News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2027ರ ವೇಳೆಗೆ  6,000 MW ತಲುಪಲಿದೆ ಕೂಡಂಕುಳಂ ಪರಮಾಣು ಸ್ಥಾವರ ಸಾಮರ್ಥ್ಯ

ನವದೆಹಲಿ: ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಉಳಿದ ನಾಲ್ಕು ಘಟಕಗಳನ್ನು 2027 ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಪರಮಾಣು ಶಕ್ತಿ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ 1,000 MW ಸಾಮರ್ಥ್ಯದ ಘಟಕ 1 ಮತ್ತು 2 ಈಗಾಗಲೇ ಕಾರ್ಯಾಚರಣೆಯಲ್ಲಿದೆ ಮತ್ತು 4,000 MW ಸಾಮರ್ಥ್ಯದ ಉಳಿದ ನಾಲ್ಕು ಘಟಕಗಳು ನಿರ್ಮಾಣ ಹಂತದಲ್ಲಿವೆ.

ಅವುಗಳ ಕಾಮಗಾರಿ ಪೂರ್ಣಗೊಂಡ ನಂತರ, ಕೂಡಂಕುಳಂ ಸ್ಥಾವರದ ಒಟ್ಟು ಸಾಮರ್ಥ್ಯ 2027 ರ ವೇಳೆಗೆ  6,000 MW ಅನ್ನು ತಲುಪುವ ನಿರೀಕ್ಷೆಯಿದೆ.

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರವು (KKNPP) ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಕೇಂದ್ರಗಳಲ್ಲಿ ಒಂದಾಗಿದೆ. ಇದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೂಡಂಕುಳಂ ಎಂಬ ಪಟ್ಟಣದಲ್ಲಿದೆ. ಇದನ್ನು ರಷ್ಯಾ-ಭಾರತ ಅಂತರ-ಸರ್ಕಾರಿ ಒಪ್ಪಂದದ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿದೆ.  ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಮತ್ತು ರಷ್ಯಾದ ASE ಗ್ರೂಪ್ ಆಫ್ ಕಂಪನಿಗಳು, ರೋಸಾಟಮ್ ಸ್ಟೇಟ್ ಅಟಾಮಿಕ್ ಎನರ್ಜಿ ಕಾರ್ಪೊರೇಶನ್‌ನ ಎಂಜಿನಿಯರಿಂಗ್ ವಿಭಾಗ ನಿರ್ಮಿಸುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top