News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೆಎನ್‌ಯು ಗೋಡೆಗಳ ಮೇಲೆ ಮತ್ತೆ ಬ್ರಾಹ್ಮಣ ವಿರೋಧಿ ಬರಹ

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಕೆಲವು ಕಿಡಿಗೇಡಿಗಳು ಮತ್ತೊಮ್ಮೆ ಬ್ರಾಹ್ಮಣ ಮತ್ತು ಬನಿಯಾ ವಿರೋಧಿ ಘೋಷಣೆಗಳನ್ನು ಗೋಡೆಗಳ ಮೇಲೆ ಬರೆದಿದ್ದಾರೆ.

“ಬ್ರಾಹ್ಮಣ, ಬನಿಯಾಗಳೇ ಶಾಖೆಗೆ ಹಿಂತಿರುಗಿ” ಎಂದು ಬರೆಯುವ ಮೂಲಕ ಕಿಡಿಗೇಡಿಗಳು ಎರಡು ಸಮುದಾಯಗಳ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಿಂದ ಹೊರಹೋಗುವಂತೆ ಹೇಳಿದ್ದಾರೆ.

ಎರಡು ಸಮುದಾಯಗಳನ್ನು ಗುರಿಯಾಗಿಸಿಕೊಂಡ ಈ ಘೋಷಣೆಯ ಜೊತೆ ಬೆದರಿಕೆಯನ್ನು ಕೂಡ ಹಾಕಲಾಗಿದೆ. ‘ಬ್ರಾಹ್ಮಣ, ಬನಿಯಾ ನಾವು ನಿಮಗಾಗಿ ಬರುತ್ತಿದ್ದೇವೆ” ಎಂದೂ ಬರೆಯಲಾಗಿದೆ.

ಗೋಡೆ ವಿರೂಪಗೊಳಿಸುವಿಕೆಯ ವಿರುದ್ಧ ವಿಶ್ವವಿದ್ಯಾಲಯದ ಆಡಳಿತದ ಎಚ್ಚರಿಕೆಯ ಹೊರತಾಗಿಯೂ ಘಟನೆ ನಡೆದಿದೆ. ಜೆಎನ್‌ಯು ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್ (ಎಸ್‌ಐಎಸ್) ನಲ್ಲಿನ ಗೋಡೆಗಳು ಮತ್ತು ಅಧ್ಯಾಪಕರ ಕೊಠಡಿಗಳ ಗೋಡೆಗಳ ಮೇಲೆ ಬೆಳಿಗ್ಗೆ ಈ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ.

“ಜೆಎನ್‌ಯು ಎಲ್ಲರಿಗೂ ಸೇರಿದೆ ಮತ್ತು ಸಮಾನತೆಯನ್ನು ಪ್ರತಿನಿಧಿಸುತ್ತದೆ. ಕ್ಯಾಂಪಸ್‌ನಲ್ಲಿ ಯಾವುದೇ ಹಿಂಸಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ನಾವು ಪುನರುಚ್ಚರಿಸುತ್ತೇವೆ” ಎಂದು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ ಉಪ ಕುಲಪತಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top