ಪಾಟ್ನಾ: ಬಿಹಾರದ ಮಾವೋವಾದಿ ಪೀಡಿತ ಜಮುಯಿ ಜಿಲ್ಲೆಯ ಚೋರ್ಮಾರಾ ಗ್ರಾಮದ ನಿವಾಸಿಗಳ ಬಹುಕಾಲದ ಕನಸು ಅಕ್ಷರಶಃ ನನಸಾಗುತ್ತಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಕಳೆದ ಗುರುವಾರ ಟಿವಿ ಅಳವಡಿಸಲಾಗಿದೆ.
43 ಇಂಚಿನ ಎಲ್ಇಡಿ ಟಿವಿ ಆನ್ ಮಾಡಿದಾಗ ಮಕ್ಕಳು ಸಂಭ್ರಮದಿಂದ ಕುಣಿದಾಡಿದರು ಮತ್ತು ಪುರುಷರು ಮತ್ತು ಮಹಿಳೆಯರು ಉತ್ಸಾಹದಿಂದ ಚಪ್ಪಾಳೆ ತಟ್ಟಿದ್ದಾರೆ. “ನಾವು ಮೊದಲ ಬಾರಿಗೆ ಟಿವಿಯನ್ನು ಪಡೆದುಕೊಂಡಿದ್ದೇವೆ. ಗ್ರಾಮದಲ್ಲಿ ಟೆಲಿವಿಷನ್ ಸೆಟ್ ಸ್ಥಾಪನೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಈಗ ನಾವು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ” ಎಂದು ” ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಮಾವೋವಾದಿಗಳ ಉಪಟಳ ತಡೆಯಲು ಇಲ್ಲಿ ನಿಯೋಜಿತರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳ ಉಪಕ್ರಮದಡಿ ಈ ಟಿವಿಯನ್ನು ತರಲಾಗಿದೆ.
ನಂಬಿಕೆ, ಅಭಿವೃದ್ಧಿ ಮತ್ತು ಭದ್ರತೆಯು ಉಗ್ರವಾದದಿಂದ ಪೀಡಿತ ನಿವಾಸಿಗಳ ಜೀವನದಲ್ಲಿ ಬದಲಾವಣೆಯನ್ನು ತರಬಹುದು, ಸಿಆರ್ಪಿಎಫ್ ಮತ್ತು ಜಿಲ್ಲಾ ಪೊಲೀಸರ ನಡುವಿನ ವರ್ಧಿತ ಸಮನ್ವಯದೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಅಲ್ಲಿನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಸಮಾಜದ ಮುಖ್ಯವಾಹಿನಿಯಿಂದ ಹಿಂದೆ ಸರಿದವರೆಲ್ಲರೂ ಮರಳಿ ಬರಬೇಕು, ಬ್ಯಾಂಕ್ ಸಾಲ ಪಡೆದು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶಗಳನ್ನು ಅನ್ವೇಷಿಸಬೇಕು. ಮಹಿಳೆಯರು ಸಹ ಜೀವನೋಪಾಯಕ್ಕಾಗಿ ಸ್ವಸಹಾಯ ಗುಂಪುಗಳನ್ನು ಪ್ರಾರಂಭಿಸಬಹುದು ಎಂದು ಗ್ರಾಮಸ್ಥರಿಗೆ ಹುರಿದುಂಬಿಸಿದ್ದಾರೆ.
ಮೂರು ವರ್ಷಗಳ ಹಿಂದಿನವರೆಗೂ ರಾಜ್ಯದಲ್ಲಿ ಎಡಪಂಥೀಯ ಉಗ್ರವಾದದ ಕೇಂದ್ರಬಿಂದುವಾಗಿದ್ದ ಬರ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಸ್ತುತ ಶಾಂತಿ ನೆಲೆಸಿದೆ. ಮುಖ್ಯವಾಗಿ ಆದಿವಾಸಿಗಳು ವಾಸಿಸುವ ಈ ಗ್ರಾಮವು ಕಾಡು ಮತ್ತು ಗುಡ್ಡಗಳಿಂದ ಆವೃತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.