News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಹ್ಯಾಕಾಶ ಪರಿಶೋಧನೆಗಾಗಿ 4 ಕಾರ್ಪೋರೇಟ್‌ ದಾಖಲೆಗಳಿಗೆ ಇಸ್ರೋ ಸಹಿ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಹಕರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಲ್ಕು ಕಾರ್ಪೋರೇಟ್‌ ದಾಖಲೆಗಳಿಗೆ ಸಹಿ ಮಾಡಿದೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಭಾರತದ ಚಂದ್ರಯಾನ-2 ಮತ್ತು ಚಂದ್ರಯಾನ-3ರಲ್ಲಿ ಯುಎಸ್‌ಎ ಉಪಕರಣಗಳನ್ನು ಅಳವಡಿಸಲು ಯುಎಸ್‌ಎ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಜಂಟಿ ಚಂದ್ರ ಧ್ರುವ ಪರಿಶೋಧನಾ ಕಾರ್ಯಾಚರಣೆಗಾಗಿ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಜಪಾನ್‌ನೊಂದಿಗಿನ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಭವಿಷ್ಯದ ಬಾಹ್ಯಾಕಾಶ ವಿಜ್ಞಾನ ಕಾರ್ಯಾಚರಣೆಗಳಲ್ಲಿ ಸಹಯೋಗಕ್ಕಾಗಿ ಕಾರ್ಯಸಾಧ್ಯತೆಯ ಅಧ್ಯಯನವನ್ನು ಯುಕೆ ಜೊತೆ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಡಾ.ಸಿಂಗ್ ಈ ವಿಷಯ ತಿಳಿಸಿದ್ದಾರೆ.

ಬಾಹ್ಯಾಕಾಶ ಇಲಾಖೆಯು ನೆರೆಯ ಸಣ್ಣ ದೇಶಗಳಿಗೆ ಮತ್ತು ವಿಶ್ವದ ಇತರ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ದೇಶಗಳಿಗೆ ಉಪಗ್ರಹ ಸೇವೆಗಳನ್ನು ಒಳಗೊಂಡಂತೆ ಬಾಹ್ಯಾಕಾಶ ವಿಜ್ಞಾನ-ಸಂಬಂಧಿತ ತಂತ್ರಜ್ಞಾನದಲ್ಲಿ ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಡಾ ಸಿಂಗ್ ಹೇಳಿದ್ದಾರೆ.

ಭಾರತ ಮತ್ತು ಭೂತಾನ್‌ ಇಂಡಿಯಾ-ಭೂತಾನ್‌ ಸ್ಯಾಟ್‌ ಅಭಿವೃದ್ಧಿಗೆ ಸಹಯೋಗ ಹೊಂದಿದೆ.  ಇದು  ISRO ಮತ್ತು APRS-Digipeater ನಿಂದ ಅಭಿವೃದ್ಧಿಪಡಿಸಲಾದ ಆಪ್ಟಿಕಲ್ ಇಮೇಜಿಂಗ್ ಪೇಲೋಡ್ ಆಗಿರುವ NanoMX ಅನ್ನು ಸಾಗಿಸುತ್ತದೆ. ಈ ವರ್ಷದ ನವೆಂಬರ್ 26 ರಂದು ಇಂಡಿಯಾ-ಭೂತಾನ್‌ ಸ್ಯಾಟ್‌ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top