News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

21ನೇ ಶತಮಾನದಲ್ಲಿ ಭಾರತವು ನಿರ್ಣಾಯಕ ಪ್ರಭಾವ ಬೀರುತ್ತದೆ: ಜರ್ಮನ್‌ ವಿದೇಶಾಂಗ ಸಚಿವೆ

ನವದೆಹಲಿ: 21ನೇ ಶತಮಾನದಲ್ಲಿ, ವಿಶೇಷವಾಗಿ ಇಂಡೋ-ಪೆಸಿಫಿಕ್‌ನಲ್ಲಿ ಅಂತಾರಾಷ್ಟ್ರೀಯ ಕ್ರಮವನ್ನು ರೂಪಿಸುವಲ್ಲಿ ಭಾರತ ನಿರ್ಣಾಯಕ ಪ್ರಭಾವ ಬೀರುತ್ತದೆ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನಾಲೆನಾ ಬೇರ್‌ಬಾಕ್ ಅವರು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಗೆ ತನ್ನ ಎರಡು ದಿನಗಳ ಭೇಟಿಯನ್ನು ಅವರು ಇಂದು ಪ್ರಾರಂಭಿಸಿದರು.

ಕಳೆದ 15 ವರ್ಷಗಳಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಭಾರತವು ಪ್ರಭಾವಶಾಲಿಯಾಗಿದೆ ಎಂದು ಬೇರ್‌ಬಾಕ್ ವಿವರಿಸಿದ್ದಾರೆ .

“ಸಾಮಾಜಿಕ ಬಹುತ್ವ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವು ಆರ್ಥಿಕ ಅಭಿವೃದ್ಧಿ, ಶಾಂತಿ ಮತ್ತು  ಅಭಿವೃದ್ಧಿಗೆ ಎಂಜಿನ್ ಎಂಬುದನ್ನು ತೋರಿಸುತ್ತದೆ. ಮಾನವ ಹಕ್ಕುಗಳನ್ನು ಬಲಪಡಿಸುವುದರೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮ ಕಾರ್ಯವಾಗಿದೆ” ಎಂದು ಬೇರ್‌ಬಾಕ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯತಂತ್ರದ ಪಾಲುದಾರಿಕೆಯನ್ನು ಮೀರಿ ಭಾರತದೊಂದಿಗೆ ಆರ್ಥಿಕ ಮತ್ತು ಭದ್ರತಾ ನೀತಿ ಸಹಕಾರವನ್ನು ಬಲಪಡಿಸಲು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

“ಭಾರತಕ್ಕೆ ಭೇಟಿ ನೀಡುವುದು ವಿಶ್ವದ ಆರನೇ ಭಾಗಕ್ಕೆ ಭೇಟಿ ನೀಡಿದಂತೆ. ಮುಂದಿನ ವರ್ಷದ ಆರಂಭದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ” ಎಂದು ಅವರು ಹೇಳಿದರು.

“21ನೇ ಶತಮಾನದಲ್ಲಿ ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೆ ಅಂತರರಾಷ್ಟ್ರೀಯ ಕ್ರಮವನ್ನು ರೂಪಿಸುವಲ್ಲಿ ಭಾರತವು ನಿರ್ಣಾಯಕ ಪ್ರಭಾವ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top