ಅಭಿಯಾನ ಭವ್ಯವಾದ ಆಚರಣೆಯಾಗಲಿದೆ. ವಿಸಿಟ್ ಇಂಡಿಯಾ 23 ರ ಗುರಿಯು 2023 ರ ಅಂತ್ಯದ ವೇಳೆಗೆ ಪ್ರವಾಸೋದ್ಯಮದ ಸಂಪೂರ್ಣ ಚೇತರಿಕೆಯನ್ನು ಸಾಧಿಸುವುದು, ಪ್ರವಾಸೋದ್ಯಮವನ್ನು ಒಗ್ಗೂಡಿಸುವುದು,  ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಅಮೋಘ ಆತಿಥ್ಯ ಮತ್ತು ಸಾಂಸ್ಕೃತಿಕ ಮತ್ತು ನೈಸರ್ಗಿಕ ಆಕರ್ಷಣೆಯನ್ನು ನೇರವಾಗಿ ಅನುಭವಿಸಲು ಸಜ್ಜಾಗುವುದು” ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರಿಯನ್ನು ಸಾಧಿಸಲು, ಸಚಿವಾಲಯವು ಇತರ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದೊಂದಿಗೆ ಪ್ರವಾಸೋದ್ಯಮ ಕ್ಷೇತ್ರವನ್ನು ಒಗ್ಗೂಡಿಸಲು ಮುಂದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top