News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ವರ್ಷಗಳ ನಂತರ ಚೆನ್ನೈ-ಜಾಫ್ನಾ ನಡುವೆ ವಿಮಾನ ಸೇವೆ ಪುನರಾರಂಭ

ನವದೆಹಲಿ:  ಭಾರತವು ಚೆನ್ನೈ ಮತ್ತು ಶ್ರೀಲಂಕಾದ ಜಾಫ್ನಾ ನಡುವಿನ ವಿಮಾನಯಾನ ಸೇವೆಗಳನ್ನು ಮೂರು ವರ್ಷಗಳ ನಂತರ ಪುನರಾರಂಭಿಸಿದೆ. ಎರಡೂ ರಾಷ್ಟ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ನಂತರ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಸಾಲದ ಹೊರೆಯಲ್ಲಿ ಸಿಲುಕಿರುವ ಶ್ರೀಲಂಕಾದ ರಾಷ್ಟ್ರದ ಪ್ರವಾಸೋದ್ಯಮ ವಲಯವನ್ನು ಮತ್ತೆ ಹಳಿಗೆ ಮರಳಿಸುವ ಆಶಯದೊಂದಿಗೆ ಇಂದು ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.

ನಗದು ಕೊರತೆಯಿರುವ ಶ್ರೀಲಂಕಾಕ್ಕೆ ಪ್ರವಾಸೋದ್ಯಮ ಕ್ಷೇತ್ರವು ವಿದೇಶಿ ವಿನಿಮಯ ಗಳಿಕೆಯ ಮುಖ್ಯ ಮೂಲವಾಗಿದೆ. ಆದರೆ, 2020 ರಲ್ಲಿ ಸಾಂಕ್ರಾಮಿಕ ರೋಗವು ಪ್ರವಾಸೋದ್ಯಮ ಕ್ಷೇತ್ರವನ್ನು ತೀವ್ರವಾಗಿ ದುರ್ಬಲಗೊಳಿಸಿತು. ಇದು ಶ್ರೀಲಂಕಾದ ಆರ್ಥಿಕ ಸಂಕಷ್ಟಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ವಿಮಾನಯಾನಗಳ ಪುನರಾರಂಭವು ನಗದು ಕೊರತೆಯಿರುವ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸೇವೆಗಳ ಪುನರಾರಂಭದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀಲಂಕಾ ಅಧಿಕಾರಿಗಳು, ಮೊದಲ ವಿಮಾನವು ಇಂದು ಬೆಳಿಗ್ಗೆ ಕನಿಷ್ಠ ಹದಿನಾಲ್ಕು ಪ್ರಯಾಣಿಕರೊಂದಿಗೆ ಜಾಫ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಹೇಳಿದ್ದಾರೆ.

ಶ್ರೀಲಂಕಾಕ್ಕೆ ಬಂದಿಳಿದವರು ಬಹುತೇಕ ಅಧಿಕಾರಿಗಳಾಗಿದ್ದು, ವಿಮಾನ ನಿಲ್ದಾಣದಲ್ಲಿ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶ್ರೀಲಂಕಾದ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸೇವೆಗಳ ಅಧ್ಯಕ್ಷ ಉಪುಲ್ ಧರ್ಮದಾಸ ಹೇಳಿದ್ದಾರೆ.

ಅಲಯನ್ಸ್ ಏರ್ ವಿಮಾನಗಳು ಎರಡು ನಗರಗಳ ನಡುವೆ ವಾರಕ್ಕೆ ನಾಲ್ಕು ಬಾರಿ ಕಾರ್ಯನಿರ್ವಹಿಸಲಿವೆ.

ಭಾರತದ ಕೊಡುಗೆಯೊಂದಿಗೆ ಜಾಫ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2019 ರ ಅಕ್ಟೋಬರ್‌ನಲ್ಲಿ ಪುನರಾಭಿವೃದ್ಧಿ ಮಾಡಲಾಗಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top