News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಿಳಾ ಏಷ್ಯಾಕಪ್‌ ಟಿ20: ಫೈನಲ್‌ಗೆ ಲಗ್ಗೆ ಇಟ್ಟ ಭಾರತ ತಂಡ

ಸಿಲ್ಹೆಟ್: ಭಾರತದ ಮಹಿಳಾ ಕ್ರಿಕೆಟ್‌ ತಂಡ ಏಷ್ಯಾಕಪ್‌ ಟಿ20 ಕ್ರೀಡಾಕೂಟದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ನಲ್ಲಿ  ಥಾಯ್ಲೆಂಡ್ ತಂಡವನ್ನು 74 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಥಾಯ್ಲೆಂಡ್ ವಿರುದ್ಧದ ಸೆಮಿಫೈನಲ್ ಸ್ಪರ್ಧೆಯು  ಭಾರತಕ್ಕೆ ನೀರು ಕುಡಿದಷ್ಟೇ ಸುಲಭ  ಎಂದು ನಿರೀಕ್ಷಿಸಲಾಗಿತ್ತು ಮತ್ತು ಹಾಗೆ ಆಯಿತು. ಸುಲಲಿತವಾಗಿ ಥಾಯ್ಲೆಂಡಗ ಭಾರತಕ್ಕೆ ಶರಣಾಯಿತು.

ಭಾರತ ಮೊದಲು ಬ್ಯಾಟಿಂಗ್ ಮಾಡಿ ಆರು ವಿಕೆಟ್‌ಗೆ 148 ರನ್ ಗಳಿಸಿತು ಮತ್ತು ನಂತರ ಥಾಯ್ಲೆಂಡ್‌ನ್ನು 9 ವಿಕೆಟ್‌ಗೆ 74 ರನ್‌ಗಳಿಗೆ ಸೀಮಿತಗೊಳಿಸಿತು.

ಗುರಿ ಬೆನ್ನಟ್ಟಿದ ಥಾಯ್ಲೆಂಡ್ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಪ್ರತಿರೋಧ ತೋರಿಸಲ ಇಲ್ಲ.

ಆದರೆ, ಥಾಯ್ ಮಹಿಳೆಯರು ಲೀಗ್ ಹಂತದಲ್ಲಿ ಭಾರತದ ವಿರುದ್ಧ ಆಡಿದ್ದಕ್ಕಿಂತ ಉತ್ತಮ ಪ್ರದರ್ಶನವನ್ನು ಸೆಮಿಫೈನಲ್‌ನಲ್ಲಿ ನೀಡಿದ್ದಾರೆ.

ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ಇಂದು ಮುಖಾಮುಖಿಯಾಗಲಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top